ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ: ಸಂಪೂರ್ಣ ವೇಳಾಪಟ್ಟಿ ಬಿಡುಗಡೆ

ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಮುಂಬರುವ ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್ ಹಾಗೂ ಏಕದಿನ ಸರಣಿಯ ವೇಳಾಪಟ್ಟಿಯನ್ನ ಗುರುವಾರ ಬಿಡುಗಡೆ ಮಾಡಿದೆ. ಡಿಸೆಂಬರ್‌ನಲ್ಲಿ ಭಾರತವು ವಿಶ್ವಕಪ್ ಅಭಿಯಾನ ಮುಗಿಸಿ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿದ್ದು ಎರಡು ಸರಣಿಗಳಲ್ಲಿ ಭಾಗವಹಿಸಲಿದೆ.
ಡಿಸೆಂಬರ್ 1ರಿಂದ ಪ್ರವಾಸ ಶುರುವಾಗಲಿದ್ದು, ಮೊದಲಿಗೆ ಏಕದಿನ ಸರಣಿ ಹಾಗೂ ನಂತರದಲ್ಲಿ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಭಾಗಿಯಾಗಲಿವೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯೊಳಗೆ ಬರಲಿದೆ. ಪ್ರಸ್ತುತ ಭಾರತ 52.08 ಪರ್ಸೆಂಟ್‌ನೊಂದಿಗೆ ನಾಲ್ಕನೇ ಸ್ಥಾನ ಅಲಂಕರಿಸಿದ್ದು, ಬಾಂಗ್ಲಾದೇಶ ವಿಶ್ವ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಅಂತಿಮ ಸ್ಥಾನದಲ್ಲಿದ್ದು, 13.13 ಪರ್ಸೆಂಟೇಜ್ ಪಾಯಿಂಟ್ಸ್ ಹೊಂದಿದೆ.

2015ರ ಬಳಿಕ ಟೀಂ ಇಂಡಿಯಾ ಮೊದಲ ಬಾಂಗ್ಲಾ ಪ್ರವಾಸ
ಮಹೇಂದ್ರ ಸಿಂಗ್ ನಾಯಕತ್ವದಲ್ಲಿ ಟೀಂ ಇಂಡಿಯಾ ಕೊನೆಯ ಬಾರಿಗೆ 2015ರಲ್ಲಿ ಪ್ರವಾಸ ಕೈಗೊಂಡಿತ್ತು. ಅದಾದ ಬಳಿಕ ಮೊದಲ ಬಾರಿಗೆ ಟೀಂ ಇಂಡಿಯಾ ಪ್ರವಾಸ ಕೈಗೊಳ್ಳಲಿದೆ. 2015ರ ಪ್ರವಾಸದಲ್ಲಿ ಏಕೈಕ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ 2-1 ಅಂತರದಲ್ಲಿ ಐತಿಹಾಸಿಕ ಗೆಲುವು ಪಡೆದಿತ್ತು.

ಬಿಸಿಸಿಐ ಗೆ ಧನ್ಯವಾದ ತಿಳಿಸಿದ ಬಾಂಗ್ಲಾ ಕ್ರಿಕೆಟ್ ಬೋರ್ಡ್
''ಇತ್ತೀಚಿನ ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯಗಳು ಅನೇಕ ಐತಿಹಾಸಿಕ ಹೋರಾಟ ಹಾಗೂ ಜಿದ್ದಾಜಿದ್ದಿನ ಸ್ಪರ್ಧೆಗೆ ಇಳಿದಿದ್ದನ್ನು ಕಂಡಿದ್ದೇವೆ. ಎರಡು ರಾಷ್ಟ್ರಗಳ ಅಭಿಮಾನಿಗಳು ಮತ್ತೊಂದು ಅವಿಸ್ಮರಣೀಯ ಸರಣಿಯನ್ನ ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ. ಬಿಸಿಬಿ ಜೊತೆಗೆ ಅತ್ಯಂತ ನಿಕಟವಾದ ಸಂಪರ್ಕವನ್ನು ಹೊಂದಿದ್ದಲ್ಲದೆ, ವೇಳಾಪಟ್ಟಿಯನ್ನು ಖಚಿತಪಡಿಸಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಧನ್ಯವಾದ ಅರ್ಪಿಸುತ್ತೇನೆ'' ಎಂದು ಬಾಂಗ್ಲಾ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಇದಕ್ಕೆ ಉತ್ತರವಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಮಾತನಾಡಿ ''ಬಾಂಗ್ಲಾ ಕ್ರಿಕೆಟ್ ಬೋರ್ಡ್ ಉಭಯ ರಾಷ್ಟ್ರಗಳ ಸರಣಿಯನ್ನು ಆಯೋಜಿಸುತ್ತಿರುವುದಕ್ಕಾಗಿ ಶುಭಾಶಯ ತಿಳಿಸುತ್ತೇನೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ತೀವ್ರ ಸ್ಪರ್ಧೆಯು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸುತ್ತದೆ. ಬೃಹತ್ ಅಭಿಮಾನಿಗಳ ಬಳಗವನ್ನ ಹೊಂದಿರುವ ಉಭಯ ರಾಷ್ಟ್ರಗಳ ಕ್ರಿಕೆಟ್ ಸರಣಿ ಆಯೋಜನೆಗೆ ಧನ್ಯವಾದಗಳು'' ಎಂದು ಜಯ್ ಷಾ ತಿಳಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್: ಟೂರ್ನಿ ಆಯೋಜನೆಯಲ್ಲಿ ಎಡವಿತೇ ಐಸಿಸಿ? ಪದೇ ಪದೇ ಮಳೆಕಾಟ!

ಟೀಂ ಇಂಡಿಯಾ ಬಾಂಗ್ಲಾ ಪ್ರವಾಸದ ವೇಳಾಪಟ್ಟಿ
ಡಿಸೆಂಬರ್ 1: ಬಾಂಗ್ಲಾದೇಶಕ್ಕೆ ತೆರಳಲಿರುವ ಟೀಂ ಇಂಡಿಯಾ
ಡಿಸೆಂಬರ್ 4: 1ನೇ ಏಕದಿನ ಪಂದ್ಯ, ಢಾಕಾ
ಡಿಸೆಂಬರ್ 7: 2ನೇ ಏಕದಿನ ಪಂದ್ಯ, ಢಾಕಾ
ಡಿಸೆಂಬರ್ 10: 2ನೇ ಏಕದಿನ ಪಂದ್ಯ, ಢಾಕಾ
ಡಿಸೆಂಬರ್ 14-18: ಮೊದಲ ಟೆಸ್ಟ್ ಪಂದ್ಯ, ಚತ್ತೋಗ್ರಾಮ್
ಡಿಸೆಂಬರ್ 22-26: ಎರಡನೇ ಟೆಸ್ಟ್ ಪಂದ್ಯ, ಢಾಕಾ
ಡಿಸೆಂಬರ್ 27: ಬಾಂಗ್ಲಾದೇಶದಿಂದ ಹಿಂದಿರುಗಲಿರುವ ಟೀಂ ಇಂಡಿಯಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications