
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ''ಕ್ರಿಸ್ಟಿಯಾನಲ್ ಮೆಸ್ಸಿ ಆಫ್ ಕ್ರಿಕೆಟ್'' ಎಂದು ತಂಡದ ಆಲ್‌ರೌಂಡರ್ ಶದಾಬ್ ಖಾನ್ ಪರಿಚಯ ಮಾಡಿಕೊಟ್ಟಿದ್ದಾರೆ. ಅಜೆಕ್ಸ್ ಪ್ಲೇಯರ್ ಅನ್ನು ಭೇಟಿ ಮಾಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಪರಿಚಯ ಮಾಡಿಕೊಡುವ ವೇಳೆಯಲ್ಲಿ ಆಲ್‌ರೌಂಡರ್ ಶದಾಬ್ ಖಾನ್ ಈತ ಕ್ರಿಕೆಟ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಮೆಸ್ಸಿ ಎಂದು ಹೇಳಿದ್ದಾರೆ. ಈ ಕುರಿತಾದ ವೀಡಿಯೋ ಸದ್ಯ ವೈರಲ್ ಆಗಿದೆ.
ಪ್ರಸ್ತುತ ಎಲ್ಲರಿಗೂ ತಿಳಿದಿರುವಂತೆ ಪಾಕಿಸ್ತಾನ ಕ್ರಿಕೆಟ್ ಟೀಂ ನೆದರ್ಲೆಂಡ್ಸ್ ಪ್ರವಾಸದಲ್ಲಿದ್ದು, ಡಚ್ ತಂಡದ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಿದೆ. ಪಾಕಿಸ್ತಾನ ಈಗಾಗಲೇ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಗೆದ್ದುಕೊಂಡಿದೆ.
ಬಿಡುವಿನ ವೇಳೆಯಲ್ಲಿ ಪಾಕಿಸ್ತಾನದ ಆಟಗಾರರು ತಮ್ಮ ತರಬೇತಿ ಮೈದಾನದಲ್ಲಿ ನೆದರ್ಲ್ಯಾಂಡ್ಸ್ ಫುಟ್ಬಾಲ್ ಲೀಗ್ ಎರೆಡಿವೈಸ್ನ ಚಾಂಪಿಯನ್ AFC ಅಜಾಕ್ಸ್ ಭೇಟಿ ಮಾಡಿದರು.
ನೆದರ್ಲ್ಯಾಂಡ್ಸ್ ಫುಟ್ಬಾಲ್ ಲೀಗ್ ಮೈದಾನಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಪಾಕಿಸ್ತಾನ ಆಟಗಾರರಿಗೆ ಅಜೆಕ್ಸ್ ಟೀಂ ಪ್ಲೇಯರ್ಸ್ ಮತ್ತು ಆಡಳಿತ ಸಿಬ್ಬಂದಿಯನ್ನ ಭೇಟಿ ಮಾಡುವ ಅವಕಾಶ ದೊರೆತಿದೆ. ಇದೇ ವೇಳೆಯಲ್ಲಿ ಪಾಕ್ ಆಲ್‌ರೌಂಡರ್ ಶದಾಬ್ ಖಾನ್, ನಾಯಕ ಬಾಬರ್ ಅಜಮ್ ಅನ್ನು ವಿಭಿನ್ನವಾಗಿ ಅಜೆಕ್ಸ್ ಫುಟ್ಬಾಲ್ ಆಟಗಾರರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.
ಬಾಬರ್ ಅಜಮ್ ಅನ್ನು ''ಕ್ರಿಸ್ಟಿಯಾನಲ್ ಮೆಸ್ಸಿ ಆಫ್ ಕ್ರಿಕೆಟ್'' ಎಂದು ಹೇಳುವ ಮೂಲಕ ಈತ ರೊನಾಲ್ಡೊ ಮತ್ತು ಮೆಸ್ಸಿಯ ಮಿಶ್ರಣದ ಓರ್ವ ಆಟಗಾರ ಎಂದು ಪರಿಚಯಿಸಿದ್ದಾನೆ. ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ.
ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ಭಾನುವಾರ(ಆಗಸ್ಟ್ 21) ಮೂರನೇ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ತಂಡದ ಪ್ಲೇಯಿಂಗ್ 11
ಪಾಕಿಸ್ತಾನ ಪ್ಲೇಯಿಂಗ್ ಇಲೆವೆನ್
ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಬಾಬರ್ ಅಜಮ್ (ನಾಯಕ), ಅಘಾ ಸಲ್ಮಾನ್, ಖುಶ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಶಾನವಾಜ್ ದಹಾನಿ, ಜಾಹಿದ್ ಮಹಮೂದ್ ಬೆಂಚ್: ಇಮಾಮ್-ಉಲ್-ಹಕ್, ಮೊಹಮ್ಮದ್ ರಿಜ್ವಾನ್, ಶಾದಾಬ್ ಖಾನ್, ಹಾರಿಸ್ ರೌಫ್
ನೆದರ್ಲೆಂಡ್ಸ್ ಪ್ಲೇಯಿಂಗ್ ಇಲೆವೆನ್
ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಬಾಸ್ ಡಿ ಲೀಡೆ, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ತೇಜ ನಿಡಮನೂರು, ಲೋಗನ್ ವ್ಯಾನ್ ಬೀಕ್, ಮೂಸಾ ಅಹ್ಮದ್, ಶರೀಜ್ ಅಹ್ಮದ್, ಆರ್ಯನ್ ದತ್, ವಿವಿಯನ್ ಕಿಂಗ್ಮಾ ಬೆಂಚ್: ವೆಸ್ಲಿ ಬ್ಯಾರೆಸಿ, ಟಿಮ್ ಪ್ರಿಂಗಲ್, ರಿಯಾನ್ ಕ್ಲೈನ್, ಅರ್ನವ್ ಜೈನ್