ಪಾಕಿಸ್ತಾನ ಆಟಗಾರ ಅಝರ್ ಅಲಿ ಗಮ್ಮತ್ತಿನ ರನೌಟ್: ನೋಡಿ, ನಗಬೇಡಿ!

ದುಬೈ, ಅಕ್ಟೋಬರ್ 18: ಈ ವರ್ಷದ ಬೆಸ್ಟ್ ರನೌಟ್ (ಆದ) ಪ್ರಶಸ್ತಿಯೇನಾದ್ರೂ ಕೊಡೋದಿದ್ರೆ ಅದು ಸೀದಾ ಪಾಕಿಸ್ತಾನ ಆಟಗಾರ ಅಝರ್ ಅಲಿಗೆ ಹೋಗುತ್ತೆ. ಯಾಕೆಂದರೆ ಅಬುದಾಬಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ವೇಳೆ ಅಝರ್ ಬಲು ಗಮ್ಮತ್ತಿನ ರೀತಿಯಲ್ಲಿ ಔಟಾಗಿದ್ದಾರೆ.
ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಗುರುವಾರ (ಅಕ್ಟೋಬರ್ 18) ದ್ವಿತೀಯ ಟೆಸ್ಟ್ ನ ಮೂರನೇ ದಿನ ದ್ವಿತೀಯ ಇನ್ನಿಂಗ್ಸ್ ಗೆ ಇಳಿದಿದ್ದ ಪಾಕ್ ಇಂಥದ್ದೊಂದು ಅಪರೂಪದ ರನೌಟ್ ಗೆ ಸಾಕ್ಷಿಯಾಯಿತು. ಈ ರನೌಟ್ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ. ಜೊತೆಗೆ ಅವರಿವರನ್ನು ಹಲ್ಲು ಕಿಸಿಯುವಂತೆ ಮಾಡುತ್ತಲೂ ಇದೆ.
ಪಂದ್ಯದಲ್ಲಿ 53ನೇ ಓವರ್ ನಲ್ಲಿ ಈ ಗಮ್ಮತ್ತು ನಡೆಯಿತು. ಪೀಟರ್ ಸಿಡ್ಲ್ ಓವರ್ ನಲ್ಲಿ ಅಲಿ ಬ್ಯಾಟಿಗೆ ತಾಗಿದ ಚೆಂಡು ಫೋರ್ ಲೈನ್ ನತ್ತ ಸಾಗಿತು. ಆಗ ಕ್ರೀಸ್ ನಲ್ಲಿದ್ದ ಅಲಿ ಮತ್ತವರ ಜೊತೆಗಾರ ಅಸಾದ್ ಶಫಿಕ್, ಚೆಂಡು ಬೌಂಡರಿ ಗೆರೆ ದಾಡಿದೆ ಅಂದುಕೊಂಡರು.
ಅಸಲಿಗೆ ಚೆಂಡು ಬೌಂಡರಿ ಲೈನ್‌ನ ಸಮೀಪದಲ್ಲೇ ನಿಂತಿದ್ದು ಪಾಕ್ ಆಟಗಾರರ ಗಮನಕ್ಕೆ ಬಂದಿರಲಿಲ್ಲ. ಆ ಚೆಂಡನ್ನು ಮಿಚೆಲ್ ಸ್ಟಾರ್ಕ್ ಅವರು ವಿಕೆಟ್ ಕೀಪರ್ ಟಿಮ್ ಪೈನೆಗೆ ಮುಟ್ಟಿಸಿದರು; ಅಲಿ ಬೆಪ್ಪಾಗಿ ಪೆವಿಲಿಯನ್ ಗೆ ನಡೆದರು!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications