For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ vs ಅಫ್ಘಾನಿಸ್ತಾನ: ಅಂತಿಮ ಏಕದಿನ ಪಂದ್ಯ ಗೆದ್ದು ವೈಟ್‌ವಾಷ್ ಮುಖಭಂಗದಿಂದ ಪಾರಾದ ಅಫ್ಘಾನ್

BAN vs AFG: Afghanistan won by 7 wickets against Bangladesh in 3rd ODI

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಕ್ರಿಕೆಟ್ ಟೂರ್ನಿಗಳು ಜರುಗುತ್ತಿದ್ದು, ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ಬಾಂಗ್ಲಾದೇಶ ಪ್ರವಾಸವನ್ನು ಕೈಗೊಂಡಿದೆ. ಹೌದು, ಬಾಂಗ್ಲಾದೇಶ ಪ್ರವಾಸವನ್ನು ಕೈಗೊಂಡಿರುವ ಅಫ್ಘಾನಿಸ್ತಾನ ಬಾಂಗ್ಲಾದೇಶದ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ 2 ಪಂದ್ಯಗಳ ಟಿ ಟ್ವೆಂಟಿ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಹೀಗೆ ಬಾಂಗ್ಲಾದೇಶ ಪ್ರವಾಸವನ್ನು ಕೈಗೊಂಡಿರುವ ಅಫ್ಘಾನಿಸ್ತಾನ ಮೊದಲಿಗೆ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸೋಲನ್ನು ಅನುಭವಿಸಿದೆ.

ಹೌದು, ಪ್ರವಾಸಿ ಅಫ್ಘಾನಿಸ್ತಾನದ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್‍ಗಳ ಜಯ ಸಾಧಿಸಿದ್ದ ಬಾಂಗ್ಲಾದೇಶ ನಂತರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 88 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2 - 0 ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಹೀಗೆ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಬಾಂಗ್ಲಾದೇಶ ತೃತೀಯ ಏಕದಿನ ಪಂದ್ಯದಲ್ಲಿಯೂ ಕೂಡ ಜಯ ಸಾಧಿಸುವುದರ ಮೂಲಕ ಅಫ್ಘಾನಿಸ್ತಾನಕ್ಕೆ ವೈಟ್ ವಾಶ್ ಬಳಿಯುವ ಯೋಜನೆಯಲ್ಲಿತ್ತು. ಆದರೆ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ಇಂದು (ಫೆಬ್ರವರಿ 28) ಚತ್ತೋಗ್ರಾಮ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ತೃತೀಯ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಬಾಂಗ್ಲಾದೇಶ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ವೈಟ್ ವಾಷ್ ಮುಖಭಂಗದಿಂದ ತಪ್ಪಿಸಿಕೊಂಡಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ದುಕೊಂಡು 46.5 ಓವರ್‌ಗಳಲ್ಲಿ 192 ರನ್ ಗಳಿಸಿ ಆಲ್ ಔಟ್ ಆಯಿತು. ಬಾಂಗ್ಲಾದೇಶದ ಪರ ಲಿಟನ್ ದಾಸ್ 86 ರನ್, ಶಕಿಬ್ ಅಲ್ ಹಸನ್ 30 ರನ್ ಮತ್ತು ಮಹಮದ್ದುಲ್ಲಾ 29 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾವುದೇ ಆಟಗಾರ ಕೂಡ ಎರಡಂಕೆ ಮುಟ್ಟುವಲ್ಲಿ ಯಶಸ್ವಿಯಾಗಲಿಲ್ಲ. ಅತ್ತ ಅಫ್ಘಾನಿಸ್ತಾನದ ಪರ ರಶೀದ್ ಖಾನ್ 3 ವಿಕೆಟ್ ಮತ್ತು ಮೊಹಮ್ಮದ್ ನಬಿ 2 ವಿಕೆಟ್ ಗಳಿಸಿದರೆ, ಫೈಸಲ್ ಫಾರೂಕಿ ಮತ್ತು ಅಸ್ಮತುಲ್ಲಾ ಒಮರ್ಝೈ ತಲಾ ಒಂದೊಂದು ವಿಕೆಟ್ ಪಡೆದರು.

ಇನ್ನು ಬಾಂಗ್ಲಾದೇಶ ನೀಡಿದ್ದ 193 ರನ್‌ಗಳ ಸಾಧಾರಣ ಗುರಿಯನ್ನು ಅಫ್ಘಾನಿಸ್ತಾನ 3 ವಿಕೆಟ್ ನಷ್ಟಕ್ಕೆ 40.1 ಓವರ್‌ಗಳಲ್ಲಿ ಮುಟ್ಟಿತು. ಅಫ್ಘಾನಿಸ್ತಾನದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ರಹ್ಮಾನುಲ್ಲಾ ಗುರ್ಬಝ್ ಅಜೇಯ 106 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನು ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಇನ್ನು ಮತ್ತೋರ್ವ ಆಟಗಾರ ರಿಯಾಜ್ ಹಸನ್ 35 ರನ್ ಗಳಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಹಮತ್ ಶಾ 47 ರನ್, ಹಶ್ಮತುಲ್ಲಾ ಶಾಹಿದಿ 2 ರನ್ ಮತ್ತು ನಜೀಬುಲ್ಲಾ ಜದ್ರಾನ್ ಅಜೇಯ 1 ರನ್ ಕಲೆ ಹಾಕಿದರು.

Story first published: Monday, February 28, 2022, 23:44 [IST]
Other articles published on Feb 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+