Aus vs SA 2nd Test: ಮುಂಬೈ ಇಂಡಿಯನ್ಸ್ ಆಟಗಾರನ ಭರ್ಜರಿ ಬೌಲಿಂಗ್, 189 ರನ್‌ಗಳಿಗೆ ಆಲೌಟ್ ಆದ ದಕ್ಷಿಣ ಆಫ್ರಿಕಾ

ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 189 ರನ್‌ಗಳಿಗೆ ಆಲೌಟ್ ಆಗಿದೆ.
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಟೆಸ್ಟ್‌ನಲ್ಲಿ ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ವಿಫಲವಾಗಿದ್ದ ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್‌ನಲ್ಲಿಯೂ ಆಸ್ಟ್ರೇಲಿಯಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ.
ನಾಯಕ ಡೀನ್ ಎಲ್ಗರ್ 26 ರನ್ ಗಳಿಸಿದರೆ, ಸರೆಲ್ ಎರ್ವೀ 18 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಥೀನಿಸ್ ಡಿ ಬ್ರುಯಿನ್12 ರನ್ ಗಳಿಸಿ ಔಟಾದರೆ, ಟೆಂಬಾ ಬವುಮಾ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಝೋಂಡೋ 5 ರನ್ ಗಳಿಸಿ ಮತ್ತೆ ವಿಫಲವಾದರು.
67 ರನ್‌ಗಳಿಸಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಕೈಲ್ ವೆರ್ರೆನ್ನೆ ಮತ್ತು ಮಾರ್ಕೊ ಜಾನ್ಸನ್ ಆಸರೆಯಾದರು. 6ನೇ ವಿಕೆಟ್‌ಗೆ ಈ ಜೋಡಿ 112 ರನ್‌ಗಳ ಜೊತೆಯಾಟ ಆಡಿದರು. ಕೈಲ್ ವೆರ್ರೆನ್ನೆ 52 ರನ್ ಗಳಿಸಿದರೆ, ಮಾರ್ಕೊ ಜಾನ್ಸನ್ 59 ರನ್ ಗಳಿಸಿದರು. ಇವರಿಬ್ಬರೂ ಔಟಾದ ನಂತರ ದಕ್ಷಿಣ ಆಫ್ರಿಕಾ ದಿಢೀರ್ ಕುಸಿತ ಕಂಡಿತು.
ಕೇಶವ್ ಮಹಾರಾಜ್ 2 ರನ್, ಕಗಿಸೊ ರಬಾಡ 4 ರನ್, ಲುಂಗಿ ಎನ್‌ಗಿಡಿ 2 ರನ್ ಗಳಿಸಿ ಔಟ್ ಆಗುವ ಮೂಲಕ ದಕ್ಷಿಣ ಆಫ್ರಿಕಾ 189 ರನ್‌ಗಳಿಗೆ ಸರ್ವಪತನ ಕಂಡಿತು.

5 ವಿಕೆಟ್ ಪಡೆದ ಕ್ಯಾಮೆರಾನ್ ಗ್ರೀನ್
ಆಸ್ಟ್ರೇಲಿಯಾ ಪರವಾಗಿ ಕ್ಯಾಮೆರಾನ್ ಗ್ರೀನ್ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದರು. 10.4 ಓವರ್ ಗಳಲ್ಲಿ ಅವರು 5 ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಪಡೆಗೆ ಮಾರಕವಾದರು. ಉಳಿದಂತೆ ವೇಗಿ ಮಿಚೆಲ್ ಸ್ಟಾರ್ಕ್ 2 ವಿಕೆಟ್ ಪಡೆದರು, ವೇಗಿ ಬೊಲ್ಯಾಂಡ್ ಮತ್ತು ಸ್ಪಿನ್ನರ್ ನಥಾನ್ ಲಿಯಾನ್ ತಲಾ 1 ವಿಕೆಟ್ ಪಡೆದರು.
ಕ್ಯಾಮೆರಾನ್ ಗ್ರೀನ್ ಐಪಿಎಲ್ ಮಿನಿ ಹರಾಜಿನಲ್ಲಿ ಬರೋಬ್ಬರಿ 17.5 ಕೋಟಿ ರುಪಾಯಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅವರ ಈ ಪ್ರದರ್ಶನ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಸಂತಸ ತಂದಿದೆ.
IPL 2023: ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿರುವ ಮೂವರು ಮಾಜಿ ಆರ್ಸಿಬಿ ಆಟಗಾರರು

ದಕ್ಷಿಣ ಆಫ್ರಿಕಾ ತಂಡಕ್ಕೆ ಮಹತ್ವದ ಪಂದ್ಯ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮುನ್ನ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ ಮೊದಲನೇ ಟೆಸ್ಟ್ ಪಂದ್ಯವನ್ನು ಸೋಲುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಏನಾದರೂ ದಕ್ಷಿಣ ಆಫ್ರಿಕಾ ಸೋಲನುಭವಿಸಿದರೆ, ಅದರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ ಕಠಿಣವಾಗಲಿದೆ.
ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲನೇ ಪಂದ್ಯವನ್ನು ಸೋತಿದೆ. ಇನ್ನು ಎರಡು ಟೆಸ್ಟ್ ಪಂದ್ಯಗಳು ಬಾಕಿ ಇವೆ, ನಂತರ ದಕ್ಷಿಣ ಆಫ್ರಿಕಾ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಆಸ್ಟ್ರೇಲಿಯಾ ವಿರುದ್ಧ ಉಳಿದ ಎರಡು ಟೆಸ್ಟ್ ಪಂದ್ಯಗಳನ್ನು ಸೋತರೆ ಅಂಕಪಟ್ಟಿಯಲ್ಲಿ ಮತ್ತಷ್ಟು ಕುಸಿತ ಕಾಣಲಿದೆ.

ಎರಡು ತಂಡಗಳ ಪ್ಲೇಯಿಂಗ್ XI
ಆಸ್ಟ್ರೇಲಿಯಾ ತಂಡ ಮೊದಲನೇ ಟೆಸ್ಟ್‌ನಲ್ಲಿ ಆಡಿದ್ದ ತಂಡವನ್ನೇ ಎರಡನೇ ಟೆಸ್ಟ್‌ಗೆ ಉಳಿಸಿಕೊಂಡರೆ, ದಕ್ಷಿಣ ಆಫ್ರಿಕಾ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಿತು. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಬದಲಿಗೆ ಥೆನ್ಯೂಸ್ ಡಿ ಬ್ರುಯಿನ್ ಅವರಿಗೆ ಅವಕಾಶ ನೀಡಲಾಗಿದೆ.
ದಕ್ಷಿಣ ಆಫ್ರಿಕಾ : ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ಥೀನಿಸ್ ಡಿ ಬ್ರುಯಿನ್, ಟೆಂಬಾ ಬವುಮಾ, ಖಯಾ ಜೊಂಡೋ, ಕೈಲ್ ವೆರ್ರೆನ್ನೆ (ಡಬ್ಲ್ಯೂ), ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಚ್ ನೊಕಿಯಾ, ಲುಂಗಿ ಎನ್‌ಗಿಡಿ
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications