For Quick Alerts
ALLOW NOTIFICATIONS  
For Daily Alerts
 

ಬಾಬರ್ ಅಜಂ ವಿಶ್ವದ ಅಗ್ರ ಬ್ಯಾಟರ್; 2023ರ ಏಷ್ಯಾ ಕಪ್‌ಗೂ ಮುನ್ನ ಒಪ್ಪಿಕೊಂಡ್ರಾ ವಿರಾಟ್ ಕೊಹ್ಲಿ?

ವಿಶ್ವದ ಸಾರ್ವಕಾಲಿಕ ಹಾಗೂ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಆಟಗಾರರ ನಡುವಿನ ಹೆಚ್ಚಿನ ಪೈಪೋಟಿಯ ಕುರಿತು ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡುವಾಗ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರನ್ನು ಶ್ಲಾಘಿಸಿದ್ದಾರೆ.

2023ರ ಏಷ್ಯಾ ಕಪ್‌ಗೆ ಕೆಲವೇ ದಿನಗಳು ಬಾಕಿ ಉಳಿದಿವೆ ಮತ್ತು ವಿರಾಟ್ ಕೊಹ್ಲಿ ಅವರ ಈ ಹೇಳಿಕೆಗಳು ಸೆಪ್ಟೆಂಬರ್ 2ರಂದು ಭಾರತ ಮತ್ತು ಪಾಕಿಸ್ತಾನದ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

Babar Azam is the Worlds Top Batsman; Virat Kohli Praises The Pakistan Captain

ಮೈಂಡ್ ಗೇಮ್‌ಗಳನ್ನು ಆಡುವ ಅನೇಕರಿಗಿಂತ ಭಿನ್ನವಾಗಿ, ವಿರಾಟ್ ಕೊಹ್ಲಿ ಅವರು ಇದೀಗ ಬಾಬರ್‌ ಅಜಂನನ್ನು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಸಂತೋಷದಿಂದಲೇ ಹೇಳಿದ್ದಾರೆ.

2019ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಬಾಬರ್ ಅಜಂ ಅವರನ್ನು ಮೊದಲ ಬಾರಿಗೆ ಭೇಟಿಯಾದೆ ಮತ್ತು ಈ ಬ್ಯಾಟರ್ ವಿಶೇಷ ಎಂದು ತಕ್ಷಣವೇ ತಿಳಿದಿತ್ತು ಎಂದು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

2019ರ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ನಂತರ ಭೇಟಿಯನ್ನಯು ಏರ್ಪಡಿಸಿದವರು ಪಾಕಿಸ್ತಾನದ ಅಲ್‌ರೌಂಡರ್ ಇಮಾದ್ ವಾಸಿಮ್.

Babar Azam is the Worlds Top Batsman; Virat Kohli Praises The Pakistan Captain

"ನಾವು ಕುಳಿತು ಆಟದ ಬಗ್ಗೆ ಮಾತನಾಡಿದ್ದೇವೆ. ಮೊದಲ ದಿನದಿಂದ ನಾನು ಅವರಿಂದ ಸಾಕಷ್ಟು ಗೌರವವನ್ನು ಕಂಡಿದ್ದೇನೆ ಮತ್ತು ಅದು ಬದಲಾಗಿಲ್ಲ. ಅವರು ಬಹುಶಃ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ವಿಶ್ವದ ಅಗ್ರ ಬ್ಯಾಟ್ಸ್‌ಮನ್ ಆಗಿದ್ದಾರೆ," ಎಂದು ವಿರಾಟ್ ಕೊಹ್ಲಿ ಹೇಳಿದರು.

ಬಾಬರ್ ಅಜಂ ಅವರು ಸದ್ಯ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಟಿವಿಯಲ್ಲಿ ಅವರು ಬ್ಯಾಟಿಂಗ್ ಮಾಡುವುದನ್ನು ನೋಡಿ ಆನಂದಿಸುತ್ತೇನೆ ಎಂದು ಹೇಳಲು ವಿರಾಟ್ ಕೊಹ್ಲಿ ಹಿಂಜರಿಯಲಿಲ್ಲ.

ಬಾಬರ್ ಅಜಂ ಪ್ರಸ್ತುತ ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಒಟ್ಟು 886 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಬಾಬರ್ ಅಜಂ ಮತ್ತು ವಿರಾಟ್ ಕೊಹ್ಲಿ ನಡುವೆ ದೊಡ್ಡ ಅಂತರವಿದೆ.

2023ರ ಏಷ್ಯಾ ಕಪ್ ಪಂದ್ಯಾವಳಿ, 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನದೊಂದಿಗೆ ಬಾಬರ್ ಅಜಂಗೆ ಹತ್ತಿರವಾಗಲು ವಿರಾಟ್ ಕೊಹ್ಲಿ ಎದುರು ನೋಡುತ್ತಿದ್ದಾರೆ. ಪ್ರಸ್ತುತ 705 ಅಂಕಗಳೊಂದಿಗೆ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಕೊಹ್ಲಿ 9ನೇ ಸ್ಥಾನದಲ್ಲಿದ್ದಾರೆ.

ಕಳೆದ 3 ವರ್ಷಗಳಲ್ಲಿ ಬಾಬರ್ ಅಜಂ ನಿಜವಾಗಿಯೂ ಉತ್ತಮವಾಗಿ ಆಡುತ್ತಿದ್ದು, ದೊಡ್ಡ ಬೆಳವಣಿಗೆಯನ್ನು ಕಂಡಿದ್ದಾರೆ. ಅವರು ಟಿ20 ಪಂದ್ಯಗಳ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 5 ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಸಹ ಸೇರಿದ್ದಾರೆ. ಅಲ್ಲದೆ, ಪ್ರಸ್ತುತ ಎಲ್ಲ ಸ್ವರೂಪಗಳಾದ್ಯಂತ ಬ್ಯಾಟಿಂಗ್ ಶ್ರೇಯಾಂಕಗಳ ಅಗ್ರ 5ರಲ್ಲಿರುವ ಏಕೈಕ ಆಟಗಾರನಾಗಿದ್ದಾರೆ.

ಕಳೆದ 3 ವರ್ಷಗಳಲ್ಲಿ ವಿರಾಟ್ ಕೊಹ್ಲಿ ಅವರ ಗ್ರಾಫ್ ಕಡಿಮೆಯಾಗಿತ್ತು. ವಿಶೇಷವಾಗಿ ಕೋವಿಡ್-19 ನಂತರ. ಆದರೆ, ಅವರು ಈ ವರ್ಷ ಮತ್ತೆ ಅತ್ಯುತ್ತಮ ಫಾರ್ಮ್‌ಗೆ ಮರಳಿದ್ದಾರೆ. ಇನ್ನು 2011ರ ನಂತರ ತಮ್ಮ ಎರಡನೇ ವಿಶ್ವಕಪ್ ಟ್ರೋಫಿಯನ್ನು ಗೆಲ್ಲುವ ಗುರಿಯನ್ನು ಹೊಂದಿದ್ದಾರೆ.

2023ರ ಏಷ್ಯಾ ಕಪ್ ಪಂದ್ಯಾವಳಿಯು ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಎರಡೂ ತಂಡಗಳಿಗೆ ಉತ್ತಮ ಪೂರ್ವಸಿದ್ಧತಾ ಪಂದ್ಯಾವಳಿಯಾಗಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 2ರಂದು 2023ರ ಏಷ್ಯಾ ಕಪ್ ಟೂರ್ನಮೆಂಟ್‌ನ ಗುಂಪು ಹಂತದಲ್ಲಿ ಕ್ಯಾಂಡಿಯಲ್ಲಿ ಸೆಣಸಾಡಲಿವೆ. ಎರಡೂ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದರೆ, ಸೂಪರ್ 4ರ ಹಂತದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಇದೆ.

ಇನ್ನು ಉಭಯ ತಂಡಗಳು ಫೈನಲ್‌ಗೆ ಬಂದರೆ ಏಷ್ಯಾ ಕಪ್‌ನಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗಬಹುದು. ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೆ ವಿಶ್ವ ಸಾಕ್ಷಿಯಾಗಲಿದೆ.

Story first published: Sunday, August 13, 2023, 12:01 [IST]
Other articles published on Aug 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+