ಹಿಂದು ಅನ್ನೋ ಕಾರಣಕ್ಕೆ ಪಿಸಿಬಿ ನನ್ನನ್ನು ಮೂಲೆಗುಂಪು ಮಾಡುತ್ತಿದೆ: ಕನೇರಿಯಾ

ಇಸ್ಲಮಾಬಾದ್, ಆಗಸ್ಟ್ 8: ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ವರ್ತನೆ ಬೇರೆ ಆಟಗಾರರ ಜೊತೆ ಚೆನ್ನಾಗಿದೆ, ಆದರೆ ನನ್ನನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಪಾಕ್ ಕ್ರಿಕೆಟಿಗ ದನೀಶ್ ಕನೇರಿಯಾ ಹೇಳಿದ್ದಾರೆ. ಕನೇರಿಯಾ 2012ರಲ್ಲಿ ಸ್ಪಾಟ್ ಫಿಕ್ಸಿಂಗ್‌ಗಾಗಿ ವಿಧಿಸಲಾಗಿರುವ ಆಜೀವ ನಿಷೇಧವನ್ನು ಕಡಿತಗೊಳಿಸುವ ಯತ್ನದಲ್ಲಿದ್ದಾರೆ.
ಪಿಸಿಬಿ ವಿರುದ್ಧ ದನೀಶ್ ಕನೇರಿಯಾ ಹಿಂದಿನಿಂದಲೂ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದೇ ರೀತಿಯ ನಿಷೇಧ ಶಿಕ್ಷೆ ಬೋರ್ಡ್‌ನ ಬೇರೆ ಆಟಗಾರರಿಗೆ ವಿಧಿಸಲಾಗಿದ್ದರೆ ಅವರ ಶಿಕ್ಷೆ ಕಡಿತಗೊಳಿಸಿ ಅವರು ಅಟದಲ್ಲಿ ತೊಡಗಿಕೊಳ್ಳಲು ಪಿಸಿಬಿ ನೆರವಾಗುತ್ತಿತ್ತು ಎಂದು ಈ ಬಾರಿ ಕೂಡ ಕನೇರಿಯಾ ದೂರಿದ್ದಾರೆ.
ಅನಿಲ್ ದಳ್‌ಪತ್ ಬಳಿಕ ಪಾಕಿಸ್ತಾನ ಪರ ಆಡಿದ ಎರಡನೇ ಹಿಂದು ಆಟಗಾರನಾಗಿ ಕನೇರಿಯಾ ಗುರುತಿಸಿಕೊಂಡಿದ್ದರು. ಅಲ್ಲದೆ ಪಾಕ್ ತಂಡದಲ್ಲಿ ಸದ್ಯ ಇರುವ ಒಬ್ಬನೇ ಒಬ್ಬ ಹಿಂದು ಆಟಗಾರ ಕನೇರಿಯಾ. ಇದೇ ಕಾರಣಕ್ಕಾಗಿ ತಂಡದ ಒಬ್ಬ ಆಟಗಾರ ತನ್ನ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ ಎಂದು ಕನೇರಿಯಾ ಈ ಮೊದಲು ಆರೋಪಿಸಿದ್ದರು.
'ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಆಡೋದು ನನ್ನ ಪಾಲಿಗೆ ಹೆಮ್ಮೆಯ ವಿಚಾರವೆ. ಒಬ್ಬ ಹಿಂದು ಆಗಿ ನನ್ನ ದೇಶಕ್ಕಾಗಿ ಆಡೋದು, ಪಾಕಿಸ್ತಾನ ತಂಡ ಪ್ರತಿನಿಧಿಸಿ ಪಂದ್ಯ ಗೆಲ್ಲೋದು ನನ್ನ ಪಾಲಿಗೆ ಸಾಧನೆ ಮತ್ತು ಹೆಮ್ಮೆಯ ವಿಚಾರ,' ಎಂದು ಇಂಡಿಯಾ ಟಿವಿ ಜೊತೆ ಮಾತನಾಡಿದ ಕನೇರಿಯಾ ಹೇಳಿದ್ದಾರೆ.
'ಜನ ನನ್ನನ್ನು ಧರ್ಮದ ಆಧಾರದಲ್ಲಿ ಆರೋಪಿಸುತ್ತಿದ್ದಾರೆ. ನನಗೆ ಸಮಸ್ಯೆಯಿರುವುದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್‌ನೊಂದಿಗೆ ಮತ್ತದರ ಇಬ್ಭಾಗ ನೀತಿಯ ವಿರುದ್ಧ. ಉಳಿದ ಆಟಗಾರರ ಜೊತೆಗೆ ಪಿಸಿಬಿ ವರ್ತನೆ ತುಂಬಾ ಚೆನ್ನಾಗಿದೆ. ಆದರೆ ನನ್ನನ್ನು ಮಾತ್ರ ಕಡೆಗಣಿಸಲಾಗುತ್ತಿದೆ. ನನಗಿದು ಬೇಸರ ತಂದಿದೆ,' ಎಂದು ಕನೇರಿಯಾ ಅಳಲು ತೋರಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications