ತ್ರಿಶತಕ ಬಾರಿಸಿದ್ದ ಬ್ಯಾಟ್ ಹರಾಜಿಗಿಟ್ಟ ಪಾಕಿಸ್ತಾನ ಕ್ರಿಕೆಟಿಗ ಅಝರ್ ಅಲಿ

ಕರಾಚಿ, ಏಪ್ರಿಲ್ 28: ಪಾಕಿಸ್ತಾನ ಟೆಸ್ಟ್ ತಂಡದ ಕ್ಯಾಪ್ಟನ್ ಅಝರ್ ಅಲಿ ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಕೈ ಸೇರಿಸಿದ ಕ್ರಿಕೆಟಿಗರ ಸಾಲಿಗೆ ಸೇರಿಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವೀಯಲು ಅಝರ್ ತನ್ನ ಅಚ್ಚುಮೆಚ್ಚಿನ ಕ್ರಿಕೆಟ್ ವಸ್ತುಗಳನ್ನು ಹರಾಜಿಗಿಡಲು ಮುಂದಾಗಿದ್ದಾರೆ.
ಮಾರಕ ಕೋವಿಡ್ 19ಗೆ ವಿಶ್ವದಾದ್ಯಂತ ಸುಮಾರು 3 ಮಿಲಿಯನ್‌ಗೂ ಹೆಚ್ಚುಮಂದಿ ತುತ್ತಾಗಿದ್ದಾರೆ. ಇದರಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಜನರ ನೆರವಿಗಾಗಿ ಆಯಾ ದೇಶಗಳ ಕ್ರೀಡಾಪಟುಗಳು ಕೈ ಜೋಡಿಸುತ್ತಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ತ್ರಿ ಶತಕ ಬಾರಿಸಿದ್ದ ತನ್ನ ಕ್ರಿಕೆಟ್ ಬ್ಯಾಟ್‌ಗೆ ಮೂಲಬೆಲೆ 10 ಲಕ್ಷ ರೂ. ಹರಾಜು ಮೌಲ್ಯ ವಿಧಿಸಿರುವ ಅಝರ್, 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಧರಿಸಿದ್ದ ಜೆರ್ಸಿಯನ್ನೂ ಮಾರಾಟಕ್ಕಿಟ್ಟಿದ್ದಾರೆ. ಜೆರ್ಸಿಯ ಮೂಲ ಬೆಲೆಯೂ 10 ಲಕ್ಷ ರೂ. ಆಗಿರಲಿದೆ. 2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ್ದ ಪಾಕಿಸ್ತಾನ ಚಾಂಪಿಯನ್ ಆಗಿ ಮಿನುಗಿತ್ತು.
ಹರಾಜು ಈಗಾಗಲೇ ಆರಂಭವಾಗಿದೆ. ಮೇ 5ರವರೆಗೂ ಹರಾಜು ಇರಲಿದೆ. ಹರಾಜಿಗಿಟ್ಟಿರುವ ಜೆರ್ಸಿಯಲ್ಲಿ ತಂಡದ ಎಲ್ಲಾ ಆಟಗಾರರ ಸಹಿ ಕೂಡ ಇದೆ ಎಂದು ಅಝರ್ ತಿಳಿಸಿದ್ದಾರೆ. 'ನನಗೆ ತುಂಬಾ ಇಷ್ಟವಾಗಿದ್ದ ಎರಡು ವಸ್ತುಗಳನ್ನು ನಾನು ಹರಾಜಿಗಿಡುತ್ತಿದ್ದೇನೆ. ಎರಡರ ಮೂಲ ಬೆಲೆಯೂ 10 ಲಕ್ಷ ರೂ. ಆಗಿರಲಿದೆ. ಬಂದ ಹಣದಿಂದ ಬಡವರಿಗೆ ನೆರವಾಗಲಿದ್ದೇನೆ,' ಎಂದು ಅಝರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications