For Quick Alerts
ALLOW NOTIFICATIONS  
For Daily Alerts
 

AUS vs WI 2nd Test: 2ನೇ ಟೆಸ್ಟ್‌ನಿಂದ ಪ್ಯಾಟ್ ಕಮ್ಮಿನ್ಸ್ ಔಟ್, ಸ್ಟೀವ್ ಸ್ಮಿತ್‌ಗೆ ಮತ್ತೆ ಆಸೀಸ್ ನಾಯಕತ್ವ

AUS vs WI: Pat Cummins Ruled Out From 2nd Test; Steve Smith Back As Australia Captain

ಗುರುವಾರ, ಡಿಸೆಂಬರ್ 8ರಂದು ಅಡಿಲೇಡ್ ಓವಲ್‌ನಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯಕ್ಕೆ ನಾಯಕ ಪ್ಯಾಟ್ ಕಮ್ಮಿನ್ಸ್ ಅಲಭ್ಯರಾಗಲಿದ್ದು, ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತೆ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಲಿದ್ದಾರೆ.

ಪರ್ತ್‌ನಲ್ಲಿ ಕ್ವಾಡ್ ಸ್ಟ್ರೈನ್‌ಗೆ ಒಳಗಾದ ಪ್ಯಾಟ್ ಕಮ್ಮಿನ್ಸ್ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಿಂದ ಹೊರಗುಳಿದಿರುವ ಕಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಬದಲಾಗಿ ಸ್ಕಾಟ್ ಬೋಲ್ಯಾಂಡ್ ಆಯ್ಕೆಯಾಗಿದ್ದು, ಸ್ಟೀವ್ ಸ್ಮಿತ್ ಅವರಿಗೆ ನಾಯಕತ್ವ ಜವಾಬ್ದಾರಿ ನೀಡಲಾಗಿದೆ.

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ತಮ್ಮ ನಾಲ್ಕನೇ ಟೆಸ್ಟ್ ದ್ವಿಶತಕವನ್ನು ಗಳಿಸುವ ಮೂಲಕ ಬ್ಯಾಟಿಂಗ್‌ನಲ್ಲಿ ಅದ್ಭುತ ಫಾರ್ಮ್‌ ಕಂಡುಕೊಂಡಿದ್ದಾರೆ. ಇದೇ ವೇಳೆ ಮಾರ್ನಸ್ ಲ್ಯಾಬುಸ್ಚಾಗ್ನೆ ಕೂಡ ತಮ್ಮ ಎರಡನೇ ಟೆಸ್ಟ್ ದ್ವಿಶತಕವನ್ನು ಗಳಿಸಿದರು.

ಇನ್ನಿಂಗ್ಸ್‌ನಲ್ಲಿ ಎರಡು ದ್ವಿಶತಕಗಳ 17ನೇ ನಿದರ್ಶನ

ಇನ್ನಿಂಗ್ಸ್‌ನಲ್ಲಿ ಎರಡು ದ್ವಿಶತಕಗಳ 17ನೇ ನಿದರ್ಶನ

ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡದ ಇನ್ನಿಂಗ್ಸ್‌ನಲ್ಲಿ ಎರಡು ದ್ವಿಶತಕಗಳ 17ನೇ ನಿದರ್ಶನವಾಗಿದ್ದು, ರಿಕಿ ಪಾಂಟಿಂಗ್ ಮತ್ತು ಮೈಕೆಲ್ ಕ್ಲಾರ್ಕ್ ಅವರು ಭಾರತದ ವಿರುದ್ಧ ದ್ವಿಶತಕಗಳನ್ನು ಗಳಿಸಿದ ಜನವರಿ 2012ರ ನಂತರ ಆಸ್ಟ್ರೇಲಿಯಾದ ಮೊದಲ ನಿದರ್ಶನವಾಗಿದೆ.

ಮೊದಲ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾದ 164 ರನ್‌ಗಳ ವಿಜಯದ ಅಂತಿಮ ಎರಡು ದಿನಗಳಲ್ಲಿ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ಮಾಡಲು ವಿಫಲರಾದರು. ಅಡಿಲೇಡ್‌ ಪಂದ್ಯಕ್ಕಾಗಿ ಆಡುವ 11ರ ಬಳಗದಲ್ಲಿ ವೇಗದ ಬೌಲರ್ ಸ್ಕಾಟ್ ಬೋಲ್ಯಾಂಡ್ ಕಾಣಿಸಿಕೊಳ್ಳುತ್ತಾರೆ. ಕಳೆದ ಇಂಗ್ಲೆಂಡ್ ವಿರುದ್ಧದ ಮೂರು ಆಶಸ್ ಟೆಸ್ಟ್‌ಗಳಲ್ಲಿ 18 ವಿಕೆಟ್‌ಗಳನ್ನು ಪಡೆದ ನಂತರ ಟೆಸ್ಟ್ ಆಡಿಲ್ಲವೆಂಬುದನ್ನು ಗಮನಿಸಬೇಕಾಗಿದೆ.

ಮತ್ತೊಮ್ಮೆ ಆಸ್ಟ್ರೇಲಿಯಾ ತಂಡದ ನಾಯಕರಾಗಲಿದ್ದಾರೆ ಸ್ಟೀವ್ ಸ್ಮಿತ್

ಮತ್ತೊಮ್ಮೆ ಆಸ್ಟ್ರೇಲಿಯಾ ತಂಡದ ನಾಯಕರಾಗಲಿದ್ದಾರೆ ಸ್ಟೀವ್ ಸ್ಮಿತ್

ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರು ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಅಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕನಾದ ನಂತರ ಮತ್ತೊಮ್ಮೆ ಆಸ್ಟ್ರೇಲಿಯಾ ತಂಡದ ನಾಯಕರಾಗಲಿದ್ದಾರೆ.

"ಆಸ್ಟ್ರೇಲಿಯಾ ತಂಡದ ವೈದ್ಯಕೀಯ ಸಿಬ್ಬಂದಿ ಅಡಿಲೇಡ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ನಾಳೆ ಪ್ರಾರಂಭವಾಗುವ ಪಂದ್ಯಕ್ಕೆ ವೇಗದ ಬೌಲರ್‌ ಸಂಪೂರ್ಣವಾಗಿ ಫಿಟ್ ಆಗಲು ಸಾಕಷ್ಟು ಸಮಯವಿಲ್ಲ ಎಂದು ಆಯ್ಕೆಗಾರರು ಪರಿಗಣಿಸಿದ್ದಾರೆ. ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪ್ಯಾಟ್ ಕಮ್ಮಿನ್ಸ್ ಮರಳುವ ನಿರೀಕ್ಷೆಯಿದೆ," ಎಂದು ಮೂಲಗಳು ತಿಳಿಸಿವೆ.

ಫೆಬ್ರವರಿಯಲ್ಲಿ ಭಾರತ ವಿರುದ್ಧದ ನಾಲ್ಕು ಟೆಸ್ಟ್‌ಗಳ ಪ್ರವಾಸ

ಫೆಬ್ರವರಿಯಲ್ಲಿ ಭಾರತ ವಿರುದ್ಧದ ನಾಲ್ಕು ಟೆಸ್ಟ್‌ಗಳ ಪ್ರವಾಸ

ಮುಂದಿನ ಐದು ವಾರಗಳ ಕಡಿಮೆ ಅವಧಿಯಲ್ಲಿ ಆಸ್ಟ್ರೇಲಿಯಾ ಐದು ಟೆಸ್ಟ್ ಪಂದ್ಯಗಳನ್ನು ಆಡುವುದರಿಂದ, ವೇಗದ ಬೌಲರ್‌ಗಳನ್ನು ನಿಭಾಯಿಸುವುದು ಆಯ್ಕೆಗಾರರಿಗೆ ಸವಾಲಾಗಿರುತ್ತದೆ. ಅನಂತರ ಭಾರತ ವಿರುದ್ಧದ ನಾಲ್ಕು ಟೆಸ್ಟ್‌ಗಳ ಪ್ರವಾಸ ಆರಂಭವಾಗಲಿದೆ.

Story first published: Wednesday, December 7, 2022, 13:22 [IST]
Other articles published on Dec 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+