ನನ್ನ ಬಹುದೊಡ್ಡ ಕನಸು ನನಸಾಯಿತು ಎಂದು ಸಿಎಸ್‌ಕೆ ಬ್ಯಾಟ್ಸ್‌ಮನ್

ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ವಿರುದ್ಧ ಉತ್ತಮ ಆಟ ಪ್ರದರ್ಶಿಸಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಗೆಲುವಿನ ಸಿಹಿ ಹಂಚಿದ ಯುವ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈಗೆ ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದರು.
ಆರ್‌ಸಿಬಿ ನೀಡಿದ 146 ರನ್‌ಗಳ ಗುರಿ ಬೆನ್ನತ್ತಿದ ಸಿಎಸ್‌ಕೆ ಪರ ಗಾಯಕ್ವಾಡ್ ಅಜೇಯ 65ರನ್, ಫಾಫ್ ಡುಪ್ಲೆಸಿಸ್ 25, ಅಂಬಟಿ ರಾಯುಡು 39, ಧೋನಿ ಅಜೇಯ 19ರನ್ ದಾಖಲಿಸಿ ತಂಡಕ್ಕೆ 8 ಎಸೆತಗಳು ಬಾಕಿ ಇರುವಂತೆಯೇ ಗೆಲುವನ್ನು ತಂದುಕೊಟ್ಟರು.
ಚೆನ್ನೈ ಬ್ಯಾಟಿಂಗ್ ಅಷ್ಟೇ ಅಲ್ಲದೆ ಸಂಪೂರ್ಣ ಪ್ರದರ್ಶನ ನೀಡಿತು. ಮೊದಲಿಗೆ ಅವರ ಬೌಲರ್‌ಗಳು ಆರ್‌ಸಿಬಿಯನ್ನು 145 ಕ್ಕೆ ನಿರ್ಬಂಧಿಸಿದರು. ಓಪನರ್ ಗಾಯಕ್ವಾಡ್ ಅಜೇಯ ಅರ್ಧಶತಕ ದಾಖಲಿಸಿ ಮೂರು ಸಿಕ್ಸರ್‌ಗಳ ಸಹಾಯದಿಂದ 51 ಎಸೆತಗಳಲ್ಲಿ 65 ರನ್ ಗಳಿಸಿದರು.
ಆರ್‌ಇಬಿ ವಿರುದ್ಧ ಚೆನ್ನೈ ಗೆಲುವಿನ ಬಳಿಕ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ರುತುರಾಜ್ ಗಾಯಕ್ವಾಡ್ ತಂಡದ ವಿಜಯಕ್ಕೆ ಕೊಡುಗೆ ನೀಡಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿದರು. ಇದರ ಜೊತೆಗೆ ಧೋನಿಯಂತಹ ವಿಶ್ವಶ್ರೇಷ್ಠ ಆಟಗಾರನ ಜೊತೆ ಆಡುವ ಮೂಲಕ ನನ್ನ ಕನಸು ನನಸಾಗಿದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications