ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಟ್ರಾವಿಸ್ ಹೆಡ್ ಕಂಬ್ಯಾಕ್

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ತವರಿನಲ್ಲೇ ಮುಖಭಂಗ ಎದುರಿಸಿದ ಆಸ್ಟ್ರೇಲಿಯಾವು ಸೂಪರ್ 12 ಹಂತದಲ್ಲೇ ತನ್ನ ಅಭಿಯಾನ ಕೊನೆಗೊಳಿಸಿತು. ವಿಶ್ವಕಪ್‌ಗೂ ಮುನ್ನ ಪ್ರಶಸ್ತಿ ಗೆಲುವಿನ ಫೇವರಿಟ್ ಆಗಿದ್ದ ಆಸಿಸ್ ಪಡೆ ಭಾರೀ ನಿರಾಸೆ ಅನುಭವಿಸಿದೆ. ಆದ್ರೀಗ ಹೊಸದಾಗಿ ಸಂಘಟಿತಗೊಂಡು ಮುಂದಿನ ಹೆಜ್ಜೆ ಇಡಲು ರೆಡಿಯಾಗಿದೆ.
ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟಗೊಂಡಿದ್ದು, ಪ್ಯಾಟ್ ಕಮಿನ್ಸ್ ನಾಯಕತ್ವದ ಸ್ಕ್ವಾಡ್‌ನಲ್ಲಿ 14 ಆಟಗಾರರು ಸ್ಥಾನ ಪಡೆದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅವಕಾಶ ಮಿಸ್ ಮಾಡಿಕೊಂಡಿದ್ದ ಟ್ರಾವಿಸ್ ಹೆಡ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.
ಮುಂದಿನ ವರ್ಷ ಅಂದ್ರೆ 2023ರಲ್ಲಿ ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಿದೆ. ಹೀಗಾಗಿ ಈಗಿನಿಂದಲೇ ಬಲಿಷ್ಠ ತಂಡವನ್ನ ರೂಪಿಸಲು ಆಸಿಸ್ ಟೀಂ ಮ್ಯಾನೇಜ್‌ಮೆಂಟ್ ರೆಡಿಯಾಗಿದೆ. ಈ ಕ್ರಮವಾಗಿ ಮೊದಲ ಸರಣಿಯಾಗಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಇದಾದ ಬಳಿಕ ವೆಸ್ಟ್ ಇಂಡೀಸ್ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಬರಲಿದ್ದು, ಟೆಸ್ಟ್ ಸರಣಿಗೂ ಕಾಂಗರೂ ಸ್ಕ್ವಾಡ್ ಘೋಷಣೆಯಾಗಿದೆ.

ಆ್ಯರೋನ್ ಫಿಂಚ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹಿನ್ನಲೆ, ಟ್ರಾವಿಸ್ ಹೆಡ್‌ಗೆ ಅವಕಾಶ
ಟಿ20 ವಿಶ್ವಕಪ್‌ಗೂ ಮುನ್ನವೇ ಆ್ಯರೋನ್ ಫಿಂಚ್ ಏಕದಿನ ಕ್ರಿಕೆಟ್ ಫಾರ್ಮೆಟ್‌ಗೆ ನಿವೃತ್ತಿ ಘೋಷಿಸಿದ ಹಿನ್ನಲೆಯಲ್ಲಿ ಓಪನಿಂಗ್ ಸ್ಲಾಟ್ ತೆರವಾಗಿದ್ದು, ಆ ಸ್ಥಾನಕ್ಕೆ ಟ್ರಾವಿಸ್ ಹೆಡ್ ಆಯ್ಕೆಯಾಗಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಏಕದಿನ ಸ್ಕ್ವಾಡ್‌ಗೆ ಟ್ರಾವಿಸ್ ಕಂಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು.
ವರ್ಕ್‌ಲೋಡ್ ನಿಭಾಯಿಸುವ ಉದ್ದೇಶವಿದ್ದರೂ ಆಸ್ಟ್ರೇಲಿಯಾ ತಂಡದ ಆಟಗಾರರ ಆಯ್ಕೆ ಸಮಿತಿಯು ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್‌ಗೆ ಎರಡು ಸರಣಿಗಳಿಗೂ ಆಯ್ಕೆ ಮಾಡಿದೆ.
ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಟ್ರಾವಿಸ್ ಹೆಡ್ ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಮಿಸ್ ಆಗಿದ್ದರು. ಆದ್ರೀಗ ಕಂಬ್ಯಾಕ್ ಮಾಡಿದ್ದು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಡೇವಿಡ್ ವಾರ್ನರ್ ಜೊತೆಯಲ್ಲಿ ಕಣಕ್ಕಿಳಿಯಲಿದ್ದು, ಆಸಿಸ್‌ನ ಹೊಸ ಓಪನಿಂಗ್ ಜೋಡಿಯಾಗಿದೆ.
T20 ವಿಶ್ವಕಪ್ 2022: ಬೌಲರ್‌ಗಳಿಗೆ ಬಿಸಿನೆಸ್ ಕ್ಲಾಸ್ ಸೀಟು ಬಿಟ್ಟುಕೊಟ್ಟ ರೋಹಿತ್, ಕೊಹ್ಲಿ, ದ್ರಾವಿಡ್!

3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಸಿಸ್-ಇಂಗ್ಲೆಂಡ್ ಮುಖಾಮುಖಿ
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿದ್ದು, ವಿಶ್ವಕಪ್ ಮುಗಿದು ಕೇವಲ ನಾಲ್ಕು ದಿನಗಳಲ್ಲಿ ಅಂದ್ರೆ, ನವೆಂಬರ್ 17ರಂದು ಸರಣಿ ಆರಂಭಗೊಳ್ಳಲಿದೆ. ಪ್ಯಾಟ್ ಕಮಿನ್ಸ್ ಚೊಚ್ಚಲ ಏಕದಿನ ಫಾರ್ಮೆಟ್ ನಾಯಕನಾಗಿ ಆಡಲಿದ್ದಾರೆ.
'' ಪ್ಯಾಟ್ ಕಮಿನ್ಸ್ ಏಕದಿನ ಫಾರ್ಮೆಟ್‌ನ ಹೊಸ ನಾಯಕನಾಗಿ ಆಯ್ಕೆಯಾಗಿರುವುದರಿಂದ ನಮ್ಮ ಮುಂದಿನ ಗುರಿ ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಬಲಿಷ್ಠ ಸ್ಕ್ವಾಡ್ ಅನ್ನು ಸಿದ್ಧಗೊಳಿಸುವುದಾಗಿದೆ. ಹೀಗಾಗಿ ಇದೊಂದು ಮಹತ್ವದ ಸರಣಿಯಾಗಿದ್ದು, ಆ್ಯರೋನ್ ಫಿಂಚ್ ಬದಲು ಅವಕಾಶ ಪಡೆದಿರುವ ಟ್ರಾವಿಸ್ ಹೆಡ್, ಕಳೆದ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಉತ್ತಮವಾಗಿ ಆಡಿದ್ದರು. ಆತ ಏಕದಿನ ಫಾರ್ಮೆಟ್‌ನಲ್ಲಿ ಯಾವುದೇ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ನಮ್ಮ ಮುಂದಿನ ಅವಕಾಶಗಳು ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಹೆಚ್ಚಿನ ಅನುಭವ ಸೃಷ್ಟಿಗೆ ಕಾರಣವಾಗಲಿದೆ'' ಎಂದು ಆಯ್ಕೆಗಾರರ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಬಳಿಕ, ಆಸ್ಟ್ರೇಲಿಯಾ ತಂಡದ ಪರ್ತ್‌ಗೆ ಪ್ರಯಾಣ ಬೆಳೆಸಲಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ವಿಂಡೀಸ್ ಟೆಸ್ಟ್ ಸರಣಿಯು ನವೆಂಬರ್ 30ರಂದು ಪ್ರಾರಂಭಗೊಳ್ಳಲಿದ್ದು, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯು ನವೆಂಬರ್ 22ಕ್ಕೆ ಮುಕ್ತಾಯಗೊಳ್ಳಲಿದೆ.
ಡಿಸೆಂಬರ್ 8ರಂದು ಅಡಿಲೇಡ್ ಎರಡನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. 13 ಆಟಗಾರರ ಸ್ಕ್ವಾಡ್ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯಲಿದೆ.
ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ 15ನೇ ಆವೃತ್ತಿ: ಅವಿನಾಶ್ ಸಾಬಲೆ ರಾಯಭಾರಿಯಾಗಿ ನೇಮಕ

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಆಸ್ಟ್ರೇಲಿಯಾ ಸ್ಕ್ವಾಡ್
ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯ್ನಿಸ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಸ್ಕ್ವಾಡ್
ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಥಾನ್ ಲಿಯಾನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications