Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

AUS vs SL: ಶ್ರೀಲಂಕಾ ವಿರುದ್ಧ ಮತ್ತೊಂದು ಟಿ20 ಸರಣಿ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ

Australia

ಕೊಲಂಬೊದ ಆರ್‌. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ 3 ವಿಕೆಟ್‌ಗಳ ಗೆಲುವು ಸೇರಿದಂತೆ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದಲ್ಲಿ ಗೆಲ್ಲುವ ಮೂಲಕ ಇನ್ನೊಂದು ಪಂದ್ಯ ಇರುವಂತೆಯೇ ಆತಿಥೇಯರಿಗೆ ಸೋಲಿನ ಕಹಿ ನೀಡಿದೆ.

ಟಾಸ್‌ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡವು ಆತಿಥೇಯರಿಗೆ ಬ್ಯಾಟಿಂಗ್ ಆಹ್ವಾನಿಸಿ ಕೇವಲ 124ರನ್‌ಗಳಿಗೆ ಕಟ್ಟಿಹಾಕಿತು. ಶ್ರೀಲಂಕಾ ಪರ ಅಸಲಂಕಾ 39, ಕುಸಾಲ್ ಮೆಂಡೀಸ್ 36ರನ್‌ಗಳಿಸಿದ್ದೇ ಹೆಚ್ಚು. ಪ್ರಬಲ ಬೌಲಿಂಗ್ ದಾಳಿ ನಡೆದ ಆಸ್ಟ್ರೇಲಿಯಾ ಶ್ರೀಲಂಕನ್ನರಿಗೆ ಯಾವುದೇ ಅವಕಾಶ ನೀಡದೆ ಕಾಡಿತು.

ನಿಗದಿತ 20 ಓವರ್‌ಗಳಲ್ಲಿ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 124ರನ್ ಕಲೆಹಾಕಿತು. ಆಸ್ಟ್ರೇಲಿಯಾ ಪರ ಕೇನ್ ರಿಚರ್ಡ್ಸನ್ 4 ವಿಕೆಟ್, ಜೈ ರಿಚರ್ಡ್ಸನ್ 3 ವಿಕೆಟ್, ಗ್ಲೆನ್ ಮ್ಯಾಕ್ಸ್‌ವೆಲ್ 2 ವಿಕೆಟ್‌ಗಳನ್ನು ಪಡೆದು ಮಿಂಚಿದರು.

ಇನ್ನು ಲಂಕಾದ 125ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಕೂಡ ಗುರಿ ತಲುಪಲು ತಡಬಡಾಯಿಸಿತು. ಐಪಿಎಲ್ 2022ರ ಸೀಸನ್‌ನಲ್ಲಿ ಆರ್‌ಸಿಬಿ ಪರ ವಿಕೆಟ್ ಬೇಟೆಯಾಡಿದ ವಹಿಂದು ಹಸರಂಗ ಕಾಂಗರೂಗಳಿಗೆ ಕೊನೆಯವರೆಗೂ ಕಾಡಿದ್ರು.

ಆಸಿಸ್ ನಾಯಕ ಆರೋನ್ ಫಿಂಚ್ 24, ಡೇವಿಡ್ ವಾರ್ನರ್ 21ರನ್‌ಗಳಿಸಿ ಉತ್ತಮ ಆರಂಭ ನೀಡಿದ್ರೂ ಸಹ ನಂತರದ ಬ್ಯಾಟರ್‌ಗಳ ಕುಸಿತವು ತಂಡಕ್ಕೆ ಹೊಡೆತ ನೀಡಿತು. ಮಿಚೆಲ್ ಮಾರ್ಷ್ 11, ಸ್ಟೀವನ್ ಸ್ಮಿತ್ 5, ಗ್ಲೆನ್ ಮ್ಯಾಕ್ಸ್‌ವೆಲ್ 19, ಮಾರ್ಕಸ್ ಸ್ಟೋಯ್ನಿಸ್ 9 ರನ್‌ಗಳಿಸಿ ಬೇಗನೆ ವಿಕೆಟ್ ಒಪ್ಪಿಸಿದ್ರು.

ಆದ್ರ ತಾಳ್ಮೆಯ ಆಟವಾಡಿದ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ 26 ಎಸೆತಗಳಲ್ಲಿ ಅಜೇಯ 26 ರನ್ ಕಲೆಹಾಕುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಆಸ್ಟ್ರೇಲಿಯಾ ಇನ್ನೂ ಎರಡು ಓವರ್ ಬಾಕಿ ಇರುವಂತೆಯೇ ಗುರಿ ತಲುಪಿ ಪಂದ್ಯ ಸೇರಿದಂತೆ ಸರಣಿಯನ್ನ ತನ್ನದಾಗಿಸಿಕೊಂಡಿದೆ.

ಅಜೇಯರಾಗಿ ತಂಡವನ್ನ ಗೆಲುವಿನ ದಡ ತಲುಪಿಸಿದ ಮ್ಯಾಥ್ಯೂ ವೇಡ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಲಭಿಸಿದೆ. ಲಂಕಾ ಪರ ವಹಿಂದು ಹಸರಂಗ ತನ್ನ ನಾಲ್ಕು ಓವರ್‌ಗಳಲ್ಲಿ 33ರನ್ ನೀಡಿ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡ್ರು.

ಟಿ20 ವಿಶ್ವಕಪ್ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಈ ವರ್ಷವೇ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಲಂಕಾ ವಿರುದ್ಧ ಪ್ರಾಬಲ್ಯ ಸಾಧಿಸಿದ್ದರು. ಆ್ಯರೊನ್ ಫಿಂಚ್ ನೇತೃತ್ವದ ತಂಡವು ಪಾಕಿಸ್ತಾನ ವಿರುದ್ಧವೂ ಟಿ20 ಸರಣಿ ಗೆಲುವನ್ನ ಕಂಡಿತ್ತು. ಇದೀಗ ಲಂಕಾ ವಿರುದ್ಧ ಮತ್ತೊಂದು ಚುಟುಕು ಸರಣಿಯನ್ನ ಗೆದ್ದು ಬೀಗಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11:
ಆ್ಯರೋನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯ್ನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಆಷ್ಟನ್ ಅಗರ್, ಝೈ ರಿಚರ್ಡ್ಸನ್, ಕೇನ್ ರಿಚರ್ಡ್ಸನ್, ಜೋಶ್ ಹೇಜಲ್‌ವುಡ್‌

ಶ್ರೀಲಂಕಾ ಪ್ಲೇಯಿಂಗ್ 11:
ಪಾತುಮ್ ನಿಸ್ಸಾಂಕ, ದನುಷ್ಕ ಗುಣತಿಲಕ, ಚರಿತ್ ಅಸಲಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಭಾನುಕ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಮಹೀಶ್ ತೀಕ್ಷಣ, ನುವಾನ್ ತುಷಾರ

2ನೇ ಟಿ20 ಪಂದ್ಯದ ಸ್ಕೋರ್ ಕಾರ್ಡ್‌

1
53763

Story first published: Thursday, June 9, 2022, 9:37 [IST]
Other articles published on Jun 9, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+