ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿರುವ ಮೂವರು ಮಾಜಿ ಆರ್​ಸಿಬಿ ಆಟಗಾರರು

IPL 2023: These 3 Former RCB Players Will Playing For Chennai Super Kings In IPL 2023

ಐಪಿಎಲ್ 2023 ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು 16.25 ಕೋಟಿ ರುಪಾಯಿಗೆ ಖರೀದಿ ಮಾಡುವ ಮೂಲಕ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಮಹೇಂದ್ರ ಸಿಂಗ್ ಧೋನಿ ಮತ್ತು ಬೆನ್‌ ಸ್ಟೋಕ್ಸ್ ಜೋಡಿ ಮತ್ತೆ ಒಂದಾಗಲಿದೆ.

ಸಿಎಸ್‌ಕೆ ತಂಡಕ್ಕೆ ಈ ಬಾರಿ ಅಜಿಂಕ್ಯ ರಹಾನೆ ಕೂಡ ಸೇರ್ಪಡೆಯಾಗಿದ್ದು, ಧೋನಿ ಮತ್ತು ಅಜಿಂಕ್ಯ ರಹಾನೆ ಕೂಡ ಒಂದಾಗುತ್ತಿದ್ದಾರೆ. ಈ ಜೋಡಿ ಟೀಂ ಇಂಡಿಯಾ ಪರ ಹಲವು ಪಂದ್ಯಗಳಲ್ಲಿ ಜೊತೆಯಾಗಿ ಆಡಿದ್ದಾರೆ. ಸ್ಟೋಕ್ಸ್, ಧೋನಿ, ರಹಾನೆ ಮೂವರು 2016 ಮತ್ತು 2017ರ ಐಪಿಎಲ್‌ ಆವೃತ್ತಿಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡಕ್ಕಾಗಿ ಆಡಿದ್ದರು.

IPL 2023 : ಸಿಎಸ್‌ಕೆ ತಂಡಕ್ಕೆ ಡ್ವೇನ್ ಬ್ರಾವೋ ಸ್ಥಾನವನ್ನು ಬೆನ್‌ ಸ್ಟೋಕ್ಸ್ ತುಂಬಲು ಸಾಧ್ಯವಿಲ್ಲ ಎಂದ ಆಕಾಶ್ ಚೋಪ್ರಾIPL 2023 : ಸಿಎಸ್‌ಕೆ ತಂಡಕ್ಕೆ ಡ್ವೇನ್ ಬ್ರಾವೋ ಸ್ಥಾನವನ್ನು ಬೆನ್‌ ಸ್ಟೋಕ್ಸ್ ತುಂಬಲು ಸಾಧ್ಯವಿಲ್ಲ ಎಂದ ಆಕಾಶ್ ಚೋಪ್ರಾ

ಭಾರತದ ಅಂಡರ್-19 ವಿಶ್ವಕಪ್ ವಿಜೇತ ತಂಡ ಆಟಗಾರ ನಿಶಾಂತ್ ಸಿಂಧು ಕೂಡ ಈ ಬಾರಿ ಸಿಎಸ್‌ಕೆ ತಂಡ ಸೇರಿಕೊಂಡಿದ್ದಾರೆ. ನಿಶಾಂತ್ ಸಿಂಧು ಭವಿಷ್ಯದಲ್ಲಿ ರವೀಂದ್ರ ಜಡೇಜಾ ಸ್ಥಾನಕ್ಕೆ ಬ್ಯಾಕಪ್ ಆಟಗಾರ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

2023ರ ಮಿನಿ ಹರಾಜಿನಲ್ಲಿ ಸಿಎಸ್‌ಕೆ ಮಾಜಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರನೊಬ್ಬನನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು. ಸಿಎಸ್‌ಕೆ ತಂಡದಲ್ಲಿ ಈಗ ಮೂವರು ಮಾಜಿ ಆರ್​ಸಿಬಿ ಆಟಗಾರರು ಇದ್ದಾರೆ.

ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್

ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್

ನ್ಯೂಜಿಲೆಂಡ್‌ನ ವೇಗದ ಬೌಲರ್ ಕೈಲ್ ಜೇಮಿಸನ್ ಮಿನಿ ಹರಾಜಿನಲ್ಲಿ 1 ಕೋಟಿ ರುಪಾಯಿಗೆ ಸಿಎಸ್‌ಕೆ ತಂಡದ ಪಾಲಾಗಿದ್ದಾರೆ. 2021ರ ಆವೃತ್ತಿಯಲ್ಲಿ ಕೈಲ್ ಜೇಮಿಸನ್ ಅವರನ್ನು ಆರ್​ಸಿಬಿ 15 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತ್ತು.

2021ರ ಆವೃತ್ತಿಯಲ್ಲಿ ಅವರು 9 ವಿಕೆಟ್ ಪಡೆದರು. ಆದರೆ, ಅವರ ಎಕಾನಮಿ ದರ 9.61 ಆಗಿತ್ತು. 118.18 ಸ್ಟ್ರೈಕ್‌ರೇಟ್‌ನಲ್ಲಿ 65 ರನ್ ಗಳಿಸಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಅವರು 2022ರ ಮೆಗಾಹರಾಜಿನಲ್ಲಿ ಭಾಗವಹಿಸಲಿಲ್ಲ.

2021ರಲ್ಲಿ ಅವರ ಪ್ರದರ್ಶನವನ್ನು ನೋಡಿದ್ದವರು ಈ ಬಾರಿ ಮಿನಿ ಹರಾಜಿನಲ್ಲಿ ಖರೀದಿ ಮಾಡಲು ಆಸಕ್ತಿ ವಹಿಸಲಿಲ್ಲ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು ಫಿಟ್ ಆಗಿರುವ ಬಗ್ಗೆ ಕೂಡ ಫ್ರಾಂಚೈಸಿಗಳಿಗೆ ಮಾಹಿತಿ ಇರಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಅಂತಿಮವಾಗಿ ಮೂಲ ಬೆಲೆ 1 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತು.

ಮಯಾಂಕ್ ಬೇಡ, ಭಾರತದ ಈ ವೇಗಿಯನ್ನು ಸನ್‌ರೈಸರ್ಸ್ ನಾಯಕನನ್ನಾಗಿ ಘೋಷಿಸಲಿ: ಆಕಾಶ್ ಚೋಪ್ರ

ಮೊಯಿನ್ ಅಲಿ

ಮೊಯಿನ್ ಅಲಿ

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2023 ಸೀಸನ್‌ಗಾಗಿ ಆಲ್‌ರೌಂಡರ್ ಮೊಯಿನ್ ಅಲಿಯನ್ನು ತಂಡದಲ್ಲಿ ಉಳಿಸಿಕೊಂಡಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಸಿಎಸ್‌ಕೆ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರಲ್ಲಿ ಮೊಯಿನ್ ಅಲಿ ಕೂಡ ಒಬ್ಬರಾಗಿದ್ದಾರೆ.

ಆಫ್-ಸ್ಪಿನ್ ಬೌಲಿಂಗ್ ಆಲ್ ರೌಂಡರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ತಮ್ಮ ಐಪಿಎಲ್‌ ವೃತ್ತಿಜೀವನದ ಮೊದಲ ಮೂರು ಋತುಗಳನ್ನು ಆಡಿದ್ದರು. 2021 ರಲ್ಲಿ ಸಿಎಸ್‌ಕೆ ತಂಡದ ಪಾಲಾದರು. ಸಿಎಸ್‌ಕೆ ಪರವಾಗಿ ಇದುವರೆಗೆ 25 ಪಂದ್ಯಗಳನ್ನಾಡಿರುವ ಮೊಯಿನ್ ಅಲಿ, 601 ರನ್ ಗಳಿಸಿದ್ದು, 14 ವಿಕೆಟ್ ಪಡೆದಿದ್ದಾರೆ.

ಯುವ ಆಟಗಾರ ಶಿವಂ ದುಬೆ

ಯುವ ಆಟಗಾರ ಶಿವಂ ದುಬೆ

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶಿವಂ ದುಬೆ ಅವರನ್ನು ಆರ್​ಸಿಬಿ ಮೊದಲು ಖರೀದಿ ಮಾಡಿತ್ತು. 2019 ಮತ್ತು 2020ರ ಆವೃತ್ತಿಯಲ್ಲಿ ಅವರು ಬೆಂಗಳೂರು ಮೂಲದ ತಂಡಕ್ಕಾಗಿ ಆಡಿದರು. ಆರ್​ಸಿಬಿ ಪರ 15 ಪಂದ್ಯಗಳನ್ನಾಡಿದ ಅವರು ಕೇವಲ 169 ರನ್ ಗಳಿಸಿದರು, ನಾಲ್ಕು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

2021ರ ಐಪಿಎಲ್‌ನಲ್ಲಿ ಅವರು ರಾಜಸ್ಥಾನ್ ರಾಯಲ್ಸ್‌ ತಂಡದ ಪರವಾಗಿ ಆಡಿದರು. 2022ರ ಮೆಗಾ ಹರಾಜಿನಲ್ಲಿ ಶಿವಂ ದುಬೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಸಹಿ ಮಾಡಿದರು. ಕಳೆದ ಆವೃತ್ತಿಯಲ್ಲಿ ದುಬೆ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು.

11 ಪಂದ್ಯಗಳಲ್ಲಿ 156.22 ಸ್ಟ್ರೈಕ್ ರೇಟ್‌ನಲ್ಲಿ 289 ರನ್‌ಗಳನ್ನು ಗಳಿಸಿದರು. 2023ರಲ್ಲಿ ಅವರು ಸಿಎಸ್‌ಕೆ ತಂಡದ ಪ್ರಮುಖ ಆಲ್‌ರೌಂಡರ್ ಆಗಲಿದ್ದಾರೆ.

Story first published: Monday, December 26, 2022, 8:30 [IST]
Other articles published on Dec 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X