ಕುತೂಹಲಕಾರಿ ತಿರುವಿನಲ್ಲಿ, ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ರಾಷ್ಟ್ರೀಯ ತಂಡದ ವೈಟ್‌ಬಾಲ್ ನಾಯಕತ್ವದಿಂದ ಶಾಹೀನ್ ಶಾ ಅಫ್ರಿದಿಯನ್ನು ಕೆಳಗಿಳಿಸಿದೆ.
ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಂ ಅವರನ್ನು ಏಕದಿನ ಮತ್ತು ಟಿ20 ವೈಟ್-ಬಾಲ್ ಸ್ವರೂಪಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕನಾಗಿ ಮರು ನೇಮಕಗೊಳಿಸಲಾಗಿದೆ.

ಬಾಬರ್ ಅಜಂ ಅವರ ಮೊದಲ ನಿಯೋಜನೆಯು ಏಪ್ರಿಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ತವರಿನಲ್ಲಿ ಆಡಲಿದೆ. ಕೆಲವು ದಿನಗಳ ಹಿಂದೆ, ಬಾಬರ್ ಅಜಂ ಅವರನ್ನು ಪಾಕಿಸ್ತಾನ ತಂಡದ ನಾಯಕನಾಗಿ ಮರುಸ್ಥಾಪಿಸುವ ಬಗ್ಗೆ ಎಂದು ವರದಿಗಳು ಬಂದಿದ್ದವು.
ಭಾನುವಾರ, ಮಾರ್ಚ್ 31ರಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧಿಕೃತ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಬಲಗೈ ಬ್ಯಾಟರ್ ಮತ್ತೊಮ್ಮೆ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಖಚಿತಪಡಿಸಿದೆ.
"ಬಾಬರ್ ಅಜಂ ಅವರನ್ನು ವೈಟ್‌ಬಾಲ್ ನಾಯಕರನ್ನಾಗಿ ನೇಮಿಸಲಾಗಿದೆ. ಪಿಸಿಬಿಯ ಆಯ್ಕೆ ಸಮಿತಿಯ ಸರ್ವಾನುಮತದ ಶಿಫಾರಸ್ಸಿನ ನಂತರ, ಅಧ್ಯಕ್ಷ ಪಿಸಿಬಿ ಮೊಹ್ಸಿನ್ ನಖ್ವಿ ಅವರು ಬಾಬರ್ ಅಜಂ ಅವರನ್ನು ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ವೈಟ್‌ಬಾಲ್ (ಏಕದಿನ ಮತ್ತು ಟಿ20) ನಾಯಕರನ್ನಾಗಿ ನೇಮಿಸಲಾಗಿದೆ," ಎಂದು ಪಿಸಿಬಿ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದೆ.
ಭಾರತದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಸೆಮಿಫೈನಲ್ ತಲುಪಲು ವಿಫಲವಾದ ನಂತರ, ಬಾಬರ್ ಅಜಂ ಅವರು ನವೆಂಬರ್ 2023ರಲ್ಲಿ ವೈಟ್‌ಬಾಲ್ ಸ್ವರೂಪಗಳ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿದರು. ಆಗ ಝಾಕಾ ಅಶ್ರಫ್ ಪಿಸಿಬಿ ಅಧ್ಯಕ್ಷರಾಗಿದ್ದರು. ಬಾಬರ್ ಅಜಂ ಬಳಿಕ ಟೆಸ್ಟ್ ತಂಡದ ನಾಯಕನ ಸ್ಥಾನದಿಂದಲೂ ಮುಕ್ತರಾದರು.
ಇದೀಗ ಕೇವಲ ಆರು ತಿಂಗಳ ನಂತರ, ಜೂನ್‌ನಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್‌ನೊಂದಿಗೆ ಪಾಕಿಸ್ತಾನದ ವೈಟ್-ಬಾಲ್ ತಂಡಗಳ ಉಸ್ತುವಾರಿಯನ್ನು ಬಾಬರ್ ಅಜಂ ಅವರಿಗೆ ನೀಡಲಾಗಿದೆ.
ಈ ಹಿಂದೆ ಬಾಬರ್ ಅಜಂ ಅವರನ್ನು ನಾಯಕತ್ವದಿಂದ ವಜಾಗೊಳಿಸಿದ ನಂತರ, ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಅಳಿಯ ಹಾಗೂ ಎಡಗೈ ವೇಗಿ ಶಾಹೀನ್ ಅಫ್ರಿದಿಯನ್ನು ಪಾಕಿಸ್ತಾನದ ಟಿ20 ತಂಡದ ನಾಯಕನಾಗಿ ನೇಮಿಸಲಾಯಿತು. ಅವರು ಜನವರಿ 2024ರಲ್ಲಿ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಿದರು.
ಆದಾಗ್ಯೂ, ಪ್ರವಾಸಿ ಪಾಕಿಸ್ತಾನ ತಂಡವು ಸರಣಿಯನ್ನು 1-4 ಅಂತರದಲ್ಲಿ ಸೋತಿದ್ದರಿಂದ ಫಲಿತಾಂಶವು ತೃಪ್ತಿಕರವಾಗಿರಲಿಲ್ಲ. ಐದನೇ ಟಿ20 ಪಂದ್ಯವನ್ನು ಗೆಲ್ಲುವ ಮೊದಲು ಪಾಕಿಸ್ತಾನ ಮೊದಲ ನಾಲ್ಕು ಪಂದ್ಯಗಳಲ್ಲಿ ಭಾರೀ ಅಂತರದ ಸೋಲುಗಳನ್ನು ಅನುಭವಿಸಿದರು.
"ಎಡಗೈ ವೇಗಿ ಶಾಹೀನ್ ಅಫ್ರಿದಿ ಅವರು ರಾಷ್ಟ್ರೀಯ ಟಿ20 ನಾಯಕನಾಗಿ ಅಸಮಾಧಾನಗೊಂಡಿದ್ದಾರೆ. ಮಂಡಳಿ ಮತ್ತು ಆಯ್ಕೆಗಾರರು ಅವರನ್ನು ತೆಗೆದುಹಾಕಲು ಬಯಸಿದ್ದರೂ ಸಹ, ಇದರ ಹಿಂದಿನ ಕಾರಣಗಳನ್ನು ಅವರಿಗೆ ತಿಳಿಸಲು ಮತ್ತು ಎಲ್ಲದರ ಬಗ್ಗೆ ಅವರು ಅರ್ಥ ಮಾಡಿಕೊಳ್ಳುವ ಸಭ್ಯತೆ ಇದೆ ಎಂದು ಪಿಸಿಬಿ ನಿರೀಕ್ಷಿಸಿದೆ," ಎಂದು ತಿಳಿಸಿವೆ.
ಕೇವಲ ಒಂದು ಸರಣಿಯ ನಂತರ, ಪಾಕಿಸ್ತಾನ ತಂಡದ ನಾಯಕನಾಗಿರುವ ಶಾಹೀನ್ ಅಫ್ರಿದಿ ಅವರ ಅಧಿಕಾರಾವಧಿ ಇದೀಗ ಅಂತ್ಯಗೊಂಡಿದೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಐದು ಪಂದ್ಯಗಳ ಸರಣಿಯಲ್ಲಿ ಅವರು ಮತ್ತೊಮ್ಮೆ ಬಾಬರ್ ಅಜಂ ಅಡಿಯಲ್ಲಿ ಆಡಲಿದ್ದಾರೆ.
ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ 12 ಟಿ20 ಪಂದ್ಯಗಳನ್ನು ಆಡಲು ಸಜ್ಜಾಗಿದೆ.