ಏಷ್ಯಾ XI vs ವಿಶ್ವ XI ಸರಣಿಗೆ ತಂಡಗಳು ಪ್ರಕಟ, 6 ಭಾರತೀಯರಿಗೆ ಸ್ಥಾನ

ಧಾಕಾ, ಫೆಬ್ರವರಿ ಫೆಬ್ರವರಿ 25: ಸ್ಥಾಪಕರಾದ ಶೈಕ್ ಮುಜೀಬುರ್ ರಹ್ಮಾನ್ 100ನೇ ಜನ್ಮದಿನಾಚರಣೆಯ ಅಂಗವಾಗಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ), ಏಷ್ಯಾ XI ಮತ್ತು ವಿಶ್ವ XI ನಡುವೆ ಕ್ರಿಕೆಟ್ ಟೂರ್ನಿ ನಡೆಸಲು ಉದ್ದೇಶಿಸಿದೆ. ಈ ಟೂರ್ನಿಗೆ ಸಂಬಂಧಿಸಿ ಬಿಸಿಬಿ ಅಂತಿಮ ತಂಡಗಳನ್ನು ಪ್ರಕಟಗೊಂಡಿವೆ.
ಟೀಮ್ ಇಂಡಿಯಾದ ಒಟ್ಟು 6 ಆಟಗಾರರು ಏಷ್ಯಾ XI ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ಪಂದ್ಯಗಳನ್ನೊಳಗೊಂಡ ಟೂರ್ನಿ ಮಾರ್ಚ್ 18 ಮತ್ತು ಮಾರ್ಚ್ 21ರಂದು ಧಾಕಾದ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯಲಿದೆ.
ಮಂಗಳವಾರ (ಫೆಬ್ರವರಿ 25) ಪ್ರಕಟಿಸಲಾಗಿರುವ ಏಷ್ಯಾ XI ಮತ್ತು ವಿಶ್ವ XI ಎರಡೂ ತಂಡಗಳು ಬಲಿಷ್ಠವಾಗಿವೆ.

6 ಮಂದಿ ಭಾರತೀಯರು
ಏಷ್ಯಾ XIನಲ್ಲಿರುವ ಭಾರತೀಯರೆಂದರೆ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶಿಖರ್ ಧವನ್, ರಿಷಭ್ ಪಂತ್, ಕುಲದೀಪ್ ಯಾದವ್ ಮತ್ತು ಮಹಮ್ಮದ್ ಶಮಿ. ಇವರಲ್ಲಿ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಎರಡು ಪಂದ್ಯಗಳಲ್ಲಿ ಬರೀ ಒಂದು ಪಂದ್ಯಕ್ಕಷ್ಟೇ ಲಭ್ಯರಿರಲಿದ್ದಾರೆ.

ಪಂದ್ಯಗಳ ವೇಳಾಪಟ್ಟಿ
* ಮಾರ್ಚ್ 18, ಬುಧವಾರ: ಏಷ್ಯಾ ಇಲೆವೆನ್ vs ವರ್ಲ್ಡ್ ಇಲೆವೆನ್, 1ನೇ ಟಿ20ಐ - 6:00 PM (ಭಾರತೀಯ ಕಾಲಮಾನ), ಧಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ.
* ಮಾರ್ಚ್ 21, ಶನಿವಾರ: ಏಷ್ಯಾ ಇಲೆವೆನ್ Vs ವರ್ಲ್ಡ್ ಇಲೆವೆನ್, 2ನೇ ಟಿ20ಐ - 6:00 PM (ಭಾರತೀಯ ಕಾಲಮಾನ), ಧಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ.

ಏಷ್ಯಾ XI ಸಂಪೂರ್ಣ ತಂಡ
ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶಿಖರ್ ಧವನ್, ರಿಷಭ್ ಪಂತ್, ಕುಲದೀಪ್ ಯಾದವ್ ಮತ್ತು ಮಹಮ್ಮದ್ ಶಮಿ (ಎಲ್ಲರೂ ಭಾರತ), ತಮೀಮ್ ಇಕ್ಬಾಲ್ (ಬಾಂಗ್ಲಾದೇಶ), ಲಿಟಾನ್ ದಾಸ್ (ಬಾಂಗ್ಲಾದೇಶ), ಮುಶ್ಫಿಕರ್ ರಹೀಮ್ (ಬಾಂಗ್ಲಾದೇಶ), ಥಿಸರಾ ಪೆರೆರಾ (ಶ್ರೀಲಂಕಾ), ಮುಸ್ತಾಫಿಜುರ್ ರಹಮಾನ್ (ಬಾಂಗ್ಲಾದೇಶ), ರಶೀದ್ ಖಾನ್ (ಅಫ್ಘಾನಿಸ್ತಾನ), ಸಂದೀಪ್ ಲಮಿಚಾನೆ (ನೇಪಾಳ) ಮತ್ತು ಮುಜೀಬ್ ಉರ್ ರಹಮಾನ್.

ವಿಶ್ವ XI ಸಂಪೂರ್ಣ ತಂಡ
ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್), ರಾಸ್ ಟೇಲರ್ (ನ್ಯೂಜಿಲೆಂಡ್), ಶೆಲ್ಡನ್ ಕಾಟ್ರೆಲ್ (ವೆಸ್ಟ್ ಇಂಡೀಸ್), ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್), ಜಾನಿ ಬೇರ್ಸ್ಟೋವ್ (ಇಂಗ್ಲೆಂಡ್), ಲುಂಗಿ ಎನ್‌ಗಿಡಿ (ದಕ್ಷಿಣ ಆಫ್ರಿಕಾ), ಫಾ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ), ಕೀರನ್ ಪೊಲಾರ್ಡ್ (ವೆಸ್ಡ್ ಇಂಡೀಸ್), ಆ್ಯಂಡ್ರ್ಯೂ ಟೈ (ಆಸ್ಟ್ರೇಲಿಯಾ), ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್), ಆದಿಲ್ ರಶೀದ್ (ಇಂಗ್ಲೆಂಡ್), ಮಿಚೆಲ್ ಮೆಕ್ಲೆನಾಘನ್ (ನ್ಯೂಜಿಲೆಂಡ್),
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications