
ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ನಾಯಕನಾಗಿ ರೋಹಿತ್ ಶರ್ಮಾ ಅವರನ್ನು ಬಿಸಿಸಿಐ ಆಯ್ಕೆ ಮಾಡುವ ಮೂಲಕ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನವನ್ನೇ ಮೂಡಿಸಿತು. ಟಿ20 ತಂಡದ ನಾಯಕತ್ವ ಹೊಂದಿದ್ದ ಹಿಟ್ಮ್ಯಾನ್ಗೆ ಇದೀಗ ಏಕದಿನ ತಂಡದ ಸಾರಥ್ಯವನ್ನೂ ಕೂಡ ನೀಡಲಾಗಿದೆ. ಅತ್ತ ವಿರಾಟ್ ಕೊಹ್ಲಿ ಅವರು ಇನ್ಮುಂದೆ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಮುಂದುವರೆಯಲಿದ್ದಾರೆ.
ವಿರಾಟ್ ಕೊಹ್ಲಿ ಏಕದಿನ ನಾಯಕತ್ವವನ್ನ ತಾವಾಗಿಯೇ ಬಿಟ್ಟುಕೊಡುವಂತೆ ಬಿಸಿಸಿಐ ಎರಡು ದಿನಗಳ ಅವಕಾಶ ನೀಡಿತ್ತು. ಆದ್ರೆ ವಿರಾಟ್ ಇದಕ್ಕೆ ಒಪ್ಪದ ಕಾರಣ ವಿಶ್ವದ ಕ್ರಿಕೆಟ್ ದೊಡ್ಡಣ್ಣ ಈ ಕಠಿಣ ನಿರ್ಧಾರವನ್ನ ತೆಗೆದುಕೊಂಡಿತು. ಈ ಮೂಲಕ ಕೊಹ್ಲಿ ದೀರ್ಘ ಸ್ವರೂಪದ ಫಾರ್ಮೆಟ್‌ಗೆ ಮಾತ್ರ ನಾಯಕತ್ವ ವಹಿಸಲಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಬಿಸಿಸಿಐ ಕೈಗೊಂಡ ಈ ಕಠಿಣ ನಿರ್ಧಾರವು ಉತ್ತಮವಾಗಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ದಿಲೀಪ್ ವೆಂಗಸರ್ಕಾರ್ ಹೇಳಿದ್ದಾರೆ.
''ರೋಹಿತ್ ಶರ್ಮಾ ಅವರನ್ನು ಭಾರತದ ಪೂರ್ಣ ಸಮಯದ ವೈಟ್ ಬಾಲ್ ನಾಯಕರನ್ನಾಗಿ ನೇಮಿಸುವ ಮೂಲಕ ಬಿಸಿಸಿಐ ಸರಿಯಾದ ಕ್ರಮವನ್ನು ಮಾಡಿದೆ '' ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ದಿಲೀಪ್ ವೆಂಗ್‌ಸರ್ಕರ್ ಹೇಳಿದ್ದಾರೆ.
ಕೆಲವರ ಪ್ರಕಾರ ಭಾರತವು ಕೊಹ್ಲಿ ನೇತೃತ್ವದಲ್ಲಿ ಐಸಿಸಿ ಪ್ರಶಸ್ತಿಯನ್ನು ಗೆದ್ದಿಲ್ಲ ಎಂದು ಪರಿಗಣಿಸಿ ಈ ನಿರ್ಧಾರ ಸರಿಯಾಗಿದೆ. ಆದಾಗ್ಯೂ, 2023ರ 50 ಓವರ್‌ಗಳ ವಿಶ್ವಕಪ್ ಭಾರತದಲ್ಲೇ ನಡೆಯುತ್ತಿರುವುದರಿಂದ ನಿರ್ವಹಣೆಯು ಸ್ವಲ್ಪ ಸಮಯದವರೆಗೆ ಕೊಹ್ಲಿಯೊಂದಿಗೆ ಮುಂದುವರಿದಿರಬೇಕು ಎಂದು ಕೆಲವರು ಭಾವಿಸುತ್ತಾರೆ. ವೆಂಗ್‌ಸರ್ಕಾರ್ ಪ್ರಕಾರ, ಶರ್ಮಾ ನಾಯಕನಾಗಿ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಹೀಗಾಗಿ ಇದು ಸರಿಯಾದ ನಿರ್ಧಾರ ಎಂದಿದ್ದಾರೆ.
"ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಒಡಿಐ ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ವೈಟ್ ಬಾಲ್ ನಾಯಕನನ್ನಾಗಿ ಮಾಡುವಲ್ಲಿ ಸರಿಯಾದ ಕ್ರಮವನ್ನು ಮಾಡಿದೆ. ರೋಹಿತ್ ಸ್ವಲ್ಪ ಸಮಯದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅವರು ತಮ್ಮ ನಾಯಕತ್ವದ ತಿರುವು ಪಡೆಯಲು ಕಾಯುತ್ತಿದ್ದರು. ಇದೊಂದು ಒಳ್ಳೆಯ ನಡೆ ಎಂದು ನನ್ನ ಭಾವನೆ'' ಎಂದು ವೆಂಗಸರ್ಕಾರ್ ಅಭಿಪ್ರಾಯ ಪಟ್ಟಿದ್ದಾರೆ.
''ಈಗ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನತ್ತ ತಮ್ಮ ಗಮನವನ್ನ ಕೇಂದ್ರೀಕರಿಸಬಹುದು ಮತ್ತು ರೋಹಿತ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಗಮನಹರಿಸಬಹುದು. ಈಗಾಗಲೇ ರೋಹಿತ್ ಅನಾಯಕರಾಗಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಭಾರತೀಯ ತಂಡದ ನಾಯಕರಾಗಿ ಅವರಿಗೆ ನೀಡಿದ ಯಾವುದೇ ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ, "ಎಂದು ಭಾರತದ ಮಾಜಿ ಆಟಗಾರ ವೆಂಗ್‌ಸರ್ಕರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಒಂದು ದಿನದ ಬಳಿಕ ಬಾಯ್ಬಿಟ್ಟ ಗಂಗೂಲಿ
ಕೊಹ್ಲಿಯನ್ನ ಏಕದಿನ ಕ್ರಿಕೆಟ್‌ನಿಂದ ತೆಗೆದುಹಾಕಿ ವಿವಾದಕ್ಕೆ ಸಿಲುಕಿದ್ದ ಬಿಸಿಸಿಐ ಪರ ಒಂದು ದಿನದ ನಂತರ, ಅಧ್ಯಕ್ಷ ಸೌರವ್ ಗಂಗೂಲಿ ಅವರು ನಿಜವಾದ ಸತ್ಯ ಏನು ಎಂಬುದನ್ನ ಬಹಿರಂಗಪಡಿಸಿದ್ರು. ಅವರು ಮತ್ತು ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಕೊಹ್ಲಿಯೊಂದಿಗೆ ಈ ಕುರಿತು ಮಾತನಾಡಿದ್ದೆವು ಎಂದು ತಿಳಿಸಿದರು. ವೈಟ್-ಬಾಲ್ ಸ್ವರೂಪಗಳಲ್ಲಿ ಇಬ್ಬರು ವಿಭಿನ್ನ ನಾಯಕರನ್ನು ತಪ್ಪಿಸುವ ಯೋಚನೆಯನ್ನು ಕೊಹ್ಲಿಯೊಂದಿಗೆ ಚರ್ಚಿಸಲಾಗಿತ್ತು ಎಂದು ಗಂಗೂಲಿ ಹೇಳಿದ್ದಾರೆ.
"ಇದು ಬಿಸಿಸಿಐ ಮತ್ತು ಆಯ್ಕೆದಾರರು ಒಟ್ಟಾಗಿ ತೆಗೆದುಕೊಂಡ ಕರೆ. ವಾಸ್ತವವಾಗಿ, ಬಿಸಿಸಿಐ ಟಿ20 ನಾಯಕತ್ವದಿಂದ ಕೆಳಗಿಳಿಯದಂತೆ ವಿರಾಟ್‌ಗೆ ವಿನಂತಿಸಿತ್ತು. ಆದರೆ ಅವರು ಒಪ್ಪಲಿಲ್ಲ. ಹೀಗಾಗಿ ಆಯ್ಕೆದಾರರು ಎರಡು ವೈಟ್-ಬಾಲ್ ಫಾರ್ಮ್ಯಾಟ್‌ಗಳಿಗೆ ಇಬ್ಬರು ವಿಭಿನ್ನ ನಾಯಕರನ್ನು ಹೊಂದುವುದು ಸರಿಯಾಗಿಲ್ಲ'' ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ.