Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ vs ಪಾಕಿಸ್ತಾನ 2ನೇ ಟೆಸ್ಟ್: ಕುತೂಹಲ ಘಟ್ಟ ತಲುಪಿದ ಅಂತಿಮ ದಿನದಾಟ; ಲೈವ್ ಸ್ಕೋರ್ ಇಲ್ಲಿದೆ

Australia tour of Pakistan: Australia vs Pakistan second test Day 5 live score

ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ಪಾಕ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ, 3 ಪಂದ್ಯಗಳ ಏಕದಿನ ಸರಣಿ ಹಾಗೂ ಏಕೈಕ ಟಿ ಟ್ವೆಂಟಿ ಪಂದ್ಯದಲ್ಲಿ ಸೆಣಸಾಟ ನಡೆಸುತ್ತಿದೆ. ಮೊದಲಿಗೆ ಇತ್ತಂಡಗಳ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಿದ್ದು, ರಾವಲ್ಪಿಂಡಿಯಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ನಂತರ ಇದೀಗ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಕರಾಚಿಯಲ್ಲಿ ನಡೆಯುತ್ತಿದ್ದು ಪಂದ್ಯ ಐದನೇ ದಿನಕ್ಕೆ ಕಾಲಿಟ್ಟಿದ್ದು ಕುತೂಹಲ ಮೂಡಿಸಿದೆ.

ಮಾರ್ಚ್ 12ರಂದು ಆರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 556 ರನ್ ಗಳಿಸಿತು. ಇತ್ತ ಅತಿಥೇಯ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 148 ರನ್ ಕಲೆಹಾಕಿ 408 ರನ್‌ಗಳ ಬೃಹತ್ ಹಿನ್ನಡೆ ಅನುಭವಿಸಿತು. ಇತ್ತ ಪಾಕಿಸ್ತಾನ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ ಆಸ್ಟ್ರೇಲಿಯಾ ಫಾಲೋಆನ್ ಒಡ್ಡದೇ ತನ್ನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸುವ ಮೂಲಕ ಅಚ್ಚರಿ ಮೂಡಿಸಿತ್ತು. ಮೊದಲೇ ದೊಡ್ಡ ಮುನ್ನಡೆಯನ್ನು ಸಾಧಿಸಿದ್ದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 97 ರನ್ ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು ಹಾಗೂ ಪಾಕಿಸ್ತಾನ 505 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.

ಇತ್ತ ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲಿಯೇ ತನ್ನ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ 1 ರನ್ ಗಳಿಸಿ ಔಟ್ ಆದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಜರ್ ಅಲಿ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಪಾಕಿಸ್ತಾನ 21 ರನ್‌ಗಳಿಗೆ ತನ್ನ ಮೊದಲ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಮತ್ತೋರ್ವ ಆರಂಭಿಕ ಆಟಗಾರ ಅಬ್ದುಲ್ಲಾ ಶಫಿಕ್ ಜೊತೆಗೂಡಿದ ನಾಯಕ ಬಾಬರ್ ಅಜಮ್ ಉತ್ತಮ ಜೊತೆಯಾಟ ಆಡಿದ್ದಾರೆ. ನಾಲ್ಕನೇ ದಿನದಾಟದಂತ್ಯದವರೆಗೂ ವಿಕೆಟ್ ಕಳೆದುಕೊಳ್ಳದ ಈ ಜೋಡಿ ಐದನೇ ದಿನದ ಆರಂಭದಲ್ಲಿಯೂ ತನ್ನ ಹೋರಾಟವನ್ನು ಮುಂದುವರೆಸಿದೆ.

ಐದನೇ ದಿನದ ಆಟ ಇಂದು ( ಮಾರ್ಚ್ 16 ) ಆರಂಭವಾಗಿದ್ದು, ಪಾಕಿಸ್ತಾನ 98 ಓವರ್‌ಗಳ ನಂತರ 2 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿದೆ. ಕಣದಲ್ಲಿರುವ ಪಾಕ್ ನಾಯಕ ಬಾಬರ್ ಅಜಮ್ ಅಜೇಯ 121 ಮತ್ತು ಅಬ್ದುಲ್ಲಾ ಶಫಿಕ್ ಅಜೇಯ 82 ರನ್ ಗಳಿಸಿದ್ದು, ನಿಧಾನಗತಿಯಲ್ಲಿ ಜವಾಬ್ದಾರಿಯುತ ಆಟವನ್ನಾಡುತ್ತಿದ್ದಾರೆ. ಇನ್ನು ಪಾಕಿಸ್ತಾನಕ್ಕೆ ಗೆಲ್ಲಲು ಇನ್ನೂ 280 ರನ್‌ಗಳ ಅಗತ್ಯತೆ ಇದ್ದು, ಇದೇ ವೇಗದಲ್ಲಿ ಪಾಕ್ ಆಟಗಾರರು ಬ್ಯಾಟ್ ಬೀಸಿದರೆ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಅಥವಾ ಆಸ್ಟ್ರೇಲಿಯಾ ಬೌಲರ್‌ಗಳು ಮೊದಲ ಇನ್ನಿಂಗ್ಸ್ ರೀತಿ ವಿಕೆಟ್ ಪಡೆಯಲು ಮುಂದಾದರೆ ಪಾಕ್ ಈ ಪಂದ್ಯವನ್ನು ಸೋಲುವ ಸಾಧ್ಯತೆಗಳಿವೆ.

ಆಸ್ಟ್ರೇಲಿಯಾ vs ಪಾಕಿಸ್ತಾನ 2ನೇ ಟೆಸ್ಟ್ ಪಂದ್ಯದ ಲೈವ್ ಸ್ಕೋರ್ ಇಲ್ಲಿದೆ:

{cricket_660-2022_52519}

ಪಾಕಿಸ್ತಾನ ತಂಡ: ಅಬ್ದುಲ್ಲಾ ಶಫೀಕ್, ಮಲಕ್, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಫವಾದ್ ಅಲ್-ಆಮ್, ಮುಹಮ್ಮದ್ ರಿಜಾವಾ (ವಿಕೆಟ್ ಕೀಪರ್), ಫಾಹಿಮ್ ಅಶ್ರಫ್, ಹಸನ್ ಅಲಿ, ನುಮಾನ್ ಅಲಿ, ಶಾಹೀನ್ ಫರಿದಿ, ಸಾಜಿದ್ ಖಾನ್

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ ( ನಾಯಕ ) ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಮಿಚೆಲ್ ಸ್ವೆಪ್ಸನ್

Story first published: Wednesday, March 16, 2022, 12:14 [IST]
Other articles published on Mar 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+