
ಮೌಂಟ್ ಮೌಂಗನ್ಯುಯಿನಲ್ಲಿ ನಡೆದದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ಐತಿಹಾಸಿಕ ಗೆಲುವನ್ನ ಪಡೆದಿದೆ. ನಾಲ್ಕನೇ ದಿನದಂತ್ಯಕ್ಕೆ ಕಿವೀಸ್ ತಂಡ ತನ್ನ ಪ್ರಮುಖ ಐದು ವಿಕೆಟ್ ಕಳೆದುಕೊಂಡಿದ್ದು, ಕೇವಲ 17 ರನ್‌ಗಳ ಮುನ್ನಡೆ ಸಾಧಿಸಿತ್ತು. ಆದ್ರೆ ಅಂತಿಮ ದಿನದಾಟದಲ್ಲಿ ಎಬಡಾಟ್ ಹುಸೇನ್ ಬೌಲಿಂಗ್ ದಾಳಿಗೆ ನೆಲಕಚ್ಚಿದ ನ್ಯೂಜಿಲೆಂಡ್ ಕೇವಲ 169 ರನ್‌ಗಳಿಗೆ ಆಲೌಟ್ ಆಯಿತು.
ಕಿವೀಸ್ ನೀಡಿದ ಅಲ್ಪ ಗುರಿಯನ್ನ ಬೆನ್ನತ್ತಿದ ಬಾಂಗ್ಲಾದೇಶ ಎರಡು ವಿಕೆಟ್ ನಷ್ಟಕ್ಕೆ 42 ರನ್ ಕಲೆಹಾಕುವ ಮೂಲಕ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ನ್ಯೂಜಿಲೆಂಡ್ ತಂಡವನ್ನ ಮೊದಲ ಬಾರಿಗೆ ಯಾವುದೇ ಫಾರ್ಮೆಟ್‌ನಲ್ಲಿ ಸೋಲಿಸಿದ ಐತಿಹಾಸಿಕ ಸಾಧನೆ ಮಾಡಿತು. ಈವರೆಗೂ ಕಿವೀಸ್ ವಿರುದ್ಧ ಅವರದ್ದೇ ನೆಲದಲ್ಲಿ ಬಾಂಗ್ಲಾ ಯಾವುದೇ ಪಂದ್ಯ ಗೆದ್ದಿರಲಿಲ್ಲ.
ಇದಕ್ಕೂ ಮೊದಲು ನಾಲ್ಕನೇ ದಿನದಂತ್ಯಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡ 147 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡದ ಪರವಾಗಿ ಡೆವೋನ್ ಕಾನ್ವೆ ಭರ್ಜರಿ ಶತಕ ಹಾಗೂ ಹೆನ್ರಿ ನಿಕೋಲಸ್ ಮತ್ತು ವಿಲ್ ಯಂಗ್ ಅರ್ಧ ಶತಕದ ಹೊರತಾಗಿಯೂ ನ್ಯೂಜಿಲೆಂಡ್ ತಂಡವನ್ನು 328 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಬಾಂಗ್ಲಾದೇಶ ಯಶಸ್ವಿಯಾಗಿತ್ತು.
ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ತಂಡದ ಎಲ್ಲಾ ಆಟಗಾರರು ಸಂಘಟಿತ ಆಟ ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ನಾಯಕ ಮಾಮಿನ್ಯುಲ್ ಹಾಗೂ ಲಿಟನ್ ದಾಸ್ ಜೊತೆಯಾಟ 158 ರನ್‌ಗಳ ಭರ್ಜರಿ ಜೊತೆಯಾಟವನ್ನು ಬಾಂಗ್ಲಾ ಮೈಲುಗೈನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ 458 ರನ್‌ಗಳಿಸಿದ ಬಾಂಗ್ಲಾದೇಶ ತಂಡ 130 ರನ್‌ಗಳ ಬೃಹತ್ ಮುನ್ನಡೆಯನ್ನು ಸಂಪಾದಿಸಿತು.
ಆದ್ರೆ ಎರಡನೇ ಇನ್ನಿಂಗ್ಸ್‌ನಲ್ಲಿ 169ರನ್‌ಗಳಿಗೆ ಆಲೌಟ್ ಆದ ನ್ಯೂಜಿಲೆಂಡ್ ಬಾಂಗ್ಲಾಗೆ ಅಂತಿಮ ದಿನದಾಟದಲ್ಲಿ ಕೇವಲ 40 ರನ್‌ಗಳ ಗುರಿ ನೀಡಿತು. ಬಾಂಗ್ಲಾ ಇಬ್ಬರೂ ಓಪನರ್‌ಗಳನ್ನ ಕಳೆದುಕೊಂಡರು, ನಾಯಕ ಮಾಮಿನ್ಯುಲ್ ಹಾಗೂ ಮುಷ್ಫೀಕರ್ ರಹೀಮ್ ತಂಡವನ್ನ ಗೆಲುವಿನ ದಡ ತಲುಪಿಸಿದ್ರು. ಬಾಂಗ್ಲಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಕಬಳಿಸಿದ ಎಬಾಡೋಟ್ ಹುಸೇನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.
ವಿದೇಶಿ ನೆಲದಲ್ಲಿ ಆರನೇ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ಬರೆದ ಬಾಂಗ್ಲಾದೇಶ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಈ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ದಾಖಲೆಗಳು:
* ಬಾಂಗ್ಲಾದೇಶ ತಂಡ ಆರನೇ ಬಾರಿಗೆ ವಿದೇಶಿ ನೆಲದಲ್ಲಿ ಟೆಸ್ಟ್ ಪಂದ್ಯ ಗೆದ್ದಂತಾಗಿದೆ. ಈ ಮೊದಲು ಕೆರಿಬಿಯನ್‌ನಲ್ಲಿ (2009) ಎರಡು ಟೆಸ್ಟ್ ಪಂದ್ಯ ಗೆಲುವು, ಜಿಂಬಾಬ್ವೆಯಲ್ಲಿ (2013 ಮತ್ತು 2021) ಮತ್ತು ಶ್ರೀಲಂಕಾದಲ್ಲಿ (2017) ಬಾಂಗ್ಲಾದೇಶ ವಿದೇಶದಲ್ಲಿ ಟೆಸ್ಟ್ ಗೆದ್ದ ಆರನೇ ನಿದರ್ಶನವಾಗಿದೆ. ನ್ಯೂಜಿಲೆಂಡ್ ವಿರುದ್ಧದ 16 ಪ್ರಯತ್ನಗಳಲ್ಲಿ ಬಾಂಗ್ಲಾದೇಶದ ಮೊದಲ ಜಯ ಇದಾಗಿದ್ದು, ಅವರ ಹಿಂದಿನ 15 ಮುಖಾಮುಖಿಗಳಲ್ಲಿ 12 ಸೋಲುಗಳು ಮತ್ತು ಮೂರು ಪಂದ್ಯ ಡ್ರಾ ಆಗಿದೆ.
* ನ್ಯೂಜಿಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಕಳೆದ 10 ವರ್ಷಗಳಲ್ಲಿ ಟೆಸ್ಟ್ ಪಂದ್ಯ ಗೆದ್ದ ಮೊದಲ ಏಷ್ಯಾ ತಂಡವಾಗಿದೆ.
* SENA ದೇಶಗಳಲ್ಲಿ ಟೆಸ್ಟ್‌ನಲ್ಲಿ ಬಾಂಗ್ಲಾದೇಶವು ಈ ಗೆಲುವಿನ ಮೊದಲು, ನಾಲ್ಕು ದೇಶಗಳಲ್ಲಿ ತಮ್ಮ ಮೊದಲ 22 ಟೆಸ್ಟ್‌ಗಳಲ್ಲಿ ಪ್ರತಿಯೊಂದನ್ನು ಸೋತಿದ್ದರು. ಬಾಂಗ್ಲಾದೇಶವು ಕೊನೆಯದಾಗಿ 2003 ರಲ್ಲಿ ಆಸ್ಟ್ರೇಲಿಯಾ ಮತ್ತು 2010 ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿತು.
* ಬಾಂಗ್ಲಾದೇಶ ವಿರುದ್ಧ ಈ ಮೊದಲು ಎಲ್ಲಾ ಫಾರ್ಮೆಟ್‌ಗಳಲ್ಲಿ ನ್ಯೂಜಿಲೆಂಡ್ 32 ಪಂದ್ಯಗಳ ಗೆಲುವು ಸಾಧಿಸಿತ್ತು. 15ರಲ್ಲಿ ಒಂಬತ್ತು ಟೆಸ್ಟ್ ಗೆಲುವು, 16 ಏಕದಿನ ಪಂದ್ಯಗಳು ಮತ್ತು ಏಳು ಟಿ20ಗಳಲ್ಲಿ ಮುಖಾಮುಖಿಯಾಗಿದ್ದರು, ಇವೆಲ್ಲವೂ ಆತಿಥೇಯ ತಂಡದ ಗೆಲುವಿನಲ್ಲಿ ಕೊನೆಗೊಂಡಿತು.
* ನ್ಯೂಜಿಲೆಂಡ್‌ನಲ್ಲಿ ನ್ಯೂಜಿಲೆಂಡ್ ತಂಡವು ಸತತ 17 ಟೆಸ್ಟ್ ಪಂದ್ಯ ಗೆಲುವು ಸಾಧಿಸಿದ್ದು, ಈ ಗೆಲುವಿನ ಓಟವು ಮೌಂಟ್ ಮೌಂಗನುಯಿಯಲ್ಲಿ ಬಾಂಗ್ಲಾದೇಶದ ಗೆಲುವಿನೊಂದಿಗೆ ಕೊನೆಗೊಂಡಿದೆ.