Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

asia up 2025: ನಡೆಯುವ ಸ್ಥಳ, ತಂಡಗಳು, ಸಮಯ, ನೇರ ಪ್ರಸಾರದ ಸಂಪೂರ್ಣ ಮಾಹಿತಿ

ಮಂಗಳವಾರದಿಂದ ಯುಎಇನಲ್ಲಿ ಏಷ್ಯಾ ಕಪ್‌ ಟಿ20 ಟೂರ್ನಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಂಗ್‌ ಕಾಂಗ್‌ ಹಾಗೂ ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಭಾರತ ಟಿ20 ವಿಶ್ವಕಪ್‌ ಬಳಿಕ ದೊಡ್ಡ ಇವೆಂಟ್‌ನಲ್ಲಿ ಭಾಗವಹಿಸುತ್ತಿದೆ. ಟೀಮ್ ಇಂಡಿಯಾ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡ ಎಂದು ಪರಿಗಣಿಸಲಾಗುತ್ತಿದೆ.

ಈ ಪ್ರತಿಷ್ಠಿತ ಟೂರ್ನಿಗೆ ಈಗಾಗಲೇ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದು, ಎಲ್ಲರ ಚಿತ್ತ ಭಾರತ ತಂಡದ ಮೇಲೆ ನೆಟ್ಟಿದೆ. ಟೀಮ್ ಇಂಡಿಯಾಕ್ಕೆ ಒಂದು ವರ್ಷದ ಬಳಿಕ ಸ್ಟಾರ್ ಆಟಗಾರ ಶುಭಮನ್ ಗಿಲ್ ಉಪನಾಯಕಾರಿ ಎಂಟ್ರಿ ಪಡೆದಿದ್ದಾರೆ. ಇನ್ನು ಯಾರ್ಕರ್ ಸ್ಪೇಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಎದುರಾಳಿಗಳನ್ನು ಕಾಡಲು ಸಿದ್ಧರಾಗಿದ್ದಾರೆ. ಏಷ್ಯಾ ಕಪ್‌ ಟಿ20 ಟೂರ್ನಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Asia Cup 2025 Full Details of Venue Teams Time and Live Broadcast

- ಏಷ್ಯಾ ಕಪ್‌ನಲ್ಲಿ ಎಷ್ಟು ತಂಡಗಳು ಭಾಗವಹಿಸಲಿವೆ?
8 ತಂಡಗಳು ಭಾಗವಹಿಸಲಿದ್ದು, 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ

- ಯಾವ ಗುಂಪಿನಲ್ಲಿ ಭಾರತ ಸ್ಥಾನ ಪಡೆದಿದೆ?
ಎ ಗುಂಪು: ಭಾರತ, ಪಾಕಿಸ್ತಾನ, ಓಮನ್‌, ಯುಎಇ,
ಬಿ ಗುಂಪು: ಅಫ್ಘಾನಿಸ್ತಾನ, ಬಾಂಗ್ಲಾದೇಶ, ಹಾಂಗ್‌ಕಾಂಗ್‌, ಶ್ರೀಲಂಕಾ

- ಈ ಬಾರಿಯ ಏಷ್ಯಾ ಕಪ್‌ ಟಿ20 ಟೂರ್ನಿಯ ಆಯೋಜನೆ ಯಾವ ದೇಶದ್ದಾಗಿದೆ?
ಭಾರತ ಈ ಬಾರಿಯ ಏಷ್ಯಾ ಕಪ್‌ ಟಿ20 ಟೂರ್ನಿಯನ್ನು ಆಯೋಜಿಸುತ್ತಿದೆ.

- ಏಷ್ಯಾ ಕಪ್‌ ಟಿ20 ಟೂರ್ನಿಯನ್ನು ಭಾರತದಲ್ಲಿ ಎಲ್ಲಿ ನೋಡಬಹುದು?
ಏಷ್ಯಾ ಕಪ್‌ ಟಿ20 ಟೂರ್ನಿಯನ್ನು ಭಾರತದಲ್ಲಿ ಸೋನಿ ಲಿವ್ ಆಪ್ ಹಾಗೂ ವೆಬ್‌ಸೈಟ್‌ನಲ್ಲಿ ನೋಡಬಹುದು.

- ಏಷ್ಯಾ ಕಪ್‌ ಎಷ್ಟು ಗಂಟೆಗೆ ಆರಂಭ?
ಏಷ್ಯಾ ಕಪ್‌ ಟಿ20 ಟೂರ್ನಿ ಭಾರತೀಯ ಕಾಲ ಮಾನ ರಾತ್ರಿ 8ಕ್ಕೆ ಆರಂಭವಾಗಲಿದೆ.

- ಈ ಬಾರಿಯ ಏಷ್ಯಾ ಕಪ್‌ ಎಲ್ಲಿ ನಡೆಯಲಿದೆ?
ಮೂರನೇ ಆವೃತ್ತಿಯ ಟಿ20 ಏಷ್ಯಾ ಕಪ್‌ ಟೂರ್ನಿ ದುಬೈ, ಅಬುದಾಬಿಯಲ್ಲಿ ನಡೆಯಲಿದೆ.

- ಭಾರತ ಈ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಯಾವಾಗ ಆರಂಭಿಸಲಿದೆ?
ಸೆ.10 ರಂದು ಭಾರತ, ಯುಎಇ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ.

- ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ನಡೆಯುವುದು ಯಾವಾಗ?
ಸೆ.14 ರಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯ ದುಬೈನಲ್ಲಿ ನಡೆಯಲಿದೆ.

- ಸೂಪರ್‌ 4 ಹಂತ ಎಂದರೇನು? ಈ ಪಂದ್ಯಗಳು ನಡೆಯುವುದು ಯಾವಾಗ?
ಗುಂಪು ಹಂತದಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಸೂಪರ್ 4 ಹಂತಕ್ಕೆ ಅರ್ಹತೆ ಪಡೆಯಲಿವೆ. ಈ ಪಂದ್ಯಗಳು ಸೆ.20 ರಿಂದ ಸೆ.26ರ ವರೆಗೆ ನಡೆಯಲಿವೆ.

- ಏಷ್ಯಾ ಕಪ್‌ ಟಿ20 ಟೂರ್ನಿಯ ಫೈನಲ್ ಪಂದ್ಯ ನಡೆಯುವುದು ಯಾವಾಗ?
ಸೆ.28 ರಂದು ಏಷ್ಯಾಕಪ್‌ ಟಿ20 ಟೂರ್ನಿಯ ಫೈನಲ್‌ ಪಂದ್ಯ ನಡೆಯಲಿದೆ.

Story first published: Tuesday, September 9, 2025, 8:10 [IST]
Other articles published on Sep 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+