For Quick Alerts
ALLOW NOTIFICATIONS  
For Daily Alerts
 

ಜೋಸ್ ಇಂಗ್ಲಿಸ್ ಇಂಜ್ಯುರಿ ನೆಪ: ಕ್ಯಾಮರೂನ್ ಗ್ರೀನ್‌ ತಂಡಕ್ಕೆ ಸೇರಿಸಿಕೊಳ್ಳಲು ಆಸ್ಟ್ರೇಲಿಯಾ ಪ್ಲ್ಯಾನ್ ಮಾಡಿತಾ?

Australia team

ಐಸಿಸಿ ಟಿ20 ವಿಶ್ವಕಪ್‌ನ ಪ್ರಾರಂಭಕ್ಕೆ ಇನ್ನೆರಡು ದಿನಗಳಿರುವಂತೆ ಆಸ್ಟ್ರೇಲಿಯಾ ಸ್ಕ್ವಾಡ್‌ನಲ್ಲಿ ದೊಡ್ಡ ಬದಲಾವಣೆ ಆಗಿದೆ. ಆಸ್ಟ್ರೇಲಿಯಾ ತಂಡಕ್ಕೆ ಸ್ಫೋಟಕ ಆಟಗಾರ ಕ್ಯಾಮರೂನ್ ಗ್ರೀನ್ ತಂಡಕ್ಕೆ ಸೇರ್ಪಡೆಯಾಗಿದ್ದು, ಜೋಸ್ ಇಂಗ್ಲಿಸ್‌ ತಂಡದಿಂದ ಹೊರಬಿದ್ದಿದ್ದಾರೆ.

ಕೊನೆಯ ಕ್ಷಣದಲ್ಲಿ ಆಸ್ಟ್ರೇಲಿಯಾ ಸ್ಕ್ವಾಡ್‌ನಲ್ಲಿನ ಈ ಬದಲಾವಣೆಯು ನಿಜಕ್ಕೂ ಎಲ್ಲರನ್ನ ಆಶ್ಚರ್ಯಗೊಳಪಡಿಸಿದೆ. ಜೊತೆಗೆ ಜೋಸ್ ಇಂಗ್ಲಿಸ್‌ ನಿಜಕ್ಕೂ ಗಾಯಗೊಂಡಿದ್ದಾರಾ? ಕ್ಯಾಮರೂನ್ ಗ್ರೀನ್‌ರನ್ನು ಸ್ಕ್ವಾಡ್‌ಗೆ ಸೇರಿಸಿಕೊಳ್ಳಲು ಆಸಿಸ್‌ ಕ್ರಿಕೆಟ್ ಬೋರ್ಡ್ ನಾಟಕವಾಡಿದ್ಯಾ ಎಂಬೆಲ್ಲಾ ಪ್ರಶ್ನೆಗಳನ್ನ ನೆಟ್ಟಿಗರು ಕೇಳಿದ್ದಾರೆ.

ಆಸ್ಟ್ರೇಲಿಯಾ vs ನ್ಯೂಜಿಲೆಂಡ್ ಮೊದಲ ಪಂದ್ಯ

ಆಸ್ಟ್ರೇಲಿಯಾ vs ನ್ಯೂಜಿಲೆಂಡ್ ಮೊದಲ ಪಂದ್ಯ

ಸೂಪರ್ 12 ಹಂತದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು ತನ್ನ ಪಕ್ಕದ ರಾಷ್ಟ್ರ ನ್ಯೂಜಿಲೆಂಡ್ ತಂಡದ ಸವಾಲನ್ನು ಸ್ವೀಕರಿಸಲಿದೆ. ಸಿಡ್ನಿಯ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿರುವ ಸೂಪರ್ 12 ಹಂತದ ಗ್ರೂಪ್ 1ರ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿವೆ.

ಕಳೆದ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವು ನ್ಯೂಜಿಲೆಂಡ್ ತಂಡವನ್ನ ಮಣಿಸಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಈ ಬಾರಿಯು ಆಸ್ಟ್ರೇಲಿಯಾ ತನ್ನ ಪ್ರಭಾವಶಾಲಿ ಪ್ರದರ್ಶನ ಮುಂದುವರಿಸಲು ಎದುರು ನೋಡುತ್ತಿದೆ.

ಕ್ಯಾಮರೂನ್ ಗ್ರೀನ್‌ಗೆ ಅವಕಾಶ ನೀಡಲು, ಜೋಸ್ ಇಂಗ್ಲಿಸ್‌ಗೆ ಇಂಜ್ಯುರಿಯೇ?

ಕ್ಯಾಮರೂನ್ ಗ್ರೀನ್‌ಗೆ ಅವಕಾಶ ನೀಡಲು, ಜೋಸ್ ಇಂಗ್ಲಿಸ್‌ಗೆ ಇಂಜ್ಯುರಿಯೇ?

ಭಾರತ ವಿರುದ್ಧದ ಟಿ20 ಸರಣಿಯಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದ ಕ್ಯಾಮರೂನ್ ಗ್ರೀನ್, ಆಸಿಸ್ ವಿಶ್ವಕಪ್‌ 15 ಆಟಗಾರರ ಸ್ಕ್ವಾಡ್‌ನಲ್ಲಿ ಅವಕಾಶ ಪಡೆಯುವಲ್ಲಿ ಸಾಧ್ಯವಾಗದೇ ಇರುವುದು ಆಶ್ಚರ್ಯಕ್ಕೆ ಎಡೆಮಾಡಿತ್ತು. ಆದ್ರೀಗ ವಿಶ್ವಕಪ್‌ ಪಂದ್ಯಕ್ಕೆ ಎರಡು ದಿನ ಇರುವಂತೆ ಕ್ಯಾಮರೂನ್ ಗ್ರೀನ್ ಆಸಿಸ್ ತಂಡ ಸೇರಿಕೊಳ್ಳುವ ಮೂಲಕ ಅನೇಕ ಪ್ರಶ್ನೆಗಳಿಗೆ ಕಾರಣವಾಗಿದ್ದಾರೆ. ಅದ್ರಲ್ಲೂ ಆಸ್ಟ್ರೇಲಿಯಾ ತಂಡದ ಪರ ಅವಕಾಶ ಪಡೆದಿದ್ದ ಜೋಸ್ ಇಂಗ್ಲಿಸ್‌ ಗಾಯಗೊಂಡಿದ್ದಾದ್ರೂ ಹೇಗೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್: ಟೂರ್ನಿ ಆಯೋಜನೆಯಲ್ಲಿ ಎಡವಿತೇ ಐಸಿಸಿ? ಪದೇ ಪದೇ ಮಳೆಕಾಟ!

ವಿಶ್ವಕಪ್ ಸಮೀಪವಿದ್ದಾಗ ಗಾಲ್ಫ್‌ ಆಡಿ ಇಂಗ್ಲಿಸ್ ಗಾಯಗೊಂಡಿದ್ದೇಗೆ?

ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಇನ್ನೆರಡು ದಿನ ಇರುವಂತೆ ಆಸಿಸ್‌ನ ಬ್ಯಾಕಪ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಇಂಗ್ಲಿಸ್ ಇಂಜ್ಯುರಿ ಆಗಿದ್ದಾದ್ರೂ ಹೇಗೆ? ಅದರಲ್ಲೂ ಗಾಲ್ಫ್‌ ಆಡುವಾಗ ಹೇಗೆ ಗಾಯಗೊಳ್ಳಲು ಸಾಧ್ಯ ಎಂದು ನೆಟ್ಟಿಗರು ಆಸಿಸ್‌ ಗೇಮ್‌ಪ್ಲಾನ್ ಅನ್ನು ಪ್ರಶ್ನಿಸಿದ್ದಾರೆ.

ಅದ್ರಲ್ಲೂ ಅತ್ಯಂತ ಸುರಕ್ಷಿತ ಕ್ರೀಡೆಯಾದ ಗಾಲ್ಫ್‌ ಆಡುವಾಗ ಜೋಸ್ ಇಂಗ್ಲಿಸ್ ಗಾಯಗೊಂಡಿದ್ದಾದ್ರೂ ಹೇಗೆ ಎಂಬುದು ಎಲ್ಲರ ಪ್ರಮುಖ ಪ್ರಶ್ನೆಯಾಗಿದೆ. ಜೊತೆಗೆ ಕ್ಯಾಮರೂನ್ ಗ್ರೀನ್ ಸ್ಕ್ವಾಡ್‌ಗೆ ಸೇರಿಸಿಕೊಳ್ಳಲು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಈ ರೀತಿಯ ನಿರ್ಧಾರ ಮಾಡಿದೆ ಎಂಬುದು ಮೇಲ್ಮೋಟಕ್ಕೆ ಕಂಡುಬಂದಿದೆ. ಭಾರತದ ಪ್ರವಾಸದಲ್ಲಿ ಈ ಆಟಗಾರ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಆಯ್ಕೆಗಾರರ ಗಮನಸೆಳೆಯುವಲ್ಲಿ ಯಶಸ್ವಿಯಾದ್ರು ಎಂಬುದು ಗಮನಾರ್ಹ.

2023ರ ವಿಶ್ವಕಪ್‌ನಿಂದ ಹಿಂದೆ ಸರಿಯುವ ಪಾಕ್ ಬೆದರಿಕೆಗೆ ಕೇಂದ್ರ ಕ್ರೀಡಾ ಸಚಿವರ ತೀಕ್ಷ್ಣ ಪ್ರತಿಕ್ರಿಯೆ

ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಸ್ಕ್ವಾಡ್

ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಸ್ಕ್ವಾಡ್

ಆ್ಯರೋನ್ ಫಿಂಚ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಝಂಪಾ

Story first published: Thursday, October 20, 2022, 20:14 [IST]
Other articles published on Oct 20, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+