Asia Cup 2023: ಪಾಕಿಸ್ತಾನ vs ನೇಪಾಳ ಪಂದ್ಯದ ವಿವರ, ಆಡುವ 11ರ ಬಳಗ; ಟಿವಿ, ಲೈವ್ ಸ್ಟ್ರೀಮಿಂಗ್ ಮಾಹಿತಿ
ಇಂದು (ಬುಧವಾರ, ಆಗಸ್ಟ್ 30) ಮುಲ್ತಾನ್‌ನಲ್ಲಿ ನಡೆಯುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ಪ್ರವಾಸಿ ನೇಪಾಳ ತಂಡಗಳು ಸೆಣಸಾಡಲಿವೆ.
ಈ ಪಂದ್ಯದಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಗೆಲ್ಲುವ ನೆಚ್ಚಿನ ತಂಡವಾಗಿದೆ. ಈವರೆಗೆ ನೇಪಾಳ ಮತ್ತು ಪಾಕಿಸ್ತಾನ ತಂಡಗಳು ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪರಸ್ಪರ ಆಡಿಲ್ಲ. ಹೀಗಾಗಿ ಇದು ಉಭಯ ತಂಡಗಳಿಗೆ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ ಎಂಬುದು ಗಮನಾರ್ಹ.

ನೇಪಾಳ ತಂಡವನ್ನು ಸುಲಭವಾಗಿ ಸೋಲಿಸುವ ಸಾಧ್ಯತೆ ಹೆಚ್ಚಿದ್ದರೂ, ಈ ಪಂದ್ಯಾವಳಿಯನ್ನು ಅತ್ಯುತ್ತಮವಾಗಿ ಆರಂಭಿಸಲು ಪಾಕಿಸ್ತಾನ ತಂಡಕ್ಕೆ ಉತ್ತಮ ಅವಕಾಶವನ್ನು ನೀಡುತ್ತದೆ. ಪಂದ್ಯಕ್ಕೆ ಒಂದು ದಿನ ಮೊದಲೇ ಪಾಕಿಸ್ತಾನ ತನ್ನ ಆಡುವ 11ರ ಬಳಗವನ್ನು ಪ್ರಕಟಿಸಿದೆ.
ಮೆನ್ ಇನ್ ಬ್ಲ್ಯೂ ಮಾರಕ ಬೌಲಿಂಗ್ ವಿಭಾಗವನ್ನು ಹೊಂದಿರುವುದಲ್ಲದೆ, ತಂಡದ ಫೀಲ್ಡಿಂಗ್ ಕೂಡ ಗುಣಮಟ್ಟದಲ್ಲಿದೆ. ಇನ್ನು ಪಾಕಿಸ್ತಾನ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿರುವುದರಲ್ಲಿ ಎರಡು ಮಾತಿಲ್ಲ.
ಇತರ ತಂಡಗಳಿಗಿಂತ ಭಿನ್ನವಾಗಿ, ಪಾಕಿಸ್ತಾನ ತಂಡ ತಮ್ಮ ಆಡುವ 11ರ ಬಳಗದ ಬಗ್ಗೆ ಹೆಚ್ಚಿನ ಸ್ಪಷ್ಟಯಲ್ಲಿದೆ. ಭಾರತ ತಂಡ ಕೆಲವು ಗಾಯಗೊಂಡ ಆಟಗಾರರನ್ನು ವಾಪಸ್ ಕರೆತಂದಿದೆ.

ಸೆಪ್ಟೆಂಬರ್ 2ರಂದು ಪಾಕಿಸ್ತಾನ ವಿರುದ್ಧ ಹೈ-ವೋಲ್ಟೇಜ್ ಪಂದ್ಯದಲ್ಲಿ ಮೊದಲ ಆಯ್ಕೆಯ ಆಡುವ 11ರ ಬಳಗದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬುದರ ಕುರಿತು ಭಾರತ ತಂಡಕ್ಕೆ ಇನ್ನೂ ಸ್ಪಷ್ಟತೆ ಇಲ್ಲ.
ಇದೇ ವೇಳೆ ಶ್ರೀಲಂಕಾ ತಂಡದ ಶಿಬಿರದಲ್ಲಿ ಆಟಗಾರರು ಕೋವಿಡ್ ಸೋಕಿನೊಂದಿಗೆ ಹೋರಾಡುತ್ತಿದ್ದಾರೆ. ಸ್ಟಾರ್ ಆಲ್‌ರೌಂಡರ್ ವನಿಂದು ಹಸರಂಗ ಸೇರಿದಂತೆ ಅವರ ಕೆಲವು ದೊಡ್ಡ ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ.
ತಮ್ಮ ಇಬ್ಬರು ಸ್ಟಾರ್ ಕ್ರಿಕೆಟಿಗರಾದ ನೇಪಾಳ ತಂಡದ ನಾಯಕ ರೋಹಿತ್ ಪೌಡೆಲ್ ಮತ್ತು ಲೆಗ್ ಸ್ಪಿನ್ನರ್ ಸಂದೀಪ್ ಲುಮಿಶ್ಚಾನೆ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದ್ದಾರೆ. ರೋಹಿತ್ ಪೌಡೆಲ್ 2021ರಿಂದ ಏಕದಿನ ಪಂದ್ಯಗಳಲ್ಲಿ 1,383 ರನ್ ಗಳಿಸಿದ್ದು, ಇದು ಬಾಬರ್ ಅಜಂ ನಂತರ ಎರಡನೇ ಅತಿ ಹೆಚ್ಚಿನ ರನ್ ಆಗಿದೆ.
ಇನ್ನು ಸಂದೀಪ್ ಲುಮಿಶ್ಚಾನೆ 2021ರಿಂದ 88 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದು ಉಭಯ ತಂಡಗಳ ನಡುವೆ ಯಾವುದೇ ಬೌಲರ್‌ನಿಂದ ಹೆಚ್ಚಾಗಿದೆ. ನೇಪಾಳ ತಂಡವು ಟಾಸ್ ಗೆಲ್ಲಲು ಎದುರು ನೋಡುತ್ತಿದೆ ಮತ್ತು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ನೇಪಾಳ ತಮ್ಮ ಬೌಲರ್‌ಗಳಿಗೆ ಹೆಚ್ಚಿನ ಸಮಯವನ್ನು ನೀಡುತ್ತಾರೆ ಮತ್ತು ಪಾಕಿಸ್ತಾನ ಬ್ಯಾಟರ್‌ಗಳಿಗೆ ಸವಾಲು ಹಾಕುತ್ತಾರೆ.
ಪಾಕಿಸ್ತಾನ ತಂಡವು ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಅವರ ರೂಪದಲ್ಲಿ ಮೂವರು ಅಪಾಯಕಾರಿ ವೇಗಿಗಳನ್ನು ಹೊಂದಿರುವುದರಿಂದ, ನೇಪಾಳ ತಮ್ಮ ಬ್ಯಾಟಿಂಗ್‌ನ ವಿಭಾಗದಲ್ಲಿ ಜಾಗ್ರತೆ ವಹಿಸಬೇಕಿದೆ.
ಏಷ್ಯಾ ಕಪ್ 2023: ಪಾಕಿಸ್ತಾನ vs ನೇಪಾಳ ಪಂದ್ಯದ ವಿವರ
ಸ್ಥಳ ಮತ್ತು ದಿನಾಂಕ: 2023ರ ಏಷ್ಯಾ ಕಪ್ ಪಂದ್ಯಾವಳಿಯ ಪಾಕಿಸ್ತಾನ vs ನೇಪಾಳ ಪಂದ್ಯವು ಬುಧವಾರ, ಆಗಸ್ಟ್ 30ರಂದು ಮುಲ್ತಾನ್‌ನಲ್ಲಿ ನಡೆಯಲಿದೆ.
ಪಂದ್ಯದ ಸಮಯ: ಪಾಕಿಸ್ತಾನ ಮತ್ತು ನೇಪಾಳ ನಡುವಿನ ಪಂದ್ಯವು ಬುಧವಾರ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗುತ್ತದೆ.
ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ: ಪಾಕಿಸ್ತಾನ ಮತ್ತು ನೇಪಾಳ ಪಂದ್ಯವು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ ಮತ್ತು ಹಾಟ್‌ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಆಗಿ ವೀಕ್ಷಿಸಬಹುದು.
ಏಷ್ಯಾ ಕಪ್ 2023: ನೇಪಾಳ ವಿರುದ್ಧ ಪಾಕಿಸ್ತಾನದ ಆಡುವ 11ರ ಬಳಗ
ಇಮಾಮ್-ಉಲ್-ಹಕ್, ಫಖರ್ ಜಮಾನ್, ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಅಘಾ, ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ನವಾಜ್, ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications