For Quick Alerts
ALLOW NOTIFICATIONS  
For Daily Alerts
 

ಟಿ20 ಸರಣಿ: ಅಫ್ಘಾನಿಸ್ತಾನ ವಿರುದ್ಧ ಭಾರೀ ಅಂತರದ ಗೆಲುವು ಸಾಧಿಸಿದ ಬಾಂಗ್ಲಾದೇಶ

Bangla vs Afghan, T20 series 1st match, Bangladesh won by 61 runs Highlights

ಅಫ್ಘಾನಿಸ್ತಾನ ವಿರುದ್ಧದ ಎಕದಿನ ಸರಣಿಯನ್ನು ವಶಕ್ಕೆ ಪಡೆದಿರುವ ಬಾಂಗ್ಲಾದೇಶ ಟಿ20 ಸರಣಿಯಲ್ಲಿಯೂ ತನ್ನ ಮೇಲುಗೈ ಸಾಧಿಸಿದೆ. ಗುರುವಾರ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಫ್ಘಾನಿಸ್ತಾನ ಸಂಪೂರ್ಣ ಶರಣಾಯಿತು. ಬ್ಯಾಟಿಂಗ್ ವಿಭಾಗದಲ್ಲಿಯೂ ಅಫ್ಘಾನಿಸ್ತಾನ ಕಳಪೆ ಪ್ರದರ್ಶನ ನೀಡಿದ ಪರಿಣಾಮವಾಗಿ ಬಾಂಗ್ಲಾದೇಶ 61 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಪ್ರವಾಸಿ ಅಫ್ಘನ್ 0-1 ಅಂತರದ ಹಿನ್ನಡೆ ಅನುಭವಿಸಿದೆ.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಆರಂಭದಲ್ಲಿ ಹಿನ್ನಡೆ ಅನುಭವಿಸಿತು. ಅಫ್ಘಾನಿಸ್ತಾನದ ಬೌಲರ್‌ಗಳ ಉತ್ತಮ ದಾಳಿಗೆ ಪ್ರಮುಖ ಆಟಗಾರರು ರನ್‌ಗಳಿಸಲು ವಿಫಲವಾದರು. ಆದರೆ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದ ಲಿಟನ್ ದಾಸ್ ಈ ಪಂದ್ಯದಲ್ಲಿಯೂ ತಮ್ಮ ಉತ್ತಮ ಫಾರ್ಮ್ ಮುಂದುವರಿಸಿದ್ದಾರೆ. 44 ಎಸೆತ ಎದುರಿಸಿದ ಲಿಟನ್ ದಾಸ್ 60 ರನ್‌ಗಳಿಸಿದರು. ಉಳಿದಂತೆ ಬಾಂಗ್ಲಾ ದಾಂಡಿಗರಿಂದ ಉತ್ತಮ ಪ್ರದರ್ಶನಬ ವ್ಯಕ್ತವಾಗಲಿಲ್ಲ.

ಇದರ ಪರಿಣಾಮವಾಗಿ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 155 ರನ್‌ಗಳಿಸಿತು. ಅಫ್ಘಾನಿಸ್ತಾನ ಪರವಾಗಿ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಫಝಲ್ಲಾಖ್ ಫಾರೂಕಿ ಹಾಗೂ ಅಜ್ಮತುಲ್ಲಾ ತಲಾ ಎರ್ಡಯ ವಿಕೆಟ್ ಕಬಳಿಸಿದರೆ ರಶೀದ್ ಖಾನ್ ಹಾಗೂ ಕ್ವಾಯಿಸ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.

ಬಾಂಗ್ಲಾದೇಶ ನೀಡಿದ 156 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಅಫ್ಘಾನಿಸ್ತಾನ ಆರಂಭದಿಂದಲೇ ಆಘಾತ ಅನುಭವಿಸಿತು. 8 ರನ್‌ಗಳಿಸಿದ್ದ ವೇಳೆ ಮೂರು ವಿಕೆಟ್ ಕಳೆದುಕೊಂಡಿದ್ದ ಅಫ್ಘಾನಿಸ್ತಾನ 20 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಅಫ್ಘನ್ ದಾಂಡಿಗರ ವಿರುದ್ಧ ಬಾಂಗ್ಲಾ ಬೌಲರ್‌ಗಳು ಮೇಲುಗೈ ಸಾಧಿಸುತ್ತಲೇ ಸಾಗಿದರು. ಅಫ್ಘಾನಿಸ್ತಾನದ ಯಾವಿಬ್ಬ ಆಟಗಾರನಿಂದಲೂ ಉತ್ತಮ ಮೊತ್ತದ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಅಫ್ಘಾನಿಸ್ತಾನ 17.4 ಓವರ್‌ಗಳಲ್ಲಿ 94 ರನ್‌ಗಳಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ 61 ರನ್‌ಗಳ ಅಂತರದ ಭಾರೀ ಸೋಲು ಅನುಭವಿಸಿದೆ.

ಇನ್ನು ಆತಿಥೇಯ ಬಾಂಗ್ಲಾದೇಶ ಈ ಗೆಲುವಿನೊಂದಿಗೆ ಟಿ20೦ ಸರಣಿಯಲ್ಲಿಯೂ ಮುನ್ನಡೆ ಸಾಧಿಸಿದೆ. ಏಕದಿನ ಸರಣಿಯನ್ನು 2-1 ಅಂತರದಿಂದ ವಶಕ್ಕೆ ಪಡೆದಿರುವ ಬಾಂಗ್ಲಾದೇಶ ಟಿ20 ಸರಣಿಯನ್ನು ಕೂಡ ವಶಕ್ಕೆ ಪಡೆಯುವ ಉತ್ಸಾಹದಲ್ಲಿದೆ.

LIVE ಸ್ಕೋರ್‌ಕಾರ್ಡ್ ಹೀಗಿದೆ:

ಬಾಂಗ್ಲಾದೇಶ ಆಡುವ ಬಳಗ: ಲಿಟನ್ ದಾಸ್ (ವಿಕೆಟ್ ಕೀಪರ್), ಮೊಹಮ್ಮದ್ ನಯಿಮ್, ಶಾಕಿಬ್ ಅಲ್ ಹಸನ್, ಮಹಮ್ಮದುಲ್ಲಾ (ನಾಯಕ), ಯಾಸಿರ್ ಅಲಿ, ಅಫೀಫ್ ಹೊಸೈನ್, ಮುನಿಮ್ ಶಹರಿಯಾರ್, ಮಹೇದಿ ಹಸನ್, ನಸುಮ್ ಅಹ್ಮದ್, ಶೋಹಿದುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್
ಬೆಂಚ್: ಮುಶ್ಫಿಕರ್ ರಹೀಮ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ

ಅಫ್ಘಾನಿಸ್ತಾನ ಆಡುವ ಬಳಗ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ದರ್ವಿಶ್ ರಸೂಲಿ, ಕರೀಂ ಜನತ್, ಫಝಲ್ಹಕ್ ಫಾರೂಕಿ, ಮುಜೀಬ್ ಉರ್ ರಹಮಾನ್, ಖೈಸ್ ಅಹ್ಮದ್
ಬೆಂಚ್: ಫರೀದ್ ಅಹ್ಮದ್ ಮಲಿಕ್, ಅಫ್ಸರ್ ಝಜೈ, ಶರಫುದ್ದೀನ್ ಅಶ್ರಫ್, ಉಸ್ಮಾನ್ ಘನಿ, ನಿಜತ್ ಮಸೂದ್

Story first published: Thursday, March 3, 2022, 19:53 [IST]
Other articles published on Mar 3, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+