2020 ಮುಗಿಯೋದ್ರಲ್ಲಿ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾ ಪರ ಆಡುತ್ತಾನೆ: ಆಕಾಶ್ ಚೋಪ್ರಾ ಭವಿಷ್ಯ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಯ 27ನೇ ಪಂದ್ಯದಲ್ಲಿ ಟೇಬಲ್ ಟಾಪರ್ ಆಗಿದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೋಲಿನ ರುಚಿ ತೋರಿಸಿದ ಮುಂಬೈ ಇಂಡಿಯನ್ಸ್ ಈಗ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಕಳೆದ ಪಂದ್ಯದ ಮುಖಾಮುಖಿಯಲ್ಲಿ ಮುಂಬೈ ವಿಕೆಟ್‌ಗಳಿಂದ ಜಯಗಳಿಸುವ ಮೂಲಕ ಸ್ಪರ್ಧೆಯಲ್ಲಿ ಯಶಸ್ವಿಯಾಯಿತು.
163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈಗೆ ಸೂರ್ಯಕುಮಾರ್ ಯಾದವ್ ಮತ್ತು ಕ್ವಿಂಟನ್ ಡಿ ಕಾಕ್ ತಂಡದ ಬೆನ್ನೆಲುಬಾಗಿ ಹೊರಹೊಮ್ಮಿದರು.
ತಂಡವನ್ನು ಮುನ್ನಡೆಸಲು ಇಬ್ಬರೂ ತಮ್ಮ ಬ್ಯಾಟ್‌ನಿಂದ 53 ರನ್ ಗಳಿಸಿದರು, ಮತ್ತು ಕೊನೆಯಲ್ಲಿ, ಕೃನಾಲ್ ಪಾಂಡ್ಯ 12 ರನ್‌ಗಳನ್ನು ತ್ವರಿತಗತಿಯಲ್ಲಿ ಗಳಿಸಿದರು. ಇದಕ್ಕೂ ಮೊದಲು ದೆಹಲಿ ಪರ ಶಿಖರ್ ಧವನ್ ಅಜೇಯ 69 ರನ್ ಗಳಿಸಿದರು ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರು 42 ರನ್‌ಗಳಿಸಿ ತಂಡವನ್ನು ಸಾಧಾರಣ ಮೊತ್ತದತ್ತ ಮುನ್ನಡೆಸಿದರು.

ಮುಂಬೈ ಗೆಲುವಿಗೆ ಕಾರಣ ಸೂರ್ಯನ ಉದಯ
ದೆಹಲಿ ನೀಡಿದ 169ರನ್ ಗುರಿಯನ್ನ ಮುಂಬೈ ಇಂಡಿಯನ್ಸ್ ಸುಲಭವಾಗಿ ತಲುಪಿತು. ಡಿ ಕಾಕ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಆಟ ಮೆಚ್ಚುಗೆಗೆ ಕಾರಣವಾಯಿತು. ಈ ಕುರಿತು ಮಾಜಿ ಕ್ರಿಕೆಟಿಗ ಮತ್ತು ನಿರೂಪಕ ಆಕಾಶ್ ಚೋಪ್ರಾ ಅವರು ಯಾದವ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಅವರು ಭಾರತದ ತಂಡದ ಭಾಗವಾಗಿರುವುದಾಗಿ ಹೇಳಿದರು.

ಈತ ಭಾರತದ ಪರ ಆಡಬೇಕು ಎಂದ ಆಕಾಶ್ ಚೋಪ್ರಾ!
"ಮುಂಬೈ ಇಂಡಿಯನ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಆಟ ಬದಲಾಯಿಸುವವನು ಎಂದು ನಾನು ಭಾವಿಸುತ್ತೇನೆ. ಕವರ್‌ಗಳ ಮೇಲೆ ಅಥವಾ ಅವರ ಫ್ಲಿಕ್ಸ್ ಅಥವಾ ಕಟ್ ಶಾಟ್‌ಗಳ ಮೇಲೆ ಅವರ ಹೊಡೆತಗಳನ್ನು ನೋಡುತ್ತಿರಲಿ, ಅವರು ಬ್ಯಾಟಿಂಗ್ ಮಾಡುವ ವಿಧಾನ ಅದ್ಭುತ. ರಬಾಡಾ ಅವರ ಬೌಲಿಂಗ್ ಅನ್ನು ಸಿಕ್ಸರ್‌ಗಾಗಿ ಅಟ್ಟಿದ ಪರಿ ಉತ್ತಮವಾಗಿತ್ತು . ಆ ಸಿಕ್ಸ್ ನೋಡಿದ ನಂತರ ನಾನು ಈ ಆಟಗಾರ ಭಾರತಕ್ಕಾಗಿ ಆಡಬೇಕು ಎಂದು ನಾನು ಹೇಳಿದೆ "ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಐಪಿಎಲ್: ಬೆಂಗಳೂರು vs ಕೋಲ್ಕತ್ತಾ, ಟಾಸ್ ರಿಪೋರ್ಟ್, ಪ್ಲೇಯಿಂಗ್ XI

2020ರ ಅಂತ್ಯದೊಳಗೆ ಟೀಮ್ ಇಂಡಿಯಾಗೆ ಆಡ್ತಾನೆಂದು ಭವಿಷ್ಯ
"2020 ರ ಅಂತ್ಯದ ಮೊದಲು ಅವರು ಭಾರತೀಯ ತಂಡದ ಭಾಗವಾಗಲಿದ್ದಾರೆ ಎಂದು ನಾನು ಹೇಳುತ್ತಿದ್ದೇನೆ ಮತ್ತು ಅವರು ಭಾರತೀಯ ತಂಡಕ್ಕೂ ಪಂದ್ಯಗಳನ್ನು ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಇದು ಈ ಆಟಗಾರನಿಗೆ ನನ್ನ ಹೃದಯದಿಂದ ಬರುತ್ತಿರುವ ಧ್ವನಿ, ಮತ್ತು ಆಶಾದಾಯಕವಾಗಿ, ಅದು ಸಂಭವಿಸುತ್ತದೆ ಎಂದು ಭಾವಿಸಿದ್ದೇನೆ "ಎಂದು ಅವರು ಹೇಳಿದರು.

ಕೆಕೆಆರ್ ವಿರುದ್ಧ ಮುಂಬೈನ ಮುಂದಿನ ಸೆಣಸಾಟ
ಮುಂಬೈ ಇಂಡಿಯನ್ಸ್ ತನ್ನ ಮುಂದಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಐಪಿಎಲ್ 13 ಆವೃತ್ತಿಯ 32 ಪಂದ್ಯ ಇದಾಗಿದ್ದು, ಅಬುಧಾಬಿಯ ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications