Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಟಿ20 ವಿಶ್ವಕಪ್: ಟೂರ್ನಿ ಆಯೋಜನೆಯಲ್ಲಿ ಎಡವಿತೇ ಐಸಿಸಿ? ಪದೇ ಪದೇ ಮಳೆಕಾಟ!

ICC T20 world cup 2022

ಟಿ20 ವಿಶ್ವಕಪ್ ಈಗಾಗಲೇ ಭರ್ಜರಿ ಆರಂಭ ಪಡೆದಿದ್ದು ಗ್ರೂ ಎ ಮತ್ತು ಗ್ರೂಪ್‌ ಬಿ ನಲ್ಲಿ ತಂಡಗಳು ಸೂಪರ್ 12 ಪ್ರವೇಶಕ್ಕೆ ಕಠಿಣ ಪ್ರದರ್ಶನ ನೀಡುತ್ತಿವೆ. ಸೆಪ್ಟೆಂಬರ್ 23ರಂದು ಭಾರತ ಮತ್ತು ಪಾಕಿಸ್ತಾನ ಆಡುವ ಮೂಲಕ ಚುಟುಕು ವಿಶ್ವಕಪ್ ಆವೃತ್ತಿಯಲ್ಲಿ ಉಭಯ ತಂಡಗಳು ಅಭಿಯಾನ ಆರಂಭಿಸಲಿವೆ.

ಈ ಸರಣಿಯ ಸೂಪರ್ 12 ಸುತ್ತಿನ ಪಂದ್ಯಗಳು ಅಕ್ಟೋಬರ್ 22 ರಿಂದ ಪ್ರಾರಂಭವಾಗಲಿವೆ. ಇದಕ್ಕಾಗಿ ಅರ್ಹತಾ ಪಂದ್ಯಗಳು ಮತ್ತು ಅಭ್ಯಾಸ ಪಂದ್ಯಗಳು ಪ್ರಸ್ತುತ ನಡೆಯುತ್ತಿವೆ. ಶ್ರೀಲಂಕಾ ಈಗಾಗಲೇ ಅರ್ಹತೆ ಪಡೆದಿದ್ದು, ಗ್ರೂಪ್ 2ನಲ್ಲಿ ಸ್ಪರ್ಧಿಸಲಿವೆ.

ಮಳೆಯಿಂದಾಗಿ 3 ಅಭ್ಯಾಸ ಪಂದ್ಯ ಈಗಾಗಲೇ ರದ್ದು

ಮಳೆಯಿಂದಾಗಿ 3 ಅಭ್ಯಾಸ ಪಂದ್ಯ ಈಗಾಗಲೇ ರದ್ದು

ಹೆಚ್ಚಿನ ವೇಗದ ಫೀಲ್ಡ್, ಸ್ಫೋಟಕ ಬ್ಯಾಟಿಂಗ್ ಮತ್ತು ಅದ್ಭುತ ಬೌನ್ಸರ್‌ ಜೊತೆಗೆ ದೊಡ್ಡದಾದ ಸ್ಟೇಡಿಯಂ ಹೊಂದಿರುವ ಆಸ್ಟ್ರೇಲಿಯಾದಲ್ಲಿ ಪಂದ್ಯಗಳು ಹೆಚ್ಚು ಕುತೂಹಲ ಮೂಡಿಸಿದ್ದು, ಅಭಿಮಾನಿಗಳು ಟಿ20 ವಿಶ್ವಕಪ್‌ ಅನ್ನು ಉತ್ತಮವಾಗಿ ಬೆಂಬಲಿಸುತ್ತಿದ್ದಾರೆ. ಆದ್ರೆ ಈಗ ಎದುರಾಗಿರುವ ತೊಂದರೆ ಅಂದ್ರೆ ಹವಾಮಾನ. ಅಭ್ಯಾಸ ಪಂದ್ಯಗಳಿಗೆ ಅಡ್ಡಿಪಡಿಸಿರುವ ಮಳೆಯು ಈಗ ಮುಖ್ಯ ಪಂದ್ಯಗಳಿಗೂ ಪದೇ ಪದೇ ಅಡ್ಡಿ ಪಡಿಸುತ್ತಿದೆ. ಇದರರ್ಥ ಆಸ್ಟ್ರೇಲಿಯಾದ ವಿವಿಧ ನಗರಗಳಲ್ಲಿ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಆತಂಕ ಎದುರಾಗಿದೆ.

ಪಾಕ್ ಮತ್ತು ಅಫ್ಘಾನಿಸ್ತಾನ ಪಂದ್ಯವೂ ರದ್ದು!

ಪಾಕ್ ಮತ್ತು ಅಫ್ಘಾನಿಸ್ತಾನ ಪಂದ್ಯವೂ ರದ್ದು!

ಬ್ರಿಸ್ಬೇನ್‌ನ ಪ್ರಸಿದ್ಧ ಗಬ್ಬಾ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಶಾಹೀನ್ ಅಫ್ರಿದಿ ಯಾರ್ಕರ್, ಅಫ್ಗಾನ್ ಪ್ರಬಲ ಹೋರಾಟ, ಕುತೂಹಲ ಮೂಡಿಸಿದ್ದ ಈ ಪಂದ್ಯಕ್ಕೆ ದಿಢೀರ್ ಮಳೆ ಸುರಿದಿತ್ತು. ಹೆಚ್ಚು ಹೊತ್ತು ಮಳೆ ನಿಲ್ಲದ ಕಾರಣ ಪಂದ್ಯ ಸಂಪೂರ್ಣ ರದ್ದಾಯಿತು.

ಹೈವೋಲ್ಟೇಜ್ ಪಂದ್ಯಕ್ಕೆ ಅಡ್ಡಗಾಲಿಡಲಿರುವ ವರುಣ: ಭಾರತ-ಪಾಕ್ ಪಂದ್ಯಕ್ಕೆ ಮಳೆ ಕಾಟ?

ಭಾರತ ನ್ಯೂಜಿಲೆಂಡ್ ಪಂದ್ಯವೂ ಮಳೆಯಲ್ಲೇ ಕೊಚ್ಚಿ ಹೋಯಿತು

ಭಾರತ ನ್ಯೂಜಿಲೆಂಡ್ ಪಂದ್ಯವೂ ಮಳೆಯಲ್ಲೇ ಕೊಚ್ಚಿ ಹೋಯಿತು

ಬುಧವಾರ ಭಾರತ-ನ್ಯೂಜಿಲೆಂಡ್ ತಂಡಗಳು ಅಭ್ಯಾಸ ಪಂದ್ಯವನ್ನು ಆಡಲಿವೆ. ಮಳೆ ಕಡಿಮೆಯಾಗದ ಕಾರಣ ಟಾಸ್ ಕೂಡ ಇಲ್ಲದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರ ಬೆನ್ನಲ್ಲೇ ಬಾಂಗ್ಲಾದೇಶ-ದಕ್ಷಿಣ ಆಫ್ರಿಕಾ ನಡುವೆ ನಡೆಯಬೇಕಿದ್ದ ಅಭ್ಯಾಸ ಪಂದ್ಯವೂ ಒಂದೇ ಒಂದು ಚೆಂಡು ಎಸೆತವನ್ನೂ ಕಾಣದೆ ಕೊಚ್ಚಿ ಹೋಗಿದೆ.

IND Vs Pak : ಭಾರತ-ಪಾಕಿಸ್ತಾನ ಪಂದ್ಯ ರದ್ದಾದರೆ ಯಾರಿಗೆ ಲಾಭ, ಮುಂದಿನ ಲೆಕ್ಕಾಚಾರವೇನು ಗೊತ್ತಾ?

ಭಾರತ-ಪಾಕಿಸ್ತಾನ ಪಂದ್ಯಕ್ಕೂ ಎದುರಾಗಲಿದ್ಯಾ ವರುಣನ ಕಾಟ

ಭಾರತ-ಪಾಕಿಸ್ತಾನ ಪಂದ್ಯಕ್ಕೂ ಎದುರಾಗಲಿದ್ಯಾ ವರುಣನ ಕಾಟ

ಒಂದೇ ದಿನ ಮೂರು ಪಂದ್ಯಗಳು ಸಂಪೂರ್ಣ ರದ್ದಾಗಿದ್ದು, ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ. ಈ ಪಂದ್ಯದ ವೇಳೆ ಮಳೆ ಕಾಟ ಎದುರಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ
.
ಅಕ್ಟೋಬರ್ 23ರಂದು ಭಾನುವಾರ ಭಾರತ-ಪಾಕಿಸ್ತಾನ ಪಂದ್ಯ ನಡೆಯುವ ಮೆಲ್ಬರ್ನ್‌ನ ಎಂಸಿಜಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಳೆಯ ಕಾಟ ಎದುರಾಗುವ ಸಂಭವವಿದೆ. ಪಂದ್ಯದ ದಿನದಂದು ಶೇಕಡಾ 80ರಷ್ಟು ಮಳೆ ಬರುವ ಸಾಧ್ಯತೆ ಹೆಚ್ಚಿದೆ. ಹ್ಯುಮಿಡಿಟಿ ಶೇಕಡಾ 83ರಷ್ಟಿರಲಿದ್ದು, ಗಾಳಿಯು 19/km ವೇಗದಲ್ಲಿ ಬೀಸಲಿದೆ.

ಶನಿವಾರ ಅಂದ್ರೆ ಪಂದ್ಯದ ಹಿಂದಿನ ದಿನ 100ಕ್ಕೆ ಶೇಕಡಾ 99ರಷ್ಟು ಮಳೆ ಬರುವ ಸಾಧ್ಯತೆಯಿರುವುದರಿಂದ ಪಿಚ್ ಔಟ್‌ಫೀಲ್ಡ್ ತೇವಾಂಶದಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ. ಇದಷ್ಟೇ ಅಲ್ಲದೆ ಎಂಸಿಜಿಯಲ್ಲಿ ಅಕ್ಟೋಬರ್ 24, 25ರಂದು ಕೂಡ ಮಳೆ ಬರುವ ವರದಿ ಬಿತ್ತರವಾಗಿದೆ. ಇದ್ರಿಂದ ಕ್ರಿಕೆಟ್ ಅಭಿಮಾನಿಗಳು ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

T20 World Cup: ಜೋಸ್ ಇಂಗ್ಲಿಸ್ ಬದಲಿಗೆ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಬ್ಬ ಸ್ಫೋಟಕ ಆಟಗಾರ ಸೇರ್ಪಡೆ

ಟಿ20 ವಿಶ್ವಕಪ್ ಆಯೋಜನೆಯಲ್ಲಿ ಎಡವಿತೇ ಐಸಿಸಿ

ಟಿ20 ವಿಶ್ವಕಪ್ ಆಯೋಜನೆಯಲ್ಲಿ ಎಡವಿತೇ ಐಸಿಸಿ

ಟಿ20 ವಿಶ್ವಕಪ್ ಆಯೋಜನೆಯನ್ನು ಆಸ್ಟ್ರೇಲಿಯಾಗೆ ಈ ಬಾರಿ ನೀಡಿರುವ ಐಸಿಸಿ ಈ ಕುರಿತು ಎರಡು ವರ್ಷಗಳ ಹಿಂದೆಯೇ ನಿರ್ಧರಿಸಿದೆ. ವೇಳಾಪಟ್ಟಿಯನ್ನ ತಿಂಗಳುಗಳ ಹಿಂದೆಯೇ ಪ್ರಕಟಿಸಿರುವ ಕ್ರಿಕೆಟ್ ಬಿಗ್ ಬಾಸ್‌, ಮಳೆಯ ಹವಾಮಾನ ವರದಿಯನ್ನ ಅರಿಯದೇ ಎಡವಿದ್ಯಾ ಎಂಬುದು ಸದ್ಯ ಎದುರಾಗಿರುವ ಪ್ರಶ್ನೆಯಾಗಿದೆ.

ಕ್ರಿಕೆಟ್‌ನ ಹೈವೋಲ್ಟೇಜ್ ಪಂದ್ಯವಾದ ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮಳೆಯ ಭಯವಿದ್ದು, ಅಭಿಮಾನಿಗಳು ಹಿಡಿಶಾಪ ಹಾಕುತ್ತಿದ್ದಾರೆ.

Story first published: Thursday, October 20, 2022, 16:40 [IST]
Other articles published on Oct 20, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+