ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆಸೀಸ್ ಫೇವರಿಟ್: ಅಕ್ರಮ್

ಇಸ್ಲಮಾಬಾದ್: ಬಹು ನಿರೀಕ್ಷಿತ ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ಗೆಲ್ಲುವ ಫೇವರಿಟ್ ತಂಡ ಎಂದು ಪಾಕಿಸ್ತಾನದ ಮಾಜಿ ವೇಗಿ, ಮಾಜಿ ನಾಯಕ ವಾಸಿಮ್ ಅಕ್ರಮ್ ಹೇಳಿದ್ದಾರೆ. ಡಿಸೆಂಬರ್-ಜನವರಿಯಲ್ಲಿ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ನಡೆಯಲಿದೆ.
ಯೂ ಟ್ಯೂಬ್ ಚಾನೆಲ್ ಕ್ರಿಕೆಟ್ ಬಾಝ್‌ನಲ್ಲಿ ಮಾತನಾಡಿದ ಅಕ್ರಮ್, 'ಆಸ್ಟ್ರೇಲಿಯಾದ ವೇಗದ ಬೌಲಿಂಗ್ ವಿಶ್ವದಲ್ಲೇ ಅತ್ಯುತ್ತಮವಾದುದು ಎಂದು ನನಗನ್ನಿಸುತ್ತದೆ. ಅವರಲ್ಲಿ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್ವುಡ್ ಮತ್ತು ಇನ್ನಿತರ ಟಾಪ್ ಕ್ಲಾಸ್ ಬೌಲರ್‌ಗಳಿದ್ದಾರೆ. ಇತ್ತಂಡಗಳ ಕದನ ರೋಮಾಂಚಕಾರಿಯಾಗಿರಬಹುದು. ಆದರೆ ಆಸ್ಟ್ರೇಲಿಯಾ ನನ್ನ ಫೇವರಿಟ್ ತಂಡ,' ಎಂದಿದ್ದಾರೆ.
ಭಾರತ ತಂಡವೂ ಚೆನ್ನಾಗಿ ಎಂದು ಅಕ್ರಮ್ ಹೇಳಿದ್ದಾರೆ. 'ಭಾರತ ತಂಡದಲ್ಲಿ ಈಗ ಹೆಚ್ಚಿನ ವಿಶ್ವಾಸವಿದೆ. ಅವರ ಬಾಡಿ ಲ್ಯಾಂಗ್ವೇಜ್ ಬದಲಾಗಿದೆ. 90ರ ದಶಕದಲ್ಲಿದ್ದಂತೆಯೇ ಈಗಲೂ ಅವರಲ್ಲಿ ಸ್ವ ಆತ್ಮವಿಶ್ವಾಸವಿದೆ,' ಎಂದು ಅಕ್ರಮ್ ವಿವರಿಸಿದ್ದಾರೆ.
ನವೆಂಬರ್ 27ರಿಂದ ಭಾರತ-ಆಸ್ಟ್ರೇಲಿಯಾ ಸರಣಿ ಆರಂಭವಾಗಲಿದೆ. 3 ಏಕದಿನ, 3 ಟಿ20ಐ ಮತ್ತು 4 ಟೆಸ್ಟ್ ಪಂದ್ಯಗಳನ್ನು ಸರಣಿ ಒಳಗೊಂಡಿರಲಿದೆ. ಮೊದಲು ಏಕದಿನ ಸರಣಿ ಆರಂಭವಾದರೆ ಕೊನೆಯಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದೆ. ಐಪಿಎಲ್ ಬಳಿಕ ಭಾರತ ತಂಡ ದುಬೈನಿಂದಲೇ ಜೊತೆಯಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications