ಎಂಎಸ್ ಧೋನಿ ನೆನಪಿಸಿದ ಮ್ಯಾಥ್ಯೂ ವೇಡ್: ವೈರಲ್ ವಿಡಿಯೋ

ಸಿಡ್ನಿ: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮಿಂಚಿನ ವೇಗದ ಸ್ಟಂಪಿಂಗ್‌ಗೆ, ವಿಕೆಟ್ ಕೀಪಿಂಗ್‌ಗೆ ಖ್ಯಾತರು. ತಾನು ತಪ್ಪಿದರೆ ಧೋನಿ ಹೇಗೆ ದಂಡಿಸುತ್ತಾರೆ ಅನ್ನೋದು ಮುಖ್ಯವಾಗಿ ಎದುರಾಳಿ ತಂಡಗಳ ಬ್ಯಾಟ್ಸ್‌ಮನ್‌ಗಳಿಗೆ ಗೊತ್ತಿರುತ್ತಿತ್ತು.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾನುವಾರ (ಡಿಸೆಂಬರ್ 6) ನಡೆದ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟಿ20ಐ ಪಂದ್ಯದಲ್ಲಿ ಬೆಸ್ಟ್ ಕೀಪರ್ ಎಂದು ಹೆಸರಾಗಿದ್ದ ಎಂಎಸ್ ಧೋನಿ ಅವರನ್ನು ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಸ್ಮರಿಸಿಕೊಂಡಿದ್ದಾರೆ.
ಭಾರತದ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರನ್ನು ಔಟ್ ಮಾಡುವ ಅವಕಾಶ ವೇಡ್‌ಗೆ ಇತ್ತು. ಭಾರತದ ಖಾತೆಯಲ್ಲಿ 195 ರನ್ ಇದ್ದಾಗ ಧವನ್ ಅವರು ಮಿಚೆಲ್ ಸ್ವೆಪ್ಸನ್ ಓವರ್‌ನಲ್ಲಿ ಕಟ್ ಶಾಟ್ ಮಿಸ್ ಮಾಡಿಕೊಂಡರು. ಆಗ ವೇಡ್ ಚೆಂಡು ಹಿಡಿದು ಬೇಲ್ಸ್ ಉರುಳಿಸಿದ್ದರಾದರೂ ಅಷ್ಟರಲ್ಲಾಗಲೇ ಧವನ್ ಕಾಲು ಸ್ಟಂಪಿಂಗ್ ಗೆರೆ ಸ್ಪಲ್ಪದರಲ್ಲಿ ತಾಗಿತ್ತು.
ಥರ್ಡ್ ಅಂಪೈರ್ ಇದನ್ನು ನಾಟ್ ಔಟ್ ಎಂದು ತೀರ್ಪು ಕೊಟ್ಟರು. ಧವನ್ ವಿಕೆಟ್ ಸಿಗದಿದ್ದು ಕಂಡು ವೇಡ್ ನಗುತ್ತ 'ನಾನು ಧೋನಿಯಲ್ಲ, ಧೋನಿಯಷ್ಟು ಚುರುಕಿಲ್ಲ,' ಎಂದು ಧವನ್ ಬಳಿ ಹೇಳಿದ್ದು ಸೆರೆಯಾಗಿತ್ತು. ಈ ವೇಳೆ ಧವನ್ ಕೂಡ ವೇಡ್ ಅವರತ್ತ ನೋಡಿ ನಗು ಚೆಲ್ಲಿದ್ದರು. ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳಿಂದ ಗೆದ್ದಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications