Asia cup 2023: ಸೆಮಿಓಫೈನಲ್‌ನ ಮಹತ್ವ ಪಡೆದುಕೊಂಡ ಈ ಪಂದ್ಯ: ಇಲ್ಲಿ ಗೆದ್ದೋರು ಫೈನಲ್ಸ್‌ಗೆ
ಪಾಕಿಸ್ತಾನ ತಂಡದ ವಿರುದ್ಧ ಗೆದ್ದ ಬಳಿಕ ಶ್ರೀಲಂಕಾವನ್ನು ಕೂಡ ಟೀಮ್ ಇಂಡಿಯಾ ಸೋಲಿಸಿದ್ದು ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ಸ್‌ಗೆ ಪ್ರವೇಶ ಪಡೆದುಕೊಂಡಿದೆ. ಆದರೆ ಈಗ ಮತ್ತೊಂದು ಸ್ಥಾನಕ್ಕೆ ತೀವಬ್ರ ಪೈಪೋಟಿ ಏರ್ಪಟ್ಟಿದೆ. ಸೂಪರ್ 4 ಹಂತದಲ್ಲಿ ಭಾರತವನ್ನು ಹೊರತುಪಡಿಸಿ ಮೂರು ತಂಡಗಳಿದ್ದು ಈ ಪೈಕಿ ಒಂದು ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ. ಆ ಒಂದು ಪಂದ್ಯವೇ ಫೈನಲ್‌ನ್ಲಲಿ ಸ್ಥಾನ ಪಡೆದುಕೊಳ್ಳುವ ಮತ್ತೊಂದು ತಂಡವನ್ನು ನಿರ್ಧರಿಸಲಿದೆ.
ಸೂಪರ್ 4 ಹಂತದಲ್ಲಿ ಭಾರತ ತನ್ನ ಕೊನೆಯ ಪಂದ್ಯವನ್ನು ಸೆಪ್ಟೆಂಬರ್ 15ರಂದು ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಭಾರತ ಫೈನಲ್ ಟಿಕೆಟ್ ಖಚಿತವಾಗಿರುವ ಕಾರಣ ಭಾರತಕ್ಕೆ ಈ ಪಂದ್ಯ ಮಹತ್ವವಿಲ್ಲ. ಇನ್ನು ಬಾಂಗ್ಲಾದೇಶ ತಂಡ ಫೈನಲ್ ಸ್ಪರ್ಧೆಯಿಂದ ಹೊರಬಿದ್ದಾಗಿದೆ. ಹಾಗಾಗಿ ಆ ತಂಡ ಕೊನೆಯ ಒಣದು ಗೆಲುವಿಗಾಗಿ ಮಾತ್ರವೇ ಇಲ್ಲಿ ಸೆಣೆಸಾಡಲಿದೆ.

ಗುರುವಾರದ ಪಂದ್ಯ ನಿರ್ಣಾಯಕ
ಇನ್ನು ಗುರುವಾರ ನಡೆಯಲಿರುವ ಪಂದ್ಯ ಫೈನಲ್‌ನಲ್ಲಿ ಭಾರತ ತಂಡವನ್ನು ಎದುರಿಸುವ ತಂಡವನ್ನು ನಿರ್ಧರಿಸಲಿದೆ ಎನ್ನುವುದು ನಿಶ್ಚಿತ. ಪಾಕಿಸ್ತಾನ ಹಾಗೂ ಶ್ರೀಲಂಕಾ ಎರಡು ತಂಡಗಳಿಗೂ ಇದು ಲೀಗ್ ಹಂತದ ಕೊನೆಯ ಪಂದ್ಯವಾಗಿದೆ. ಇಲ್ಲಿ ಗೆಲುವು ಸಾಧಿಸಿದ ತಂಡ ಲೀಗ್ ಹಂತದಲ್ಲಿ 4 ಅಂಕಗಳನ್ನು ಪಡೆದುಕೊಳ್ಳಲಿದ್ದು ಈ ಮೂಲಕ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಳ್ಳಲಿದೆ.
ಪಾಕಿಸ್ತಾನದ ಸ್ಥಿತಿ ಹೇಗಿದೆ?
ಪಾಕಿಸ್ತಾನ ತಂಡ ಸೂಪರ್ 4 ಹಂತದ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಗೆದ್ದು ಭರ್ಜರಿ ಆರಂಭವನ್ನು ಪಡೆದುಕೊಂಡಿತ್ತು. ಆದರೆ ನಂತರದ ಪಂದ್ಯದಲ್ಲಿ ಭಾರತದ ವಿರುದ್ಧ ಭಾರೀ ಅಂತರದಿಂದ ಹೀನಾಯ ಸೋಲು ಕಂಡಿದೆ. ಈ ಸೋಲು ಪಾಲಕ್ ಪಡೆಗೆ ಭಾರೀ ಆಘಾತ ನೀಡಿದೆ. ಹೀಗಾಗಿ ಸೂಪರ್ 4 ಹಂತದ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳನ್ನು ಈಗಾಗಲೇ ಮುಗಿಸಿದ್ದರೂ ಎರಡು ಅಂಕಗಳು ಮಾತ್ರವೇ ಪಾಕಿಸ್ತಾನದ ಜೊತೆಯಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಯಾವಿದೇ ಅಂತರದಿಂದ ಗೆದ್ದರೂ ಪಾಕಿಸ್ತಾನ ಫೈನಲ್‌ಗೆ ಪ್ರವೇಶ ಪಡೆಯಲಿದೆ.
ಶ್ರೀಲಂಕಾಗೆ ಇರುವ ಅವಕಾಶವೇನು?
ಇನ್ನು ಶ್ರೀಲಂಕಾ ತಂಡ ಕೂಡ ಪಾಕಿಸ್ತಾನದ ಸ್ಥಿತಿಯಲ್ಲಿಯೇ ಇದೆ. ಪಾಕಿಸ್ತಾನದ ರೀತಿಯಲ್ಲಿಯೇ ಲಂಕಾ ತಂಡ ಕೂಡ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಿ ಗೆಲುವು ಸಾಧಿಸಿತ್ತು. ಆದರೆ ಭಾರತದ ವಿರುದ್ಧದ ಎರಡನೇ ಪಂದ್ಯದಲ್ಲಿ ಸೋಲು ಕಂಡಿದೆ. ಹೀಗಾಗಿ ಲಂಕಾ ಖಾತೆಯಲ್ಲಿಯೂ ಈಗ ಕೇವಲ ಎರಡು ಅಂಕಗಳಿವೆ. ಪಾಕ್ ವಿರುದ್ಧ ಗೆದ್ದು ಫೈನಲ್‌ಗೇರುವ ಲೆಕ್ಕಾಚಾರದಲ್ಲಿದೆ ದಾಸುನ್ ಶನಕ ಪಡೆ.
ಭಾನುವಾರ ನಡೆಯಲಿದೆ ಫೈನಲ್ ಪಂದ್ಯ
ಇನ್ನು ಏಷ್ಯಾಕಪ್ ಟೂರ್ನಿಯಲ್ಲಿ ಭಾನುವಾರ ಫೈನಲ್ ಪಂದ್ಯ ಆಯೋಜನೆಯಾಗಲಿದೆ. ಭಾರತ ತಂಡ ಮಾತ್ರವೇ ಈ ಹಂತದಲ್ಲಿ ಫೈನಲ್‌ಗೆ ಪ್ರವೇಸ ಪಡೆದುಕೊಂಡಿರುವ ತಂಡವಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಶ್ರೀಲಂಕಾ ಹಾಲಿ ಚಾಂಪಿಯನ್ ಆಗಿದ್ದು ತವರಿನ ಲಾಭವೂ ಅದಕ್ಕಿದೆ. ಮತ್ತೊಂದೆಡೆ ಪಾಕಿಸ್ತಾನ ತಂಡ ಬಲಿಷ್ಠ ತಂಡ ಎನಿಸಿಕೊಂಡಿದ್ದು ಫೈನಲ್‌ಗೇರುವ ನೆಚ್ಚಿನ ತಂಡವಾಗಿದೆ. ಶ್ರೀಲಂಕಾದ ಕೊಲಂಬೋದಲ್ಲಿಯೇ ಈ ಪಂದ್ಯವೂ ನಡೆಯಲಿದ್ದು ಕುತೂಗಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications