ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯ or ಕೊಹ್ಲಿ: ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಬ್ಯಾಟರ್ ಯಾರು?; ಮಾಜಿ ಕ್ರಿಕೆಟಿಗರಿಂದ ವಿಭಿನ್ನ ಅಭಿಪ್ರಾಯ

Different Opinion From Former Cricketers About Who Is the Best Batsman In T20 World Cup 2022

ಆಸ್ಟ್ರೇಲಿಯಾದಲ್ಲಿ ಮುಕ್ತಾಯಗೊಂಡ 2022ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವು 5 ವಿಕೆಟ್‌ಗಳ ಅಂತರದಿಂದ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಕ್ರಿಕೆಟ್ ತಂಡವು ದೊಡ್ಡ ಸಾಧನೆ ಮಾಡಲು ಸಾಧ್ಯವಾಗಲಿಲ್ಲ, ಆದರೆ ಕೆಲವು ಆಟಗಾರರು ವೈಯಕ್ತಿಕವಾಗಿ ತಮ್ಮ ಪ್ರದರ್ಶನವನ್ನು ಪಂದ್ಯದಿಂದ ಪಂದ್ಯಕ್ಕೆ ಸುಧಾರಿಸಿದರು.

ಬ್ಯಾಟ್ಸ್‌ಮನ್‌ಗಳ ವಿಷಯದಲ್ಲಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಟೂರ್ನಿಯುದ್ದಕ್ಕೂ ಉತ್ತಮವಾಗಿ ಆಡಿದರು. ಆದರೆ ಉಳಿದ ಆಟಗಾರರ ಬೆಂಬಲ ಸಿಗದ ಕಾರಣ ವಿಶ್ವಕಪ್ ಟ್ರೋಫಿ ಗೆಲ್ಲುವ ಆಸೆ ಈಡೇರಲಿಲ್ಲ. ಇದೇ ವೇಳೆ ಈ ಇಬ್ಬರಲ್ಲಿ ಯಾರನ್ನು ಟೂರ್ನಿಯ ಅತ್ಯುತ್ತಮ ಬ್ಯಾಟರ್ ಎಂದು ಕರೆಯಬೇಕು? ಎಂಬ ಗೊಂದಲ ಎಲ್ಲರಲ್ಲಿದೆ.

ENG vs AUS: ಮಲಾನ್ ಶತಕ ವ್ಯರ್ಥ; ಇಂಗ್ಲೆಂಡ್ ವಿರುದ್ಧ ಪ್ರಚಂಡ ಗೆಲುವು ಸಾಧಿಸಿದ ಆಸೀಸ್ENG vs AUS: ಮಲಾನ್ ಶತಕ ವ್ಯರ್ಥ; ಇಂಗ್ಲೆಂಡ್ ವಿರುದ್ಧ ಪ್ರಚಂಡ ಗೆಲುವು ಸಾಧಿಸಿದ ಆಸೀಸ್

ಇನ್ನು ಭಾರತದ ಮಾಜಿ ಕ್ರಿಕೆಟ್ ಆಟಗಾರರಾದ ಜಹೀರ್ ಖಾನ್, ವೀರೇಂದ್ರ ಸೆಹ್ವಾಗ್ ಮತ್ತು ಆಶಿಶ್ ನೆಹ್ರಾ 2022ರ ಟಿ20 ವಿಶ್ವಕಪ್‌ಗಾಗಿ 'ಬ್ಯಾಟರ್ ಆಫ್ ದಿ ಟೂರ್ನಮೆಂಟ್' ಲೇಬಲ್ ಕುರಿತು ತಮ್ಮ ಅಭಿಪ್ರಾಯಗಳನ್ನು ಕ್ರಿಕ್‌ಬಜ್‌ನ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಈ ಮೂವರಿಗೂ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಆಯ್ಕೆಯ ಪ್ರಮುಖ ಆಯ್ಕೆಗಳಾಗಿದ್ದರೂ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಜಹೀರ್ ಖಾನ್ ಆಯ್ಕೆ ಪ್ರಕಾರ ವಿರಾಟ್ ಕೊಹ್ಲಿ

ಜಹೀರ್ ಖಾನ್ ಆಯ್ಕೆ ಪ್ರಕಾರ ವಿರಾಟ್ ಕೊಹ್ಲಿ

ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಈ ಬಾರಿ ಉತ್ತಮ ವಿಶ್ವಕಪ್ ಹೊಂದಿದ್ದರು. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ನಂತರ ಫಾರ್ಮ್‌ಗೆ ಬಂದರು ಮತ್ತು ಅಲೆಕ್ಸ್ ಹೇಲ್ಸ್ ಕೂಡ ಬ್ಯಾಟ್‌ನಿಂದ ರನ್ ತೆಗೆದುಕೊಂಡರು. ಆದರೆ ನಿಜವಾಗಿಯೂ ಎದ್ದುಕಾಣುವ ಬ್ಯಾಟ್ಸ್‌ಮನ್ ಎಂದರೆ ವಿರಾಟ್ ಕೊಹ್ಲಿ.

ಭಾರತದ ಮಾಜಿ ನಾಯಕ ಟೂರ್ನಿ ಪೂರ್ತಿ ಸ್ಥಿರವಾಗಿ, ಉತ್ತಮ ಸರಾಸರಿ ಮೂಲಕ ಮತ್ತು ಹಲವು ಅಜೇಯ ಆಟಗಳೊಂದಿಗೆ ಮಿಂಚಿದರು. ಅವರು ವಿಶ್ವಕಪ್ ಪಂದ್ಯಾವಳಿಯನ್ನು ಪಾಕಿಸ್ತಾನದ ವಿರುದ್ಧದ ಪಂದ್ಯದಿಂದ ಪ್ರಾರಂಭಿಸಿದ ರೀತಿ ನೋಡಿದರೆ, ಅಂತಿಮ ಪಂದ್ಯದವರೆಗೂ ರನ್ ಗಳಿಸುತ್ತಲೇ ಇದ್ದರು. ಇಡೀ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕಗೆ ಪಾತ್ರರಾದರು. ಹೀಗಾಗಿ ಮಾಜಿ ವೇಗಿ ಜಹೀರ್ ಖಾನ್ ಅವರು ವಿರಾಟ್ ಕೊಹ್ಲಿಯನ್ನು ಟಿ20 ವಿಶ್ವಕಪ್‌ನ ಅತ್ಯುತ್ತಮ ಬ್ಯಾಟರ್ ಎಂದು ಕರೆದಿದ್ದಾರೆ.

ವೀರೇಂದ್ರ ಸೆಹ್ವಾಗ್ ಪ್ರಕಾರ ಕೊಹ್ಲಿ, ಗ್ಲೆನ್ ಫಿಲಿಪ್ಸ್

ವೀರೇಂದ್ರ ಸೆಹ್ವಾಗ್ ಪ್ರಕಾರ ಕೊಹ್ಲಿ, ಗ್ಲೆನ್ ಫಿಲಿಪ್ಸ್

ಭಾರತದ ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಪ್ರಕಾರ, ರನ್ ಮಷಿನ್ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕಾರಣ ಪಂದ್ಯಾವಳಿಯ ಅತ್ಯುತ್ತಮ ಬ್ಯಾಟರ್ ಆಗಿದ್ದಾರೆ. ಅತ್ಯುತ್ತಮ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಫಿಲಿಪ್ಸ್ ಬಾರಿಸಿದ ಶತಕ ನನಗೆ ಉತ್ತಮವೆನಿಸಿದೆ ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಆಶಿಶ್ ನೆಹ್ರಾ ಪ್ರಕಾರ ಸೂರ್ಯಕುಮಾರ್ ಯಾದವ್

ಆಶಿಶ್ ನೆಹ್ರಾ ಪ್ರಕಾರ ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ ಪಂದ್ಯಾವಳಿಯ ಅತ್ಯುತ್ತಮ ಬ್ಯಾಟರ್ ಎಂದು ಹೇಳುತ್ತೇನೆ ಎಂದು ಮಾಜಿ ವೇಗಿ ಆಶಿಶ್ ನೆಹ್ರಾ ತಿಳಿಸಿದ್ದಾರೆ.

ಸೂರ್ಯಕುಮಾರ್ ಕೇವಲ ಭಾರತೀಯ ಎಂಬ ಕಾರಣಕ್ಕೆ ಮಾತ್ರವಲ್ಲ, ಕಳೆದ 1-2 ವರ್ಷಗಳಿಂದ ಅವರು ಆಡಿದ ರೀತಿ, ಅಂತಹ ಸ್ಟ್ರೈಕ್ ರೇಟ್ ಮತ್ತು ಸ್ಥಿರತೆಯಲ್ಲಿ ಆತ ನಂ.1 ಸ್ಥಾನದವರೆಗೂ ಸಾಗಿರುವುದು ಸುಲಭವಲ್ಲ. ಇನ್ನು ಅತ್ಯುತ್ತಮ ಪ್ರದರ್ಶನಕ್ಕೆ ಸಂಬಂಧಿಸಿದಂತೆ, ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ ಅವರ ಶತಕ ಎದ್ದು ಕಾಣುತ್ತದೆ ಎಂದು ಆಶಿಶ್ ನೆಹ್ರಾ ಹೇಳಿದ್ದಾರೆ.

Story first published: Thursday, November 17, 2022, 23:13 [IST]
Other articles published on Nov 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X