Aus vs SL 1st Test: ಮೂರನೇ ದಿನದಾಟದಲ್ಲಿ ಲಂಕಾಗೆ ಆರಂಭಿಕ ಆಘಾತ Live score

ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಆರಂಭಿಕ ಆಘಾತ ಅನುಭವಿಸಿದೆ. ಅಗ್ರೆಸ್ಸಿವ್ ಆಗಿ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವು ಓಪನಿಂಗ್ ಬ್ಯಾಟರ್‌ಗಳನ್ನ ಕಳೆದುಕೊಂಡಿದೆ.
ದಿಮುತ್ ಕರುಣರತ್ನೆ 20 ಎಸೆತಗಳಲ್ಲಿ 23 ರನ್ ಕಲೆಹಾಕಿದ್ದು ಐದು ಬೌಂಡರಿಗಳನ್ನ ಸಿಡಿಸಿದ್ದಾರೆ. ಮೊದಲ ಓವರ್‌ನಲ್ಲೇ ನಾಲ್ಕು ಬೌಂಡರಿ ಕಲೆಹಾಕಿದ್ದ ಕರುಣರತ್ನೆ, ನೇಥನ್ ಲ್ಯಾನ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಲೈವ್ ಸ್ಕೋರ್ ಬೋರ್ಡ್ ಈ ಕೆಳಗಿದೆ.

ಆರಂಭಿಕ ಆಘಾತದಿಂದ ತತ್ತರಿಸಿದ ಶ್ರೀಲಂಕಾ
ದಿಮುತ್ ಕರುಣರತ್ನೆ ಔಟಾದ ಬಳಿಕ ಮತ್ತೊಬ್ಬ ಓಪನರ್ ಪಥುಮ್ ನಿಸ್ಸಾಂಕ 19 ಎಸೆತಗಳಲ್ಲಿ 14 ರನ್ ಕಲೆಹಾಕಿ ಸ್ವೆಪ್ಸನ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಇದ್ರ ಜೊತೆಗೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಕುಸಾಲ್ ಮೆಂಡಿಸ್ ರನ್ನ ಔಟ್ ಮಾಡುವಲ್ಲಿ ನೇಥನ್ ಲ್ಯಾನ್ ಯಶಸ್ವಿಯಾದರು. 15 ಎಸೆತಗಳಲ್ಲಿ 8 ರನ್ ಕಲೆಹಾಕಿದ್ದ ಕುಸಾಲ್ ಸ್ವೆಪ್ಸನ್ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.
ಒಶಾಂಡ ಫರ್ನಾಂಡೊ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. 18 ಎಸೆತಗಳಲ್ಲಿ 12ರನ್ ಕಲೆಹಾಕಿ ಸ್ವೆಪ್ಸನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಶ್ರೀಲಂಕಾ ತಂಡವು 12.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 63 ರನ್ ಕಲೆಹಾಕಿದೆ. ಅಲ್ಲದೆ 43 ರನ್‌ಗಳ ಹಿನ್ನಡೆಯಲ್ಲಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 321ರನ್ ಕಲೆಹಾಕಿದ ಆಸಿಸ್
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು 321ರನ್ ಕಲೆಹಾಕುವ ಮೂಲಕ ಉತ್ತಮ ಮುನ್ನಡೆ ಪಡೆದುಕೊಂಡಿತು. ಶ್ರೀಲಂಕಾದ 212ರನ್‌ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜ 71, ಗ್ರೀನ್ 77, ಅಲೆಕ್ಸ್ ಕ್ಯಾರಿ 45, ಪ್ಯಾಟ್ ಕಮಿನ್ಸ್ 25ರನ್‌ಗಳ ನೆರವಿನಿಂದ 321ರನ್ ಕಲೆಹಾಕಿ 109ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಉಭಯ ತಂಡಗಳ ಪ್ಲೇಯಿಂಗ್ 11
ಆಸ್ಟ್ರೇಲಿಯಾ
ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಮಿಚೆಲ್ ಸ್ವೆಪ್ಸನ್
ಬೆಂಚ್: ಮಿಚೆಲ್ ಮಾರ್ಷ್, ಜೋಶ್ ಹೇಜಲ್‌ವುಡ್, ಗ್ಲೆನ್ ಮ್ಯಾಕ್ಸ್‌ವೆಲ್, ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಜೋಶ್ ಇಂಗ್ಲಿಸ್
ಶ್ರೀಲಂಕಾ
ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಜೆಫ್ರಿ ವಾಂಡರ್ಸೆ, ಲಸಿತ್ ಎಂಬುಲ್ಡೆನಿಯ, ಅಸಿತ ಫೆರ್ನಾಂಡೋ
ಬೆಂಚ್ : ವಿಶ್ವ ಫೆರ್ನಾಂಡೋ, ಚಾಮಿಕಾ ಕರುಣಾರತ್ನೆ, ಕಸುನ್ ರಜಿತ, ಕಾಮಿಂದು ಮೆಂಡಿಸ್, ಓಷಾದ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ, ದಿಲ್ಶನ್ ಮಧುಶಂಕ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications