Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದ.ಆಫ್ರಿಕಾ ವಿರುದ್ಧ ಗೆದ್ದ ನೆದರ್ಲ್ಯಾಂಡ್ಸ್‌: ಧನ್ಯವಾದ ತಿಳಿಸಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್

babar azam and Netherlands

ಬಾಂಗ್ಲಾದೇಶ ವಿರುದ್ಧ ಗೆಲ್ಲುವ ಮೊದಲೇ ಪಾಕಿಸ್ತಾನದ ಸೆಮಿಫೈನಲ್ ಹಾದಿ ಸುಗಮಗೊಳಿಸಿದ ನೆದರ್ಲ್ಯಾಂಡ್ಸ್‌ ತಂಡಕ್ಕೆ ಪಾಕ್ ನಾಯಕ ಬಾಬರ್ ಅಜಮ್ ಮೈದಾನದಲ್ಲಿಯೇ ಧನ್ಯವಾದ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಪಂದ್ಯಕ್ಕೂ ಮುನ್ನ ನಡೆದ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಆಶ್ಚರ್ಯಕರ ರೀತಿಯಲ್ಲಿ ನೆದರ್ಲ್ಯಾಂಡ್ಸ್‌ ಗೆಲುವು ಸಾಧಿಸಿತು.

ಪ್ರಸ್ತುತ ಐಸಿಸಿ ಟಿ20 ವಿಶ್ವಕಪ್‌ ಸಾಕಷ್ಟು ರೋಚಕತೆಗೆ ಎಡೆಮಾಡಿಕೊಟ್ಟಿದ್ದು, ಹಿಂದೆದೂ ಕಾಣದ ರೀತಿಯ ಫಲಿತಾಂಶಗಳ ಏರಿಳಿತಗಳನ್ನ ಕಾಣಬಹುದಾಗಿದೆ. ಪ್ರತಿ ತಂಡಗಳ ನಡುವೆ ಸ್ಪರ್ಧೆ ತೀವ್ರಗೊಂಡಿದ್ದು, ಆಶ್ಚರ್ಯಕರ ರೀತಿಯಲ್ಲಿ ದಕ್ಷಿಣ ಆಫ್ರಿಕಾ ನೆದರ್ಲ್ಯಾಂಡ್ಸ್‌ ವಿರುದ್ಧ ಸೋತು ತವರಿಗೆ ಮರಳಿದೆ. ಈ ಮೂಲಕ ಐಸಿಸಿ ಟೂರ್ನಮೆಂಟ್‌ಗಳಲ್ಲಿ ಹರಿಣಗಳು ಚೋಕರ್ಸ್‌ ಪಟ್ಟದಲ್ಲಿಯೇ ಮುಂದುವರಿದಿದ್ದಾರೆ.

ದಕ್ಷಿಣ ಆಫ್ರಿಕಾ ಅದಾಗಲೇ ಸೆಮಿಫೈನಲ್ ತಲುಪುವ ಸ್ಪರ್ಧಿ ಎಂದೇ ಭಾವಿಸಲಾಗಿತ್ತು. ಆದ್ರೆ ಪಾಯಿಂಟ್ಸ್ ಟೇಬಲ್‌ನಲ್ಲಿ ಎಲ್ಲವೂ ಅದಲು ಬದಲಾಯಿತು. ಒಂದೂ ಪಂದ್ಯ ಗೆದ್ದಿರದ ನೆದರ್ಲ್ಯಾಂಡ್ಸ್‌ ಅಂತಿಮ ಪಂದ್ಯದಲ್ಲಿ ಔಟ್ ಆಫ್ ಸಿಲಬಸ್ ರೀತಿಯಲ್ಲಿ ಬಂದು ದ.ಆಫ್ರಿಕಾಗೆ ಸೋಲಿನ ರುಚಿ ತೋರಿಸಿತು.

ದ.ಆಫ್ರಿಕಾ ವಿರುದ್ಧ ನೆದರ್ಲ್ಯಾಂಡ್ಸ್‌ ಗೆಲ್ಲುತ್ತಿದ್ದಂತೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡು ತಂಡಗಳಿಗೆ ಸೆಮಿಫೈನಲ್ ಅವಕಾಶ ಸೃಷ್ಟಿಯಾಯಿತು. ಆದ್ರೆ ಪಾಕಿಸ್ತಾನ ತಂಡವು ಸುಲಭವಾಗಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಮೂಲಕ ಸೆಮಿಫೈನಲ್ ಹಾದಿ ಖಚಿತಪಡಿಸಿಕೊಂಡಿತು.

ಬಾಂಗ್ಲಾದೇಶ ವಿರುದ್ಧ ಪಂದ್ಯಕ್ಕೂ ಮುನ್ನ ನಡೆದಂತಹ ನೆದರ್ಲ್ಯಾಂಡ್ಸ್‌ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯದ ಬಳಿಕ ಪಾಕಿಸ್ತಾನ ತಂಡದ ನಾಯಕ ಹಾಗೂ ನೆದರ್ಲ್ಯಾಂಡ್ಸ್‌ ತಂಡದ ನಾಯಕ ಮುಖಾಮುಖಿಯಾದರು. ಈ ವೇಳೆಯಲ್ಲಿ ನೆದರ್ಲ್ಯಾಂಡ್ಸ್‌ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್‌ಗೆ ಮೈದಾನದಲ್ಲಿಯೇ ಬಾಬರ್ ಅಜಮ್ ಧನ್ಯವಾದ ತಿಳಿಸಿದ್ದಾರೆ. ಪಾಕಿಸ್ತಾನದ ಸೆಮಿಫೈನಲ್ ಹಾದಿ ಸುಗಮಗೊಳಿಸಿದ ಕಾರಣಕ್ಕೆ ಪಾಕ್ ನಾಯಕ ಬಾಬರ್ ಈ ಕೃತಜ್ಞತೆ ತಿಳಿಸಿರುವ ವೀಡಿಯೋ ಸಾಕಷ್ಟು ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ಬಾಬರ್ ಅಜಮ್ ನಗುಮುಖದಿಂದ ನೆದರ್ಲ್ಯಾಂಡ್ಸ್‌ ತಂಡದ ನಾಯಕನಿಗೆ ಧನ್ಯವಾದ ಎಂದು ಸಿಗ್ನಲ್ ನೀಡಿದ ಬಳಿಕ, ಬಾಂಗ್ಲಾದೇಶ ವಿರುದ್ಧ ನೀವು ಆಡಿ ಗೆಲ್ಲಿ ಎಂದು ನೆದರ್ಲ್ಯಾಂಡ್ಸ್ ತಂಡದ ನಾಯಕ ತಿಳಿಸಿದ್ದಾರೆ. ಏಕೆಂದರೆ ಪಾಕಿಸ್ತಾನ ಗೆದ್ದ ಬಳಿಕ ನೆದರ್ಲ್ಯಾಂಡ್ಸ್ ಟಾಪ್‌ 4ನಲ್ಲಿ ಕಾಣಿಸಿಕೊಂಡು ವಿಶ್ವಕಪ್ ಅಭಿಯಾನ ಮುಗಿಸಿತು.

ಟಾಪ್ 4ನಲ್ಲಿ ನೆದರ್ಲ್ಯಾಂಡ್ಸ್‌ ಸ್ಥಾನ ಪಡೆದ ಪರಿಣಾಮ 2024ರಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಯುಎಸ್‌ಎನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಸೂಪರ್‌ 12ಗೆ ನೇರವಾಗಿ ಅರ್ಹತೆ ಪಡೆದಿದೆ.

Story first published: Monday, November 7, 2022, 10:28 [IST]
Other articles published on Nov 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+