Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

AUS vs PAK : ಆಸ್ಟ್ರೇಲಿಯಾ vs ಪಾಕ್: 73ಕ್ಕೆ 0, 235ಕ್ಕೆ ಆಲ್ಔಟ್; ತವರಿನಲ್ಲೇ ಸರಣಿ ಸೋತ ಪಾಕಿಸ್ತಾನ

AUS vs PAK: Australia vs Pakistan 3rd test; Australia beat Pakistan by 115 runs to win series by 1-0

ಹಲವು ವರ್ಷಗಳ ನಂತರ ಪಾಕಿಸ್ತಾನ ಪ್ರವಾಸ ಕೈಗೊಂಡು ಸೆಣಸಾಟ ನಡೆಸುತ್ತಿರುವ ಆಸ್ಟ್ರೇಲಿಯಾ ಮೊದಲಿಗೆ ಪಾಕಿಸ್ತಾನ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1 - 0 ಅಂತರದಿಂದ ಜಯ ಸಾಧಿಸಿದೆ. ಇನ್ನು ಇತ್ತಂಡಗಳ ನಡುವೆ ನಡೆದ ಈ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೇ ಡ್ರಾಗೊಳ್ಳುವ ಮೂಲಕ ಭಾರೀ ನಿರಾಸೆಯನ್ನು ಮೂಡಿಸಿದ್ದವು. ಹೀಗೆ ಮೊದಲೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡ ಕಾರಣ ಮಾರ್ಚ್ 21ರಿಂದ ಲಾಹೋರ್‌ನ ಗಡ್ಡಾಫಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾದ ಮೂರನೇ ಟೆಸ್ಟ್ ಮೇಲೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿತ್ತು. ಈ ಪಂದ್ಯದಲ್ಲಿ ಜಯಗಳಿಸಲಿರುವ ತಂಡ ಟ್ರೋಫಿ ಎತ್ತಿಹಿಡಿಯಲಿದೆ ಎಂಬ ಕಾರಣಕ್ಕೆ ಈ ಪಂದ್ಯ ಎಲ್ಲರ ಗಮನವನ್ನು ಸೆಳೆದಿತ್ತು. ಮೊದಲ ಮೂರು ದಿನಗಳು ಪಂದ್ಯ ಆಸ್ಟ್ರೇಲಿಯಾ ಪರ ಇತ್ತಾದರೂ ನಾಲ್ಕನೇ ದಿನದಾಟದಂದು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 73 ರನ್ ಗಳಿಸಿದ ಕಾರಣ ಪಂದ್ಯದಲ್ಲಿ ಯಾವ ತಂಡ ಗೆದ್ದು ಸರಣಿ ವಶಪಡಿಸಿಕೊಳ್ಳಲಿದೆ ಎಂಬ ಕುತೂಹಲ ಹುಟ್ಟಿಕೊಂಡಿತ್ತು. ಆದರೆ, ಅಂತಿಮ ದಿನದಾಟ ಆರಂಭವಾಗುತ್ತಿದ್ದಂತೆ ತನ್ನ ಮೊದಲ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 235 ರನ್‌ಗಳಿಗೆ ಆಲ್ಔಟ್ ಆಗಿ 115 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿ ತವರಿನಲ್ಲೇ ಟೆಸ್ಟ್ ಸರಣಿಯನ್ನು ಸೋತು ಮುಖಭಂಗಕ್ಕೊಳಗಾಗಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡು ಮೊದಲು ಬ್ಯಾಟಿಂಗ್ ಮಾಡಿ ಮೊದಲನೇ ಇನ್ನಿಂಗ್ಸ್‌ನಲ್ಲಿ ಉಸ್ಮಾನ್ ಖವಾಜಾ, ಸ್ಟೀವನ್ ಸ್ಮಿತ್, ಕ್ಯಾಮರೂನ್ ಗ್ರೀನ್ ಮತ್ತು ಅಲೆಕ್ಸ್ ಕ್ಯಾರಿ ಅವರ ಜವಾಬ್ದಾರಿಯುತ ಅರ್ಧಶತಕಗಳ ನೆರವಿನಿಂದ 391 ರನ್ ಗಳಿಸಿ ಆಲ್ಔಟ್ ಆಗಿತ್ತು. ಇನ್ನು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡ ಪಾಕಿಸ್ತಾನ 268 ರನ್‌ಗಳಿಗೆ ಆಲ್ಔಟ್ ಆಗಿ 123 ರನ್‌ಗಳ ಹಿನ್ನಡೆಯನ್ನು ಅನುಭವಿಸಿತ್ತು. ಹೀಗೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆಯನ್ನು ಕಾಯ್ದುಕೊಂಡು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಉಸ್ಮಾನ್ ಖವಾಜಾ ಅಜೇಯ ಶತಕ (104*) ಹಾಗೂ ಡೇವಿಡ್ ವಾರ್ನರ್ ( 51 ) ಅರ್ಧಶತಕದ ನೆರವಿನಿಂದೆ 3 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 351 ರನ್‌ಗಳ ಗುರಿಯನ್ನು ನೀಡಿತು. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಪಾಕಿಸ್ತಾನ ಆಸ್ಟ್ರೇಲಿಯಾ ನೀಡಿದ ಈ ಪೈಪೋಟಿಯುತ ಮೊತ್ತವನ್ನು ಬೆನ್ನತ್ತಿ ನಾಲ್ಕನೇ ದಿನದಾಟದಂತ್ಯಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 73 ರನ್ ಗಳಿಸಿ ಅಂತಿಮ ದಿನದಾಟದಲ್ಲಿ 278 ರನ್ ಬಾರಿಸಬೇಕಾದ ಅನಿವಾರ್ಯತೆಯಲ್ಲಿತ್ತು. ಹೀಗೆ ನಾಲ್ಕನೇ ದಿನದ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಇದ್ದ ಪಾಕಿಸ್ತಾನ ಅಂತಿಮ ದಿನ ಆರಂಭವಾಗುತ್ತಿದ್ದಂತೆ ತಂಡದ ಆರಂಬಿಕ ಆಟಗಾರ ಅಬ್ದುಲ್ಲಾ ಶಫಿಕ್ ಅವರ ವಿಕೆಟ್‌ನ್ನು ಕಳೆದುಕೊಂಡಿತು. ಹೀಗೆ ದಿನದ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಪಾಕ್ ಪರ ಮತ್ತೋರ್ವ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ 70 ರನ್ ಹಾಗೂ ನಾಯಕ ಬಾಬರ್ ಅಜಮ್ 55 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಆಟಗಾರರೂ ಸಹ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಪಾಕ್ ಪರ ಅಜರ್ ಅಲಿ 17 ರನ್, ಫವಾದ್ ಅಲಮ್ 11 ರನ್, ಮೊಹಮ್ಮದ್ ರಿಜ್ವಾನ್ ೦, ಸಜಿದ್ ಖಾನ್ 21 ರನ್, ನೌಮನ್ ಅಲಿ ಅಜೇಯ 1 ರನ್, ಹಸನ್ ಅಲಿ 13 ರನ್, ಶಾಹೀನ್ ಅಫ್ರಿದಿ 5 ರನ್ ಹಾಗೂ ನಸೀಮ್ ಶಾ 1 ರನ್ ಗಳಿಸಿದರು.

ಹೀಗೆ ಕಡಿಮೆ ರನ್‌ಗಳಿಗೆ ಔಟ್ ಆಗಿ ವಿಕೆಟ್ ಕಳೆದುಕೊಂಡ ಪಾಕಿಸ್ತಾನ ಅಂತಿಮವಾಗಿ 235 ರನ್‌ಗಳಿಗೆ ಆಲ್ಔಟ್ ಆಗಿ 115 ರನ್‌ಗಳ ಸೋಲು ಕಂಡಿದೆ ಹಾಗೂ ಪಂದ್ಯದಲ್ಲಿ ಗೆದ್ದು ಬೀಗಿದ ಆಸ್ಟ್ರೇಲಿಯಾ ಸರಣಿಯನ್ನು ಗೆದ್ದಿದೆ. ಆಸ್ಟ್ರೇಲಿಯಾ ಪರ ನಾಥನ್ ಲಿಯಾನ್ 5 ವಿಕೆಟ್, ನಾಯಕ ಪ್ಯಾಟ್ ಕಮಿನ್ಸ್ 3 ವಿಕೆಟ್ ಹಾಗೂ ಮಿಚೆಲ್ ಸ್ಟಾರ್ಕ್ ಮತ್ತು ಕ್ಯಾಮರೂನ್ ಗ್ರೀನ್ ತಲಾ ಒಂದೊಂದು ವಿಕೆಟ್ ಪಡೆದರು. ಹೀಗೆ ನಾಥನ್ ಲಿಯಾನ್ ಐದು ವಿಕೆಟ್‌ಗಳ ಗೊಂಚಲು ಹಾಗೂ ಪ್ಯಾಟ್ ಕಮಿನ್ಸ್ ಉತ್ತಮ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯಾ ಪಾಕ್ ತಂಡವನ್ನು ಸೋಲಿಸಿದೆ.

ಪಾಕಿಸ್ತಾನ ತಂಡ: ಅಬ್ದುಲ್ಲಾ ಶಫೀಕ್, ಬೇಸರ, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಫವಾದ್ ಅಲ್-ಆಮ್, ಮುಹಮ್ಮದ್ ರಿಜುವಾ (ವಿಕೆಟ್ ಕೀಪರ್), ನಸೀಮ್ ಶಾ, ಸಾಜಿದ್ ಖಾನ್, ಹಸನ್ ಅಲಿ, ನಮಿನ್ ಅಲಿ, ಶಾಹೀನ್ ಅಫ್ರಿದಿ

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ( ನಾಯಕ ) ನಾಥನ್ ಲಿಯಾನ್, ಮಿಚೆಲ್ ಸ್ವೆಪ್ಸನ್

Story first published: Saturday, March 26, 2022, 10:54 [IST]
Other articles published on Mar 26, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+