ರಾಹುಲ್ ದ್ರಾವಿಡ್ ಕೋಚಿಂಗ್ ಮಾಡಲು ತಂಡ ಪ್ರಕಟ
ನವದೆಹಲಿ, ಜೂ.29: ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ತರಬೇತಿ ನೀಡುವ ಸಮಯ ಬಂದಿದೆ. ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟಿಸಿದ ಬೆನ್ನಲ್ಲೇ ಬಿಸಿಸಿಐ ಆಯ್ಕೆ ಸಮಿತಿ, ಭಾರತ 'ಎ' ತಂಡವನ್ನು ಪ್ರಕಟಿಸಿದೆ. ಚೇತೇಶ್ವರ್ ಪೂಜಾರಾ ಅವರನ್ನು ನಾಯಕರಾಗಿ ಆಯ್ಕೆ ಮಾಡಲಾಗಿದೆ.
ಇತ್ತೀಚೆಗಷ್ಟೇ ಇಂಗ್ಲೆಂಡ್ ಕೌಂಟಿಯಲ್ಲಿ ಆಡಿ ಅನುಭವ ಪಡೆದುಕೊಂಡು ಬಂದಿರುವ ಚೇತೇಶ್ವರ ಪೂಜಾರಾ ನಾಯಕತ್ವದಲ್ಲಿ ಕರ್ನಾಟಕದ ಕೆಎಲ್ ರಾಹುಲ್, ಕರುಣ್ ನಾಯರ್, ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್ ಅವರು ಆಡಲಿದ್ದಾರೆ.[ಟೀಂ ಇಂಡಿಯಾ ಕೋಚ್ ಆಗುವ ಆಕಾಂಕ್ಷೆ ಇಲ್ಲ: ದ್ರಾವಿಡ್]

ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಉತ್ತಮ ಆಟ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ ಅವರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಉಳಿದಂತೆ, ವಿಶ್ರಾಂತಿ ಬಯಸಿದ್ದ ವೇಗಿ ಉಮೇಶ್ ಯಾದವ್ ಅವರಿಗೆ ಭಾರತದಲ್ಲೇ ಕ್ರಿಕೆಟ್ ಆಡುವಂತೆ ಸೂಚಿಸಿ ಎ ತಂಡದ ಬೌಲರ್ ಗಳನ್ನು ಮುನ್ನಡೆಸುವಂತೆ ಹೇಳಲಾಗಿದೆ. [ಜಿಂಬಾಬ್ವೆ ಪ್ರವಾಸಕ್ಕೆ ಅಜಿಂಕ್ಯ ರಹಾನೆ ಕ್ಯಾಪ್ಟನ್]
ತಂಡ ಇಂತಿದೆ: ಚೇತೇಶ್ವರ್ ಪೂಜಾರಾ (ನಾಯಕ), ಕೆಎಲ್ ರಾಹುಲ್, ಅಭಿನವ್ ಮುಕುಂದ್, ಕರುಣ್ ನಾಯರ್, ಶ್ರೇಯರ್ ಅಯ್ಯರ್, ನಮನ್ ಓಜಾ (ವಿಕೆಟ್ ಕೀಪರ್) ವಿಜಯ್ ಶಂಕರ್, ಅಮಿತ್ ಮಿಶ್ರಾ, ಪ್ರಗ್ನಾನ್ ಓಜಾ, ಶಾರ್ದೂಲ್ ಠಾಕೂರ್, ವರೋನ್ ಅರುಣ್, ಅಭಿಮನ್ಯು ಮಿಥುನ್, ಉಮೇಶ್ ಯಾದವ್, ಶ್ರೇಯಸ್ ಗೋಪಾಲ್, ಬಾಬಾ ಅಪರಾಜಿತ್.
ರಾಹುಲ್ ದ್ರಾವಿಡ್ ಅವರಿಗೆ ಭಾರತ 'ಎ' ಕೋಚ್ ಆಗಿ ಇದು ಮೊದಲ ಸರಣಿಯಾಗಿದೆ. ಜು.19ರಿಂದ ಆಸ್ಟ್ರೇಲಿಯಾ ಎ ಹಾಗೂ ದಕ್ಷಿಣ ಆಫ್ರಿಕಾ ಎ ಜೊತೆಗೆ ತ್ರಿಕೋನ ಏಕದಿನ ಸರಣಿ ಪಂದ್ಯಗಳು ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications