IND vs PAK: ಭಾರತ ವಿರುದ್ಧದ ಪಂದ್ಯದಲ್ಲಿ ಬಾಬರ್ ಅಜಮ್ ವಿಶೇಷ ಸಾಧನೆ
ಪಾಕಿಸ್ತಾನದ ಮಾಜಿ ನಾಯಕ ಮತ್ತು ಬಲಗೈ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ದುಬೈನಲ್ಲಿ ಭಾರತ ವಿರುದ್ಧದ ಚಾಂಪಿಯನ್ಸ್ ಟ್ರೋಫಿ 2025 ರ ಐದನೇ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ, ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಪಾಕಿಸ್ತಾನ ಪರ, ಬಾಬರ್ ಅಜಮ್ ಇಮಾಮ್ ಉಲ್ ಹಕ್ ಜೊತೆ ಇನ್ನಿಂಗ್ಸ್ ಆರಂಭಿಸಿದರು.
ಈ ಪಂದ್ಯದಲ್ಲಿ ಬಾಬರ್ ಅಜಮ್ 26 ಎಸೆತಗಳನ್ನು ಎದುರಿಸಿದರು. ಅವರು ತಂಡಕ್ಕಾಗಿ 88.46 ಸರಾಸರಿಯಲ್ಲಿ 5 ಬೌಂಡರಿಗಳೊಂದಿಗೆ 23 ರನ್ ಗಳಿಸಿದರು. ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಬಾಬರ್ ಔಟಾದರು. ಬಾಬರ್ ಪೆವಿಲಿಯನ್‌ಗೆ ಹೋಗುವ ಮೊದಲು ಇಮಾಮ್ ಜೊತೆ ಪಾಕಿಸ್ತಾನ ತಂಡಕ್ಕೆ 8.2 ಓವರ್‌ಗಳಲ್ಲಿ 41 ರನ್‌ಗಳ ಜೊತೆಯಾಟ ಆಡಿದರು. ಇದರೊಂದಿಗೆ ಬಾಬರ್ ಅಜಮ್ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಿದರು.

ಐಸಿಸಿ ಏಕದಿನ ಟೂರ್ನಿಯಲ್ಲ 1000 ರನ್ ಗಳಿಸಿದ ಮೂರನೇ ಪಾಕಿಸ್ತಾನ ಆಟಗಾರ ಎಂಬ ಹೆಗ್ಗಳಿಕೆಗೆ ಬಾಬರ್ ಪಾತ್ರರಾಗಿದ್ದಾರೆ. ಇದರೊಂದಿಗೆ ಅವರು ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ಸಯೀದ್ ಅನ್ವರ್ ಮತ್ತು ಜಾವೇದ್ ಮಿಯಾಂದಾದ್ ಅವರ ಕ್ಲಬ್‌ಗೆ ಸೇರಿದ್ದಾರೆ. ಭಾರತ ವಿರುದ್ದ ಪಂದ್ಯದ ನಾಲ್ಕನೇ ಓವರ್‌ನಲ್ಲಿ ಬಾಬರ್ ಈ ಸಾಧನೆ ಮಾಡಿದ್ದಾರೆ. ಅವರು ತಮ್ಮ 24ನೇ ಇನ್ನಿಂಗ್ಸ್‌ನಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ.
ಐಸಿಸಿ ಟೂರ್ನಿಗಳಲ್ಲಿ ಹೆಚ್ಚು ರನ್ ಗಳಿಸಿದವರು
- ಸಯೀದ್ ಅನ್ವರ್: 25 ಇನ್ನಿಂಗ್ಸ್‌ಗಳಲ್ಲಿ 1204 ರನ್‌ಗಳು
- ಜಾವೇದ್ ಮಿಯಾಂದಾದ್: 30 ಇನ್ನಿಂಗ್ಸ್‌ಗಳಲ್ಲಿ 1083 ರನ್‌ಗಳು
- ಬಾಬರ್ ಅಜಮ್: 24 ಇನ್ನಿಂಗ್ಸ್‌ಗಳಲ್ಲಿ 1005 ರನ್‌ಗಳು
- ಮೊಹಮ್ಮದ್ ಯೂಸುಫ್: 25 ಇನ್ನಿಂಗ್ಸ್‌ಗಳಲ್ಲಿ 870 ರನ್‌ಗಳು
- ಮಿಸ್ಬಾ-ಉಲ್-ಹಕ್: 19 ಇನ್ನಿಂಗ್ಸ್‌ಗಳಲ್ಲಿ 865 ರನ್‌ಗಳು
Champions Trophy IND vs PAK: ಹೈವೋಲ್ಟೇಜ್ ಪಂದ್ಯದ ಅಂಕಿ ಅಂಶಗಳ ಸಂಪೂರ್ಣ ವಿವರ ಇಲ್ಲಿದೆ
ಸೆಮಿಸ್‌ಗೆ ಭಾರತ
ಚಾಂಪಿಯನ್ಸ್ ಟ್ರೋಫಿಯ ಮಹತ್ವದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಮುನ್ನಡೆದಿದೆ. ಭಾರತ ಸೂಪರ್-4 ತಲುಪುವುದು ಬಹುತೇಕ ಖಚಿತ. ಭಾರತ ಈಗ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ತಲುಪಿದೆ. ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 49.4 ಓವರ್ ಗಳಲ್ಲಿ 241 ರನ್ ಗಳಿಗೆ ಆಲೌಟಾಯಿತು. ಈ ಗುರಿ ಬೆನ್ನಟ್ಟಿದ ಭಾರತ ವಿರಾಟ್ ಕೊಹ್ಲಿ ಶತಕದ ಬಲದಿಂದ 42.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications