IND vs PAK Asia Cup 2023 Tickets: ಏಷ್ಯಾಕಪ್ ಹೈ-ವೋಲ್ಟೇಜ್ ಪಂದ್ಯದ ಟಿಕೆಟ್ ಮಾರಾಟ; ಖರೀದಿ ಹೇಗೆ?
ಮುಂಬರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಅತಿದೊಡ್ಡ ಸೆಣಸಾಟದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ಮುಖಾಮುಖಿಯಾಗಲಿವೆ.
ಇದೀಗ ಗುರುವಾರ, ಆಗಸ್ಟ್ 17ರಂದು 2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್ ಮಾರಾಟ ಮಾಡಲಾಗುತ್ತದೆ.

2023ರ ಏಷ್ಯಾ ಕಪ್ ಟೂರ್ನಿಯ ಪಾಕಿಸ್ತಾನದಲ್ಲಿ ನಡೆಯುವ ಪಂದ್ಯಗಳ ಟಿಕೆಟ್ ಮಾರಾಟವು ಈಗಾಗಲೇ ಪ್ರಾರಂಭವಾಗಿದೆ. ಶ್ರೀಲಂಕಾದಲ್ಲಿ ನಡೆಯುವ ಪಂದ್ಯಗಳ ಟಿಕೆಟ್‌ಗಳ ಮಾರಾಟವು ಆಗಸ್ಟ್ 17ರಂದು ಗುರುವಾರ ಪಾಕಿಸ್ತಾನ ಕಾಲಮಾನ ಮಧ್ಯಾಹ್ನ 12.30ರಿಂದ ಆರಂಭವಾಗಲಿದೆ.
"2023ರ ಎಸಿಸಿ ಪುರುಷರ ಏಷ್ಯಾ ಕಪ್ ಟೂರ್ನಿಯ ಆಯೋಜಕ ದೇಶವಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪಂದ್ಯಾವಳಿಯ ಶ್ರೀಲಂಕಾ ಆವೃತ್ತಿಯ ಪಂದ್ಯದ ಟಿಕೆಟ್‌ಗಳ ಮಾರಾಟವನ್ನು ಘೋಷಿಸಲು ಸಂತೋಷವಾಗಿದೆ. ಶ್ರೀಲಂಕಾ ಆವೃತ್ತಿಯ ಮೊದಲ ಹಂತದ ಟಿಕೆಟ್‌ಗಳು ಆಗಸ್ಟ್ 17ರಂದು ಪಾಕಿಸ್ತಾನ ಕಾಲಮಾನ ಮಧ್ಯಾಹ್ನ 12ರಿಂದ ಮಾರಾಟವಾಗಲಿದೆ," ಎಂದು ಪಿಸಿಬಿ ತಿಳಿಸಿದೆ.
ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು pcb.bookme.pk ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧಿಕೃತ ಸಾಮಾಜಿಕ ಮಾಧ್ಯಮ ಚಾನೆಲ್‌ಗಳ ಮೂಲಕ ಪ್ರಕಟಣೆಯನ್ನು ಮಾಡಲಾಗುವುದು ಎಂದಿದೆ.
"ಶ್ರೀಲಂಕಾ ಲೆಗ್‌ನ ಎರಡನೇ ಹಂತದ ಟಿಕೆಟ್ ಮಾರಾಟವು ಆಗಸ್ಟ್ 17ರಂದು ಪಾಕಿಸ್ತಾನ ಕಾಲಮಾನ ಸಂಜೆ 6:30ಕ್ಕೆ ಪ್ರಾರಂಭವಾಗುತ್ತದೆ. ಈ ಎರಡನೇ ಹಂತದ ಟಿಕೆಟ್ ಮಾರಾಟದಲ್ಲಿ ಸೆಪ್ಟೆಂಬರ್ 2ರಂದು ಪಾಕಿಸ್ತಾನ ಮತ್ತು ಭಾರತ ನಡುವಿನ ಬಹುನಿರೀಕ್ಷಿತ ಪಂದ್ಯವು ಳಗೊಂಡಿರುತ್ತದೆ," ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ಸೇರಿಸಿದೆ.
ಪಾಕಿಸ್ತಾನದಲ್ಲಿ 4 ಪಂದ್ಯಗಳು ನಡೆಯಲಿದ್ದರೆ, ಶ್ರೀಲಂಕಾದಲ್ಲಿ ಫೈನಲ್ ಸೇರಿದಂತೆ ಒಟ್ಟು ಒಂಬತ್ತು ಪಂದ್ಯಗಳು ನಡೆಯಲಿವೆ. ಆಗಸ್ಟ್ 31ರಂದು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ತಂಡವು ಆತಿಥೇಯ ತಂಡವನ್ನು ಎದುರಿಸುವುದರೊಂದಿಗೆ ಶ್ರೀಲಂಕಾ ಆವೃತ್ತಿ ಆರಂಭವಾಗಲಿದೆ.
ಭಾರತ ಮತ್ತು ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯಕ್ಕೆ ಪ್ರತಿ ಪ್ರೇಕ್ಷಕನಿಗೆ ಒಟ್ಟು 2 ಟಿಕೆಟ್‌ಗಳು ಲಭ್ಯವಿರುತ್ತವೆ ಮತ್ತು ಅಭಿಮಾನಿಗಳು ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್ ಪ್ರತಿಯನ್ನು ಒದಗಿಸಬೇಕಾಗುತ್ತದೆ ಎಂದು ಪಿಸಿಬಿ ಪ್ರಕಟಣೆಯಲ್ಲಿ ಪ್ರಕಟಿಸಿದೆ. ಎಲ್ಲಾ ಇತರ ಪಂದ್ಯಗಳಿಗೆ, ಪ್ರತಿ ಅಭಿಮಾನಿಯು 4 ಟಿಕೆಟ್‌ಗಳನ್ನು ಖರೀದಿಸಬಹುದು.
ಕಳೆದ ವಾರ, 2023ರ ಏಷ್ಯಾ ಕಪ್‌ನ ಪಾಕಿಸ್ತಾನದ ಪಂದ್ಯಗಳ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಆತಿಥೇಯ ಪಾಕಿಸ್ತಾನವು ಆಗಸ್ಟ್ 30ರಂದು ನೇಪಾಳ ತಂಡವನ್ನು ಎದುರಿಸುವ ಮೂಲಕ ಮುಲ್ತಾನ್‌ನಲ್ಲಿ ಪಂದ್ಯಾವಳಿಯು ಪ್ರಾರಂಭವಾಗಲಿದೆ.
2023ರ ಏಷ್ಯಾ ಕಪ್ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲಾಗುತ್ತದೆ. ರೋಹಿತ್ ಶರ್ಮಾ ನಾಯಕತ್ವದ ಭಾರತದ ಎಲ್ಲಾ ಪಂದ್ಯಗಳು ಮತ್ತು ಫೈನಲ್ ಪಂದ್ಯ ಸೇರಿದಂತೆ ಒಟ್ಟು ಒಂಬತ್ತು ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.
ಭಾರತ ತಂಡವು ಎ ಗುಂಪಿನಲ್ಲಿದ್ದು, ಇದು ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಮತ್ತು ನೇಪಾಳ ತಂಡಗಳನ್ನು ಒಳಗೊಂಡಿದೆ. ಇನ್ನು ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಒಳಗೊಂಡಿವೆ.
ಸೂಪರ್ 4 ಹಂತದ ಪಂದ್ಯಗಳು ಸೆಪ್ಟೆಂಬರ್ 6ರಂದು ಲಾಹೋರ್‌ನಲ್ಲಿ ಆಯಾ ಗುಂಪುಗಳಲ್ಲಿನ A1 ಮತ್ತು B2 ತಂಡಗಳ ನಡುವೆ ಘರ್ಷಣೆಯೊಂದಿಗೆ ಪ್ರಾರಂಭವಾಗುತ್ತವೆ. ಉಳಿದ ಪಂದ್ಯಗಳು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿವೆ. ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications