World cup 2023: ಬಾಬರ್ ಅಜಂ ತಲೆದಂಡ ನಿಶ್ಚಿತ!!: ಈ ಮೂವರಲ್ಲಿ ಯಾರಾಗಲಿದ್ದಾರೆ ಪಾಕಿಸ್ತಾನ ತಂಡದ ನಾಯಕ?!
ಈ ಬಾರಿಯ ವಿಶ್ವಕಪ್‌ನಲ್ಲಿ ಉತ್ತಮ ಆರಂಭ ಪಡೆದ ಪಾಕಿಸ್ತಾನ ತಂಡ ಬಳಿಕ ಭಾರೀ ಹಿನ್ನಡೆ ಕಂಡಿದೆ. ಆರಂಭದಲ್ಲಿ ಸತತ ಎರಡು ಗೆಲುವು ಸಾಧಿಸಿದ ಪಾಕ್ ಪಡೆ ಬಳಿಕ ಭಾರತದ ವಿರುದ್ಧದ ಪಂದ್ಯದಲ್ಲಿ ಭಾರೀ ಸೋಲು ಅನುಭವಿಸುವ ಮೂಲಕ ಆಘಾತ ಅನುಭವಿಸಿತು. ಆ ಬಳಿಕ ಗೆಲುವಿನ ಲಯಕ್ಕೆ ಮರಳಲು ಪಾಕಿಸ್ತಾನ ತಂಡಕ್ಕೆ ಸಾಧ್ಯವಾಗಲೇ ಇಲ್ಲ. ಸತತ ಮೂರು ಪಂದ್ಯಗಳಲ್ಲಿ ಪಾಕ್ ತಂಡ ಸೋಲಿನ ಕಹಿ ಅನುಭವಿಸಿದ್ದು ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಿಂದ ಕೆಳಕ್ಕೆ ಕುಸಿದಿದೆ.
ಪಾಕಿಸ್ತಾನ ತಂಡ ಆಡಿರುವ ಐದು ಪಂದ್ಯಗಳಲ್ಲಿ ಕೇವಲ ಎರಡು ಗೆಲುವು ಮಾತ್ರವೇ ಸಾಧಿಸಿರುವ ಕಾರಣ ಸೆಮಿಫೈನಲ್‌ಗೆ ಪ್ರವೇಶಿಸುವ ಹಾದಿ ಬಹಳ ದುರ್ಗಮವಾಗಿದೆ. ಅದು ಸಾಧ್ಯವಾಗಬೇಕಿದ್ದರೆ ಮುಂದಿನ ಎಲ್ಲಾ ಪಂದ್ಯಗಳಲ್ಲಿಯೂ ಪಾಕಿಸ್ತಾನ ಗೆಲುವು ಸಾಧಿಸಲೇಬೇಕಾದ ಅಗತ್ಯವಿದೆ. ಹೀಗಾಗಿ ಪಾಕ್ ತಂಡದ ಸೆಮಿಫೈನಲ್ ಕನಸು ಬಹುತೇಕ ಭಗ್ನವಾದಂತಾಗಿದೆ. ಹೀಗಾಗಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರನ್ನು ನಾಯಕತ್ವದಿಂದ ಕೆಳಕ್ಕಿಳಿಸಬೇಕು ಎನ್ನುವ ಅಭಿಪ್ರಾಯಗಳು ಜೋರಾಗಿದೆ.

ಪಾಕ್ ನಾಯಕನ ತಲೆದಂಡ
ಈ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಲೀಗ್ ಹಂತದಿಂದ ಹೊರಬಿದ್ದರೆ ಬಾಬರ್ ಅಜಂ ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ಹೀಗಾಗಿ ಪಾಕಿಸ್ತಾನ ತಂಡದ ಮುಂದಿನ ನಾಯಕ ಯಾರಾಗಬಹುದು ಎನ್ನುವ ಚರ್ಚೆಗಳು ಕುಡ ಈಗ ಜೋರಾಗಿದೆ. ಈ ಪೈಕಿ ಮೂವರು ಆಟಗಾರರ ಹೆಸರು ಈಗ ಭಾರೀ ಚರ್ಚೆಯಲ್ಲಿದ್ದು ಈ ಮೂವರಲ್ಲಿ ನಾಯಕತ್ವದ ಜವಾಬ್ಧಾರಿ ಯಾರಿಗೆ ದೊರೆಯಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಸರ್ಫರಾಜ್, ರಿಜ್ವಾನ್, ಶಾಹೀನ್ ಅಫ್ರಿದಿ ಮಧ್ಯೆ ಪೈಪೋಟಿ
ಇನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ಸ್ಥಾನಕ್ಕೆ ಯಾರು ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಈ ಮವರು ಹೆಸರು ಜೋರಾಗಿ ಕೇಳಿಬರುತ್ತಿದೆ. ಸರ್ಫರಾಜ್ ಅಹ್ಮದ್ ಮೊಹಮ್ಮದ್ ರಿಜ್ವಾನ್ ಹಾಗೂ ಶಾಹೀನ್ ಶಾ ಅಫ್ರಿದಿ ನಾಯಕತ್ವ ರೇಸ್‌ನಲ್ಲಿದ್ದಾರೆ. ಸರ್ಫರಾಜ್ ಈಗಾಗಲೇ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದು ಮತ್ತೆ ಅವರಿಗೆ ಪಟ್ಟಕಟ್ಟುವ ಸಾಧ್ಯತೆ ಬಗ್ಗೆ ಅನುಮಾನಗಳು ಕೂಡ ಇದೆ. ಹೀಗಾಗಿ ರಿಜ್ವಾನ್ ಹಾಗೂ ಶಾಹೀನ್ ಅಫ್ರಿದಿ ಮಧ್ಯೆ ನೇರ ಸ್ಪರ್ಧೆ ಕಾಣಿಸುತ್ತಿದೆ.
ನಾಯಕನ ಬದಲಾವಣೆ ಬಗ್ಗೆ ಮೂಲಗಳ ಮಾಹಿತಿ
ಇನ್ನು ಪಾಕಿಸ್ತಾನ ತಂಡದ ನಾಯಕತ್ವದ ಬದಲಾವಣೆ ಬಗ್ಗೆ ಮೂಲಗಳು ಪ್ರತಿಕ್ರಿಯೆ ನೀಡಿದೆ. "ಪಾಕಿಸ್ತಾನ ತಂಡ ಸೆಮಿಫೈನಲ್‌ಗ ಪ್ರವೇಶಿಸಬೇಕಿದ್ದರೆ ಉಳಿದೆಲ್ಲಾ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಬೇಕಿದ್ದು ಅದಕ್ಕಾಗಿ ಪವಾಡವೇ ನಡೆಯಬೇಕಿದೆ. ಬಾಬರ್ ಅಜಂ ನಾಯಕನಾಗಿ ಮುಂದುವರಿಯಬೇಕಿದ್ದರೆ ಪಾಕಿಸ್ತಾನ ತಂಡ ಯಾವುದೇ ಕಾರಣಕ್ಕೂ ಸೆಮಿಫೈನಲ್‌ಗೆ ಪ್ರವೇಶಿಸಲೇಬೇಕು. ಅದು ಸಾಧ್ಯವಾಗಿಲ್ಲವಾದರೆ ಬಾಬರ್ ಅಜಂ ಟೆಸ್ಟ್ ಕ್ರಿಕೆಟ್‌ಗೆ ಮಾತ್ರವೇ ನಾಯಕನಾಗಿ ಮುಂದುವರಿಯಲಿದ್ದಾರೆ" ಎಂದಿದ್ದಾರೆ ಬಾಬರ್ ಅಜಂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications