ನಾಯಕನ ಸ್ಥಾನ ಕಳೆದುಕೊಳ್ಳಲಿರುವ ರೋಹಿತ್ ಶರ್ಮಾ! ಟಿ20 ಮಾದರಿಗೆ ಇನ್ನು ಈತನೇ ಕ್ಯಾಪ್ಟನ್

ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದೆ. ನಾಯಕ ರೋಹಿತ್ ಶರ್ಮಾ ಮೇಲಿನ ನಾಯಕತ್ವದ ಹೊರೆಯನ್ನು ಕಡಿಮೆ ಮಾಡಲು ನಿರ್ಧರಿಸಿದ್ದು, ಟಿ20 ಮಾದರಿಯಲ್ಲಿ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಹಾರ್ದಿಕ್ ಪಾಂಡ್ಯರನ್ನೇ ಟಿ20 ಮಾದರಿಯಲ್ಲಿ ನಾಯಕನನ್ನಾಗಿ ಮುಂದುವರೆಸಲು ಬಿಸಿಸಿಐ ಆಸಕ್ತವಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಇನ್‌ಸೈಡ್ ಸ್ಪೋರ್ಟ್ ವರದಿ ಮಾಡಿದೆ. ಶ್ರೀಲಂಕಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಗೆ ಮುನ್ನ ಈ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಟಿ20 ಮಾದರಿಯಲ್ಲಿ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ. 2023ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ರೋಹಿತ್ ಶರ್ಮಾ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ನಾಯಕನಾಗಿ ಮುಂದುವರೆಯಲಿದ್ದಾರೆ.
ಏಕದಿನ ವಿಶ್ವಕಪ್‌ನತ್ತ ಹಲವು ಹಿರಿಯ ಆಟಗಾರರಿಗೆ ಗಮನ ಹರಿಸಲು ಸೂಚಿಸಲಿದ್ದು, ಟಿ20 ಪಂದ್ಯಗಳಿಂದ ವಿಶ್ರಾಂತಿ ಪಡೆಯಲಿದ್ದಾರೆ. 2023ರ ಏಕದಿನ ವಿಶ್ವಕಪ್ ಮುಗಿಯುವವರೆಗೆ ರೋಹಿತ್ ಶರ್ಮಾ ಏಕದಿನ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ.

ಬದಲಾವಣೆಗೆ ಮುನ್ನ ಚರ್ಚಿಸಲು ತೀರ್ಮಾನ
ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ವಿಶ್ರಾಂತಿ ಪಡೆಯುತ್ತಿದ್ದಾರೆ. ನಂತರ ಬಿಸಿಸಿಐ ಇವರಿಬ್ಬರನ್ನೂ ಕರೆದು ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಿದೆ. ರೋಹಿತ್ ಶರ್ಮಾರಿಗೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸಲು ಸೂಚನೆ ನೀಡಲಾಗುತ್ತದೆ.
"2024ರ ಟಿ20 ವಿಶ್ವಕಪ್‌ಗೆ ಮುನ್ನ ಈಗಿನಿಂದಲೇ ತಯಾರಿ ನಡೆಸಬೇಕಾಗಿದೆ. ನಾಯಕನ ಪಾತ್ರಕ್ಕೆ ಹಾರ್ದಿಕ್ ಪಾಂಡ್ಯ ಸೂಕ್ತವಾಗಿದ್ದಾರೆ. ಭಾರತದ ಮುಂದಿನ ಟಿ20 ಸರಣಿಗೆ ಮುನ್ನ ಭಾರತದ ಟಿ20 ನಾಯಕನನ್ನಾಗಿ ಹಾರ್ದಿಕ್ ಪಾಂಡ್ಯರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುವುದು" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
"ಬದಲಾವಣೆಯ ಸಮಯ ಬಂದಿದೆ, ರೋಹಿತ್ ಶರ್ಮಾಗೆ ಇನ್ನೂ ಸಾಕಷ್ಟು ಅವಕಾಶ ಇದೆ. ಅವರು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ." ಎಂದು ಹೇಳಿದ್ದಾರೆ.
ಸೂರ್ಯ or ಕೊಹ್ಲಿ: ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಬ್ಯಾಟರ್ ಯಾರು?; ಮಾಜಿ ಕ್ರಿಕೆಟಿಗರಿಂದ ವಿಭಿನ್ನ ಅಭಿಪ್ರಾಯ

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಪಾಂಡ್ಯಗೆ ಪರೀಕ್ಷೆ
ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಈ ಸರಣಿಯಲ್ಲಿ ಅವರ ನಾಯಕತ್ವದ ಪರೀಕ್ಷೆ ನಡೆಯಲಿದೆ. ಸರಣಿಯ ಫಲಿತಾಂಶ ಏನೇ ಆದರೂ, ಪಾಂಡ್ಯ ಅವರನ್ನೇ ನಾಯಕನನ್ನಾಗಿ ಮುಂದುವರೆಸಲು ಬಿಸಿಸಿಐ ತೀರ್ಮಾನಿಸಿದೆ.
ಭಾರತ ತಂಡದ ಹಂಗಾಮಿ ಕೋಚ್ ಆಗಿರುವ ವಿವಿಎಸ್ ಲಕ್ಷ್ಮಣ್ ಭಾರತದ ಕೋಚ್ ಆಗಬೇಕು ಎಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ವಿಶ್ವಕಪ್‌ನಲ್ಲಿ ತಂಡದ ಪ್ರದರ್ಶನದ ನಂತರ ಭಾರತ ತಂಡಕ್ಕೆ ಹೊಸ ನಾಯಕನನ್ನು ನೇಮಿಸಬೇಕು ಎನ್ನುವ ವಾದಕ್ಕೆ ಅವರು ಬೆಂಬಲಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ನಾಯಕನಾಗಿ ಇರಲಿ ಎಂದ ರವಿಶಾಸ್ತ್ರಿ
ಪ್ರೈಮ್ ವಿಡಿಯೋ ಆಯೋಜಿಸಿದ್ದ ಮಾಧ್ಯಮ ಸಭೆಯಲ್ಲಿ ಮಾತನಾಡಿದ ರವಿಶಾಸ್ತ್ರಿ, "ಭಾರತದ ಟಿ20 ತಂಡಕ್ಕೆ ಹೊಸ ನಾಯಕನ ಆಯ್ಕೆಯಾಗುವುದರಿಂದ ಯಾವ ಹಾನಿಯೂ ಆಗುವುದಿಲ್ಲ, ಎಲ್ಲಾ ಮುರು ಸ್ವರೂಪಗಳಲ್ಲಿ ತಂಡವನ್ನು ಮುನ್ನಡೆಸುವುದು ಸುಲಭವಲ್ಲ. ರೋಹಿತ್ ಶರ್ಮಾ ಏಕದಿನ ಮತ್ತು ಟೆಸ್ಟ್ ತಂಡಗಳನ್ನು ಮುನ್ನಡೆಸಲಿದ್ದಾರೆ. ಟಿ20 ತಂಡಕ್ಕೆ ಹೊಸ ನಾಯಕನ ಅಗತ್ಯವಿದೆ, ಈಗಾಗಲೇ ಹಾರ್ದಿಕ್ ಪಾಂಡ್ಯ ಎಂದು ನಿರ್ಧರಿಸಿದ್ದರೆ ಅವರನ್ನು ಮುಂದುವರೆಸಲಿ" ಎಂದು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ನಾಯಕನಾಗಲು ಅರ್ಹತೆ ಹೊಂದಿದ್ದಾರೆ. ಎಲ್ಲಾ ಆಟಗಾರರು ಆತನಲ್ಲಿ ವಿಶ್ವಾಸವಿಡುತ್ತಾರೆ. ಐಪಿಎಲ್‌ನಲ್ಲಿ ಆತ ನಾಯಕನಾಗಿ ಏನು ಮಾಡಿದ್ದಾನೆ ಎನ್ನುವುದನ್ನು ನಾವು ನೋಡಿದ್ದೇವೆ. ಆತನ ನಾಯಕನಾದರೆ ನಾನು ಅದನ್ನು ಇಷ್ಟ ಪಡುತ್ತೇನೆ ಎಂದು ರವಿಶಾಸ್ತ್ರಿ ತಮ್ಮ ಬೆಂಬಲ ಸೂಚಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications