ಅಫ್ರಿದಿ ಹೊಸ ನಿಯಮ: ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್‌ಗೂ ಟಿ20 ತಂಡದಲ್ಲಿ ಅವಕಾಶ ಇಲ್ಲವಾ?

135 ಕ್ಕಿಂತ ಹೆಚ್ಚು ಸ್ಟ್ರೈಕ್ ಇದ್ದರೆ ಮಾತ್ರ ಪಾಕಿಸ್ತಾನ ಟಿ20 ತಂಡಕ್ಕೆ ಆಯ್ಕೆ ಮಾಡುವುದಾಗಿ ಶಾಹಿದ್ ಅಫ್ರಿದಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಶಾಹಿದ್ ಅಫ್ರಿದಿ ನಿರ್ಧಾರ ತಿಳಿಸುತ್ತಿದ್ದಂತೆ ಅಭಿಮಾನಿಗಳು ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್‌ರನ್ನು ಟ್ರೋಲ್ ಮಾಡುತ್ತಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮುಖ್ಯ ಆಯ್ಕೆಗಾರರಾಗಿ ನಜಮ್ ಸೇಥಿ ಅಧಿಕಾರ ವಹಿಸಿಕೊಂಡ ನಂತರ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆ ಮಾಡಲಾಗುತ್ತಿದೆ. ಶಾಹಿದ್ ಅಫ್ರಿದಿ ರಾಷ್ಟ್ರೀಯ ತಂಡದ ಮುಖ್ಯ ಆಯ್ಕೆಗಾರರಾಗಿ ನೇಮಕವಾಗಿದ್ದಾರೆ.
ಆಯ್ಕೆಗಾರರಾಗಿ ನೇಮಕವಾಗುತ್ತಿದ್ದಂತೆ ಅಫ್ರಿದಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿದರು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಸರ್ಫರಾಜ್ ಖಾನ್ ಅವರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಿದರು. ಅಫ್ರಿದಿಯ ಈ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಯಾಯಿತು.
ಅದಾದ ನಂತರ ಟಿ20 ಕ್ರಿಕೆಟ್ ಬಗ್ಗೆ ಗಮನ ಹರಿಸಿರುವ ಶಾಹಿದ್ ಅಫ್ರಿದಿ, ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ. 135ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರರನ್ನು ಪಾಕಿಸ್ತಾನ ಟಿ20 ತಂಡಕ್ಕೆ ಆಯ್ಕೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಹೊಸದಾಗಿ ಪಾಕಿಸ್ತಾನ ತಂಡಕ್ಕೆ ಸೇರಲು ಬಯಸುವ ಆಟಗಾರರು ಕೂಡ ದೇಶೀಯ ಕ್ರಿಕೆಟ್‌ನಲ್ಲಿ 135ಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್ ಹೊಂದುವುದು ಅಗತ್ಯವಾಗಿದೆ.

ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಟ್ರೋಲ್
ಶಾಹಿದ್ ಅಫ್ರಿದಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್‌ರನ್ನು ಟ್ರೋಲ್ ಮಾಡಲಾಗುತ್ತಿದೆ.
ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಸ್ಟ್ರೈಕ್‌ರೇಟ್ 135ಕ್ಕಿಂತ ಕಡಿಮೆ ಇದೆ. ಅವರಿಗೂ ತಂಡದಲ್ಲಿ ಅವಕಾಶ ಇಲ್ಲವಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ.
ನಾಯಕ ಬಾಬರ್ ಅಜಮ್ 99 ಟಿ20 ಪಂದ್ಯಗಳನ್ನಾಡಿದ್ದು 41.42 ಸರಾಸರಿಯಲ್ಲಿ 3355 ರನ್ ಗಳಿಸಿದ್ದಾರೆ. ಆದರೆ ಬಾಬರ್ ಸ್ಟ್ರೈಕ್‌ರೇಟ್ 127.81 ಇದ್ದು, ಶಾಹಿದ್ ಅಫ್ರಿದಿ ನಿಯಮ ಇವರಿಗೂ ಅನ್ವಯವಾಗುತ್ತದೆಯಾ ಎಂದು ಸ್ಪಷ್ಟವಾಗಿಲ್ಲ.
ಟಿ20 ಬ್ಯಾಟರ್ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಮೊಹಮ್ಮದ್ ರಿಜ್ವಾನ್ 69 ಇನ್ನಿಂಗ್ಸ್‌ಗಳಿಂದ 48.8 ಸರಾಸರಿಯಲ್ಲಿ 2635 ರನ್ ಗಳಿಸಿದ್ದಾರೆ. ಟಿ20 ಮಾದರಿಯಲ್ಲಿ ರಿಜ್ವಾನ್ 126.62 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಸದ್ಯ ಪಾಕಿಸ್ತಾನ ಟಿ20 ತಂಡದಲ್ಲಿರುವ ಆಟಗಾರರಿಗೆ ಈ ಮಾನದಂಡ ಅನ್ವಯಿಸುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೊಸದಾಗಿ ತಂಡಕ್ಕೆ ಆಯ್ಕೆಯಾಗುವವರಿಗೆ ಮಾತ್ರ ಈ ನಿಯಮ ಅನ್ವಯವಾಗುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications