Asian Games 2023: ಭಾರತ vs ಅಫ್ಘಾನಿಸ್ತಾನ ಫೈನಲ್ ಪಂದ್ಯ ರದ್ದು; ಭಾರತ ಕ್ರಿಕೆಟ್ ತಂಡಕ್ಕೆ ಐತಿಹಾಸಿಕ ಚಿನ್ನದ ಪದಕ
ಶನಿವಾರ, ಅಕ್ಟೋಬರ್ 7ರಂದು 2023ರ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಪುರುಷರ ಕ್ರಿಕೆಟ್ ತಂಡಗಳ ನಡುವಿನ ಫೈನಲ್ ಪಂದ್ಯವು ಮಳೆಯಿಂದ ರದ್ದುಗೊಂಡಿತು.
ಆದರೂ, ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡದ ಪ್ರದರ್ಶನ ಆಧಾರದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಂಡಿದ್ದರೆ, ಅಫ್ಘಾನಿಸ್ತಾನ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 18.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿದ್ದಾಗ ಮಳೆ ಆಟಕ್ಕೆ ಅಡ್ಡಿಪಡಿಸಿತು. ಬಿಟ್ಟುಬಿಡದೆ ಮಳೆ ಸುರಿದ ಕಾರಣ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.
2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ 27ನೇ ಚಿನ್ನ ಒಲಿದು ಬಂದಿದೆ ಮತ್ತು ಕ್ರಿಕೆಟ್‌ನಲ್ಲಿ ಮಹಿಳಾ ಮತ್ತು ಪುರುಷರ ತಂಡಗಳು ಚಿನ್ನದ ಪದಕಗಳನ್ನು ಪಡೆದುಕೊಂಡಿವೆ.
ಇನ್ನು ಬಾಂಗ್ಲಾದೇಶಕ್ಕೆ ಡಬಲ್ ಪದಕ ಬಂದಿದ್ದು, ಎರಡೂ ತಂಡಗಳು ಕಂಚಿನ ಪದಕಗಳನ್ನು ಗೆದ್ದಿವೆ. ಅಫ್ಘಾನಿಸ್ತಾನ ಪುರುಷರ ತಂಡ ಬೆಳ್ಳಿ ಮತ್ತು ಶ್ರೀಲಂಕಾ ಮಹಿಳಾ ತಂಡ ಬೆಳ್ಳಿ ಪದಕದೊಂದಿಗೆ ಮುಗಿಸಿವೆ. ಭಾರತೀಯ ಆಟಗಾರರು ದೇಶದ ಧ್ವಜವನ್ನು ಹೆಮ್ಮೆಯಿಂದ ಕ್ರೀಡಾಂಗಣದಾದ್ಯಂತ ಮತ್ತು ಅವರ ಅಪಾರ ಅಭಿಮಾನಿಗಳ ಮುಂದೆ ಪ್ರದರ್ಶಿಸಿದರು.

ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ ಭಾರತದ ನಿರ್ಧಾರವು ಫಲ ನೀಡಿತು. ಏಕೆಂದರೆ ಅಫ್ಘಾನಿಸ್ತಾನ ನಾಲ್ಕನೇ ಓವರ್‌ನಲ್ಲಿ 12 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.
ನೂರ್ ಅಲಿ ಝದ್ರಾನ್ ರನೌಟ್ ಆಗುವ ಮುನ್ನ ಅಫ್ಘಾನಿಸ್ತಾನದ ಆರಂಭಿಕ ಆಟಗಾರರು ಶಿವಂ ದುಬೆ ಮತ್ತು ಅರ್ಶ್‌ದೀಪ್ ಸಿಂಗ್ ಅವರ ಸತತ ಓವರ್‌ಗಳಲ್ಲಿ ವಿಕೆಟ್ ಒಪ್ಪಿಸಿದರು.
ಮಳೆಯಿಂದಾಗಿ ಅಫ್ಘಾನಿಸ್ತಾನ ವಿರುದ್ಧದ ಫೈನಲ್ ಪಂದ್ಯವನ್ನು ಮುಂದೂಡಿದ ನಂತರ, ಅಗ್ರ ಟಿ20 ಶ್ರೇಯಾಂಕದ ಕಾರಣ ವಿಜಯಶಾಲಿ ಎಂದು ಘೋಷಿಸಲಾಯಿತು. ಅಫ್ಘಾನಿಸ್ತಾನ ಐಸಿಸಿ ಟಿ20 ಶ್ರೇಯಾಂಕದಲ್ಲಿ 10ನೇ ಸ್ಥಾನದಲ್ಲಿದೆ. ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ಸತತ ಮೂರನೇ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು.
ಭಾರತ ಪುರುಷರ ಕ್ರಿಕೆಟ್ ತಂಡವು ತಮ್ಮ ಚೊಚ್ಚಲ ಏಷ್ಯನ್ ಗೇಮ್ಸ್‌ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹಿಂದಿನ ಎರಡು ಏಷ್ಯನ್ ಗೇಮ್ಸ್‌ಗಳಲ್ಲಿ (2010, 2014) ಕ್ರಿಕೆಟ್ ಆಡಲಾಗಿದ್ದರೂ, ಭಾರತ ಎರಡೂ ಕ್ರೀಡಾಕೂಟಗಳಿಗೆ ತಂಡಗಳನ್ನು ಕಳುಹಿಸಿರಲಿಲ್ಲ. ಇದಕ್ಕೂ ಮುನ್ನ ಹ್ಯಾಂಗ್‌ಝೌನಲ್ಲಿ ನಡೆದ ಟಿ20 ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಚಿನ್ನದ ಪದಕ ಗೆದ್ದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications