ಆಸ್ಟ್ರೇಲಿಯಾ-ಇಂಗ್ಲೆಂಡ್ ಮಹಿಳಾ ಆ್ಯಶಸ್ ಟೆಸ್ಟ್: ಮೊದಲ ದಿನದಾಟದಲ್ಲಿ ಆಸೀಸ್ ಮೇಲುಗೈ

ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಏಕೈಕ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ದಿನದಾಟದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 327 ರನ್ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್ ಆಸೀಸ್ ಮಹಿಳಾ ಪಡೆಯನ್ನ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಓಪನಿಂಗ್ಸ್ ಬ್ಯಾಟ್ಸ್‌ವುಮೆನ್ ಅಲಿಸ ಹೀಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ರು. ನಂತರದಲ್ಲಿ ಕಣಕ್ಕಿಳಿದ ಬೆಥ್ ಮೂನಿ ಕೇವಲ 3ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು. ಸೂಪರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಆಟ 18 ರನ್‌ಗೆ ಮುಕ್ತಾಯಗೊಂಡಿತು.
ಆದ್ರೆ ನಾಯಕತ್ವದ ಜವಾಬ್ದಾರಿಯುತ ಆಟವಾಡಿದ ಮೆಗ್ ಲ್ಯಾನಿಂಗ್ 170 ಎಸೆತಗಳಲ್ಲಿ 93 ರನ್ ಕಲೆಹಾಕುವ ಮೂಲಕ ಏಳು ರನ್‌ಗಳಲ್ಲಿ ಶತಕ ಮಿಸ್ ಮಾಡಿಕೊಂಡ್ರು. ಮೆಗ್ ಲ್ಯಾನಿಂಗ್ ಜೊತೆಗ ಶತಕದ ಜೊತೆಯಾಟವಾಡಿದ ಓಪನರ್ ರೇಚಲ್ ಹೈಯನ್ಸ್ 86 ರನ್ ಕಲೆಹಾಕಿ ತಂಡಕ್ಕೆ ಸಾಥ್ ನೀಡಿದರು.
ಈ ಇಬ್ಬರು ಆಟಗಾರ್ತಿಯರು ಔಟಾದ ಬಳಿಕ ತಹಿಲಾ ಮೆಗ್ರಾಥ್ 52, ಆ್ಯಶ್ಲೆ ಗಾರ್ಡನ್ 56 ರನ್ ಕಲೆಹಾಕುವ ಮೂಲಕ ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ಆಧಾರವಾದ್ರು. ಮೊದಲ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ ಮಹಿಳಾ ತಂಡ ಏಳು ವಿಕೆಟ್ ನಷ್ಟಕ್ಕೆ 327 ರನ್ ಕಲೆಹಾಕಿತು.
ಇಂಗ್ಲೆಂಡ್ ಪರ ಕೆಥೆರಿನ್ ಬ್ರುಂಟ್ 3, ಅನ್ಯಾ ಶ್ರುಬ್ಸೋಲ್ 1, ನಥಾಲಿ ಸೀವರ್ 3 ವಿಕೆಟ್ ಪಡೆದು ಇಂಗ್ಲೆಂಡ್ ಪರ ಯಶಸ್ವಿ ಬೌಲರ್ ಎನಿಸಿದ್ರು. ನಾಲ್ಕು ದಿನಗಳ ಏಕೈಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಸೀಸ್ ಪಡೆಯನ್ನ ಬೇಗನೆ ಔಟ್ ಮಾಡಿ ಉತ್ತಮ ಸ್ಕೋರ್ ಕಲೆಹಾಕುವ ಯೋಜನೆಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications