BAN vs WI: ಅಂತಿಮ ಏಕದಿನ ಗೆದ್ದು ತವರಿನಲ್ಲಿ ಮುಖಭಂಗದಿಂದ ಪಾರಾಗುತ್ತಾ ವಿಂಡೀಸ್? ಲೈವ್ ಸ್ಕೋರ್ ಇಲ್ಲಿದೆ

ಬಾಂಗ್ಲಾದೇಶ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದ್ದು, ಪ್ರವಾಸದ ಅಂತಿಮ ಪಂದ್ಯವಾದ ಮೂರನೇ ಏಕದಿನ ಪಂದ್ಯದಲ್ಲಿ ಇಂದು ( ಜುಲೈ 16 ) ಸೆಣಸಾಟವನ್ನು ನಡೆಸುತ್ತಿದೆ. ಗಯಾನಾದ ಪ್ರೊವಿಡೆನ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಈ ತೃತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪ್ರವಾಸಿ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ದುಕೊಂಡಿದ್ದು ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.
ಅದರಂತೆ ಮೊದಲು ಬ್ಯಾಟಿಂಗ್ ಆರಂಭಿಸಿರುವ ವೆಸ್ಟ್ ಇಂಡೀಸ್ ಪರ ಆರಂಭಿಕ ಆಟಗಾರರಾಗಿ ವಿಕೆಟ್ ಕೀಪರ್ ಶಾಯ್ ಹೋಪ್ ಮತ್ತು ಬ್ರೆಂಡನ್ ಕಿಂಗ್ ಕಣಕ್ಕಿಳಿದಿದ್ದಾರೆ. ಆದರೆ ಈ ಇಬ್ಬರು ಆರಂಭಿಕ ಆಟಗಾರರೂ ಸಹ ಒಂದಂಕಿಗೆ ವಿಕೆಟ್ ಒಪ್ಪಿಸಿದ್ದು ವೆಸ್ಟ್ ಇಂಡೀಸ್ ಆರಂಭಿಕ ಆಘಾತ ಅನುಭವಿಸಿದೆ.
ಶಾಯ್ ಹೋಪ್ 15 ಎಸೆತಗಳಲ್ಲಿ ಕೇವಲ 2 ರನ್ ಕಲೆಹಾಕಿ ಔಟ್ ಆದರೆ, ಬ್ರೆಂಡನ್ ಕಿಂಗ್ 9 ಎಸೆತಗಳಲ್ಲಿ 8 ರನ್ ಕಲೆ ಹಾಕಿ ವಿಕೆಟ್ ಒಪ್ಪಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ 4.5 ಓವರ್‌ಗಳಲ್ಲಿ 15 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇತ್ತಂಡಗಳ ನಡುವಿನ ಈ ತೃತೀಯ ಏಕದಿನ ಪಂದ್ಯದ ಲೈವ್ ಸ್ಕೋರ್ ಈ ಕೆಳಕಂಡಂತಿದೆ.

ವೆಸ್ಟ್ ಇಂಡೀಸ್ ಆಡುವ ಬಳಗ
ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಕೀಸಿ ಕಾರ್ಟಿ, ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಕೀಮೋ ಪಾಲ್, ಅಕೇಲ್ ಹೊಸೈನ್, ಗುಡಾಕೇಶ್ ಮೋಟಿ, ಅಲ್ಜಾರಿ ಜೋಸೆಫ್

ಬಾಂಗ್ಲಾದೇಶ ಆಡುವ ಬಳಗ
ತಮೀಮ್ ಇಕ್ಬಾಲ್ (ನಾಯಕ), ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೋ, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹಿದಿ ಹಸನ್, ಮೊಸದ್ದೆಕ್ ಹೊಸೈನ್, ನಸುಮ್ ಅಹ್ಮದ್, ತೈಜುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್

ಟೆಸ್ಟ್ ಹಾಗೂ ಟಿ ಟ್ವೆಂಟಿ ಸರಣಿಗಳನ್ನು ವಶಪಡಿಸಿಕೊಂಡಿದ್ದ ವಿಂಡೀಸ್
ಮೊದಲಿಗೆ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆದಿದ್ದ 2 ಪಂದ್ಯಗಳ ಟೆಸ್ಟ್ ಸರಣಿಯ ಎರಡೂ ಪಂದ್ಯಗಳಲ್ಲಿಯೂ ಜಯ ಸಾಧಿಸಿದ್ದ ವೆಸ್ಟ್ ಇಂಡೀಸ್ ಬಾಂಗ್ಲಾದೇಶಕ್ಕೆ ವೈಟ್ ವಾಷ್ ಬಳಿದಿತ್ತು. ನಂತರ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಪ್ರಥಮ ಪಂದ್ಯ ಮಳೆಯ ಕಾರಣದಿಂದಾಗಿ ರದ್ದಾಗಿತ್ತು ಹಾಗೂ ಉಳಿದ 2 ಟಿ ಟ್ವೆಂಟಿ ಪಂದ್ಯಗಳಲ್ಲಿಯೂ ವೆಸ್ಟ್ ಇಂಡೀಸ್ ಜಯ ಸಾಧಿಸಿ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತ್ತು. ಆದರೆ ಏಕದಿನ ಸರಣಿಯಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸುವಲ್ಲಿ ವಿಫಲವಾದ ವಿಂಡೀಸ್ ಪ್ರಥಮ ಹಾಗೂ ದ್ವಿತೀಯ ಎರಡೂ ಏಕದಿನ ಪಂದ್ಯಗಳಲ್ಲಿ ಪ್ರವಾಸಿ ಬಾಂಗ್ಲಾದೇಶಕ್ಕೆ ಶರಣಾಗಿದೆ. ಈ ಮೂಲಕ ಈಗಾಗಲೇ ಸರಣಿಯನ್ನು ಕೈಚೆಲ್ಲಿರುವ ವೆಸ್ಟ್ ಇಂಡೀಸ್ ಇಂದು ನಡೆಯುತ್ತಿರುವ ಅಂತಿಮ ಏಕದಿನ ಪಂದ್ಯವನ್ನು ಗೆಲ್ಲುವುದರ ಮೂಲಕ ತವರಿನಲ್ಲಿಯೇ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗುವುದರಿಂದ ಪಾರಾಗಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications