ಏಷ್ಯಾ ಕಪ್ 2023: ರೋಹಿತ್ ನಾಯಕತ್ವದ 17 ಸದಸ್ಯರ ನೇಪಾಳ ತಂಡ ಪ್ರಕಟ; ಭಾರತ, ಪಾಕ್ ವಿರುದ್ಧ ಪೈಪೋಟಿ
ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಗೆ ಆಲ್‌ರೌಂಡರ್ ರೋಹಿತ್ ಪೌಡೆಲ್ ನಾಯಕತ್ವದ 17 ಸದಸ್ಯರ ನೇಪಾಳ ತಂಡವನ್ನು ಸೋಮವಾರ, ಆಗಸ್ಟ್ 14ರಂದು ಪ್ರಕಟಿಸಲಾಗಿದೆ.
ನೇಪಾಳ ತಂಡದ ಮಾಜಿ ನಾಯಕ ಹಾಗೂ ದೆಹಲಿ ಕ್ಯಾಪಿಟಲ್ಸ್‌ನ ಮಾಜಿ ಸ್ಪಿನ್ನರ್ ಸಂದೀಪ್ ಲುಮಿಚ್ಚಾನೆ ಅವರನ್ನು ಸಹ ತಂಡದಲ್ಲಿ ಆಯ್ಕೆ ಮಾಡಲಾಗಿದೆ.
ಶ್ರೀಲಂಕಾ ಮತ್ತು ಪಾಕಿಸ್ತಾನ ಜಂಟಿಯಾಗಿ ಆಯೋಜಿಸುವ ಏಕದಿನ ಏಷ್ಯಾ ಕಪ್ ಪಂದ್ಯಾವಳಿಗೆ ತನ್ನ ತಂಡವನ್ನು ನೇಪಾಳ ಕ್ರಿಕೆಟ್ ಅಸೋಸಿಯೇಷನ್ (ಸಿಎಎನ್) ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರಕಟಿಸಿತು.

ನೇಪಾಳ ತಂಡವು ಪಾಕಿಸ್ತಾನದಲ್ಲಿ ಒಂದು ವಾರದ ಪೂರ್ವಸಿದ್ಧತಾ ಶಿಬಿರಕ್ಕೆ ಒಳಗಾಗಲಿದೆ ಎಂದು ನೇಪಾಳ ಕ್ರಿಕೆಟ್ ಅಸೋಸಿಯೇಷನ್ ಹೇಳಿದ್ದು, ಅಲ್ಲಿ ಪಿಸಿಬಿ ನಿಗದಿಪಡಿಸಿದ ತಂಡಗಳ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಪ್ರತಿಷ್ಠಿತ 2023ರ ಏಷ್ಯಾ ಕಪ್ ಪಂದ್ಯಾವಳಿಯು ಆಗಸ್ಟ್ 30ರಿಂದ ಸೆಪ್ಟೆಂಬರ್ 17ರವರೆಗೆ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಇದರಲ್ಲಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳ ತಂಡಗಳನ್ನೊಳಗೊಂಡ ಆರು ತಂಡಗಳ ಸ್ಪರ್ಧೆಯಾಗಿದೆ.
ನೇಪಾಳ ತಂಡವು ಬಲಿಷ್ಠ ಭಾರತ ಮತ್ತು ಪಾಕಿಸ್ತಾನ ತಂಡಗಳೊಂದಿಗೆ ಎ ಗುಂಪಿನಲ್ಲಿ ಸೇರಿಕೊಂಡಿದೆ. ಸೆಪ್ಟೆಂಬರ್ 4ರಂದು ಕ್ಯಾಂಡಿಯಲ್ಲಿ ಭಾರತ ವಿರುದ್ಧ ಆಡುವ ಮೊದಲು ಮುಲ್ತಾನ್‌ನಲ್ಲಿ ಆಗಸ್ಟ್ 30ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ವಿರುದ್ಧ ತನ್ನ ಆರಂಭಿಕ ಪಂದ್ಯವನ್ನು ಆಡುತ್ತದೆ.
ಏಷ್ಯಾ ಕಪ್ ಪಂದ್ಯಾವಳಿಯನ್ನು ಏಕದಿನ ಅಂತಾರಾಷ್ಟ್ರೀಯ ಸ್ವರೂಪದಲ್ಲಿ ಆಡಲಾಗುತ್ತದೆ ಮತ್ತು ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ 2023ರ ಐಸಿಸಿ ವಿಶ್ವಕಪ್‌ಗೆ ಮುಂಚಿತವಾಗಿ ಏಷ್ಯನ್ ತಂಡಗಳಿಗೆ ಪೂರ್ವ ತಯಾರಿಯಾಗಿರಲಿದೆ.
ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ 7 ಬಾರಿ ಚಾಂಪಿಯನ್ ಆಗಿದ್ದರೆ, ಶ್ರೀಲಂಕಾ ಆರು ಬಾರಿ ಮತ್ತು ಪಾಕಿಸ್ತಾನ ಎರಡು ಬಾರಿ ಚಾಂಪಿಯನ್ ಆಗಿವೆ. ಶ್ರೀಲಂಕಾ ಹಾಲಿ ಚಾಂಪಿಯನ್ ಆಗಿದ್ದು, ಈ ಪಂದ್ಯಾವಳಿಯಲ್ಲಿ ನೇಪಾಳ ಚೊಚ್ಚಲ ಬಾರಿಗೆ ಆಡುತ್ತಿದೆ.
2023ರ ಏಷ್ಯಾ ಕಪ್ ಪಂದ್ಯಾವಳಿಗೆ ನೇಪಾಳ ತಂಡ
ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ಭೀಮ್ ಶಾರ್ಕಿ, ಕುಶಾಲ್ ಮಲ್ಲಾ, ಆರಿಫ್ ಶೇಖ್, ದೀಪೇಂದ್ರ ಸಿಂಗ್ ಐರಿ, ಗುಲ್ಶನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲುಮಿಚ್ಚಾನೆ, ಲಲಿತ್ ರಾಜ್ಬನ್ಶಿ, ಪ್ರತೀಶ್ ಜಿಸಿ, ಶ್ಯಾಮ್ ಧಾಕಲ್, ಸಂದೀಪ್ ಜೋರಾ, ಕಿಶೋರ್ ಮಹತೋ, ಅರ್ಜುನ್ ಸೌದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications