For Quick Alerts
ALLOW NOTIFICATIONS  
For Daily Alerts
 

Babar Azam: ಟಿ20 ಕ್ರಿಕೆಟ್‌ನಲ್ಲಿ ಶಾಹಿದ್ ಅಫ್ರಿದಿ ಹಿಂದಿಕ್ಕಿ ಈ ಸಾಧನೆ ಮಾಡಿದ 3ನೇ ಪಾಕಿಸ್ತಾನಿ ಕ್ರಿಕೆಟಿಗ ಬಾಬರ್ ಅಜಂ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಅವರು ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಡುವ ಮೂಲಕ ಪಾಕಿಸ್ತಾನ ಪರವಾಗಿ 100 ಟಿ20 ಪಂದ್ಯಗಳನ್ನು ಆಡಿದ 3ನೇ ಕ್ರಿಕೆಟಿಗರೆನಿಸಲಿದ್ದಾರೆ.

ಈವರೆಗೆ 99 ಪಂದ್ಯಗಳನ್ನು ಆಡಿರುವ ಬಾಬರ್ ಅಜಂ 100 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ ಪಾಕಿಸ್ತಾನದ ಇಬ್ಬರು ಗಣ್ಯರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ. ಇದೇ ವೇಳೆ 99 ಟಿ20 ಪಂದ್ಯಗಳನ್ನಾಡಿರುವ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರನ್ನು ಹಿಂದಿಕ್ಕಲಿದ್ದಾರೆ.

Babar Azam Becomes 3rd Pakistan Cricketer To Achieve This Record In T20 Cricket

ಇದಕ್ಕೂ ಮೊದಲು ಶೋಯೆಬ್ ಮಲಿಕ್ (123 ಪಂದ್ಯ) ಮತ್ತು ಮೊಹಮ್ಮದ್ ಹಫೀಜ್ (119 ಪಂದ್ಯ) ಅವರ ಸಾಲಿಗೆ ಸೇರಲಿದ್ದಾರೆ. ಪಾಕಿಸ್ತಾನ ನಾಯಕ ಬಾಬರ್ ಅಜಂ ಟಿ20 ಕ್ರಿಕೆಟ್‌ನಲ್ಲಿ ಎರಡು ಶತಕ ಮತ್ತು 30 ಅರ್ಧಶತಕಗಳೊಂದಿಗೆ 3,355 ರನ್ ಬಾರಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದ ಕುರಿತು ಮಾತನಾಡುವುದಾದರೆ, ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ತಮ್ಮ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ಪ್ರದರ್ಶನವನ್ನು ನೀಡಲು ಪ್ರಯತ್ನಿಸಲಿದೆ. ಹಿಂದಿನ ಸರಣಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ನಿರಾಶಾದಾಯಕ ಸೋಲಿನಿಂದ ತ್ವರಿತವಾಗಿ ಪುಟಿದೇಳಲು ಪಾಕಿಸ್ತಾನ ಎದುರು ನೋಡುತ್ತಿದೆ.

ನಾಯಕ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್ ಮತ್ತು ಹ್ಯಾರಿಸ್ ರೌಫ್ ಕೂಡ ಶಾರ್ಜಾದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು ತಪ್ಪಿಸಿಕೊಂಡ ನಂತರ ತಂಡಕ್ಕೆ ಮರಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ 2-1 ಅಂತರದಿಂದ ಸೋತ ನಂತರ ಪಾಕಿಸ್ತಾನ ತಂಡ ತಮ್ಮ ಸ್ಟಾರ್ ಟಿ20 ಆಟಗಾರರನ್ನು ತಮ್ಮ ತಂಡದಲ್ಲಿ ನೋಡುತ್ತಿರುವುದು ನಿರುಮ್ಮಳವಾಗಿದೆ.

Babar Azam Becomes 3rd Pakistan Cricketer To Achieve This Record In T20 Cricket

ಮತ್ತೊಂದೆಡೆ, ನ್ಯೂಜಿಲೆಂಡ್ ತಂಡ ಸಹ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಕಿವೀಸ್ ತಂಡ ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಟಿ20 ಪಂದ್ಯಗಳನ್ನು ಆಡುತ್ತಿದೆ. ಇದೇ ವೇಳೆ ತಮ್ಮ ಖಾಯಂ ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ಐಪಿಎಲ್ ಆಡುತ್ತಿರುವ ಹಲವಾರು ಪ್ರಮುಖ ಆಟಗಾರರನ್ನು ಸಹ ತಪ್ಪಿಸಿಕೊಳ್ಳುತ್ತಿದೆ.

ಟಾಮ್ ಲ್ಯಾಥಮ್ ಮುನ್ನಡೆಸುತ್ತಿರುವ ನ್ಯೂಜಿಲೆಂಡ್ ತಂಡದಲ್ಲಿ ಹಲವು ಪ್ರಮುಖ ಆಟಗಾರರು ಸದ್ಯ ಭಾರತದಲ್ಲಿ ಐಪಿಎಲ್ ಪಂದ್ಯಾವಳಿ ಆಡುತ್ತಿದ್ದಾರೆ. ಆದರೂ ಪಾಕಿಸ್ತಾನದ ವಿರುದ್ಧ ಅವರದೇ ನೆಲದಲ್ಲಿ ಸರಣಿ ಗೆಲ್ಲಲು ಎದುರು ನೋಡುತ್ತಿದೆ.

ಈ ಟಿ20 ಸರಣಿಯು ಎರಡು ಸ್ಪರ್ಧಾತ್ಮಕ ತಂಡಗಳ ನಡುವೆ ರೋಚಕ ಸ್ಪರ್ಧೆಯಾಗಲಿದೆ. ಪಾಕಿಸ್ತಾನಕ್ಕೆ ತಮ್ಮ ತವರಿನ ಪ್ರಯೋಜನವಿದ್ದು ಉತ್ತಮ ಪ್ರದರ್ಶನ ಬರುವ ನಿರೀಕ್ಷೆ ಇದೆ. ನ್ಯೂಜಿಲೆಂಡ್ ಅನನುಭವಿ ತಂಡದೊಂದಿಗೆ ಹೊಸ ಸ್ಥಳದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಉತ್ಸುಕವಾಗಿದೆ.

Babar Azam Becomes 3rd Pakistan Cricketer To Achieve This Record In T20 Cricket

ಪಾಕಿಸ್ತಾನ ಪೂರ್ಣ ತಂಡ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಹ್ಸಾನುಲ್ಲಾ, ಇಮಾದ್ ವಾಸಿಮ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾಹೀನ್ ಶಾ ಆಫ್ರಿದಿ, ಶಾನ್ ಮಸೂದ್, ಜಮಾನ್ ಖಾನ್.

ನ್ಯೂಜಿಲೆಂಡ್ ಪೂರ್ಣ ತಂಡ: ಟಾಮ್ ಲ್ಯಾಥಮ್ (ನಾಯಕ), ಚಾಡ್ ಬೋವ್ಸ್, ಮಾರ್ಕ್ ಚಾಪ್ಮನ್, ಡೇನ್ ಕ್ಲೀವರ್, ಮ್ಯಾಟ್ ಹೆನ್ರಿ, ಬೆನ್ ಲಿಸ್ಟರ್, ಆಡಮ್ ಮಿಲ್ನೆ, ಕೋಲ್ ಮೆಕ್ಕೊಂಚಿ, ಡೇರಿಲ್ ಮಿಚೆಲ್, ಜಿಮ್ಮಿ ನೀಶಾಮ್, ರಚಿನ್ ರವೀಂದ್ರ, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್ನರ್, ವಿಲ್ ಯಂಗ್.

Story first published: Friday, April 14, 2023, 20:31 [IST]
Other articles published on Apr 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+