Pak vs Eng: ಇಂಗ್ಲೆಂಡ್‌ಗೆ ಆಪತ್ಭಾಂದವ ಬೆನ್‌ಸ್ಟೋಕ್ಸ್, ಝೀರೋ ಇಂದ ಹೀರೋ ಆಗಿದ್ದು ಹೇಗೆ?

ಬೆನ್ ಸ್ಟೋಕ್ಸ್ ಮತ್ತೊಮ್ಮೆ ಇಂಗ್ಲೆಂಡ್ ತಂಡದ ಆಪತ್ಭಾಂದವನಾಗಿದ್ದಾರೆ. 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅಜೇಯ 84 ರನ್ ಗಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಟೋಕ್ಸ್ 2022ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 52 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಎರಡನೇ ಟಿ20 ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದ್ದಾರೆ.
"ಈ ರೀತಿಯ ಪಂದ್ಯಾವಳಿಗಳಲ್ಲಿ ನಿಮ್ಮ ದಾಖಲೆಗಳು ಸಹಾಯಕ್ಕೆ ಬರುವುದಿಲ್ಲ. ನಮ್ಮನ್ನು ಸೋಲಿಸಿದ ಕೀರ್ತಿ ಐರ್ಲೆಂಡ್‌ಗೆ ಸಲ್ಲುತ್ತದೆ. ಆದರೆ, ಆ ಸೋಲಿನಿಂದ ನಾವು ಪಾಠ ಕಲಿತೆವು, ಅದು ನಮ್ಮ ಮೇಲೆ ಪರಿಣಾಮ ಬೀರಲು ಬಿಡಲಿಲ್ಲ" ಎಂದು ಬೆನ್‌ಸ್ಟೋಕ್ಸ್ ಪಂದ್ಯದ ಬಳಿಕ ಹೇಳಿದರು.
ಆರು ವರ್ಷಗಳ ಹಿಂದೆ 2016ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇದೇ ಬೆನ್‌ಸ್ಟೋಕ್ಸ್ ಬೌಲಿಂಗ್‌ನಲ್ಲಿ ಕಾರ್ಲೋಸ್ ಬ್ರಾಥ್‌ವೈಟ್ 4 ಸಿಕ್ಸರ್ ಸಿಡಿಡುವ ಮೂಲಕ, ಇಂಗ್ಲೆಂಡ್ ಗೆಲುವನ್ನು ಕಸಿದುಕೊಂಡಿದ್ದರು. ತಮ್ಮ ಬೌಲಿಂಗ್‌ಗಾಗಿ ಬೆನ್ ಸ್ಟೋಕ್ಸ್ ಭಾರಿ ಟೀಕೆಗೆ ಗುರಿಯಾಗಿದ್ದರು. ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ ವೆಸ್ಟ್ ಇಂಡೀಸ್ ಎರಡನೇ ಬಾರಿಗೆ ಬಾರಿಗೆ ಟಿ20 ವಿಶ್ವಕಪ್ ಎತ್ತಿಹಿಡಿದರು.

ಸಾಕಷ್ಟು ಏಳು ಬೀಳು ಕಂಡ ಇಂಗ್ಲೆಂಡ್
2015ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದು ಇಂಗ್ಲೆಂಡ್ ಅವಮಾನ ಅನುಭವಿಸಿತ್ತು. ನಂತರ, 2016ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಫೈನಲ್ ಪಂದ್ಯದಲ್ಲಿ ಅಂತಿಮ ಓವರ್ ನಲ್ಲಿ ಸೋಲುವ ಮೂಲಕ ಮತ್ತೆ ನಿರಾಸೆ ಅನುಭವಿಸಿತು. ಇಯಾನ್ ಮಾರ್ಗನ್ ನೇತೃತ್ವದ ತಂಡಕ್ಕೆ ಇದು ಆಘಾತಕಾರಿ ವಿಚಾರವಾಗಿತ್ತು.
2017 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮವಾಗಿ ಆಡಿದ್ದ ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಮತ್ತೆ ನಿರಾಸೆ ಅನುಭವಿಸಿತು.
ಟಿ20 ವಿಶ್ವಕಪ್ ಗೆದ್ದು, MS ಧೋನಿ ಬಳಿಕ ಈ ವಿಶೇಷ ಸಾಧನೆ ಮಾಡಿದ ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್!

ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲಲು ಸ್ಟೋಕ್ಸ್ ಸಹಾಯ
ಇಂಗ್ಲೆಂಡ್ ಕ್ರಿಕೆಟ್ ಕಂಡು ಹಿಡಿದ ದೇಶವಾಗಿದ್ದರೂ, ಅದರಲ್ಲಿ ಪ್ರಾಬಲ್ಯ ಸಾಧಿಸಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ನಂತರ ಇಂಗ್ಲೆಂಡ್ ಶಕ್ತಿಯುತ ತಂಡವಾಗಿ ಬದಲಾಯಿತು. ಆಕ್ರಮಣಕಾರಿ ಆಟವನ್ನು ಇಂಗ್ಲೆಂಡ್ ಅಳವಡಿಸಿಕೊಂಡಿತು. ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಶಕ್ತಿಯುತ ತಂಡವಾಗಿ ಬದಲಾಯಿತು.
2019 ರಲ್ಲಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತೊಂದು ವಿಶ್ವಕಪ್ ಫೈನಲ್ ಸೋಲುವ ಹಂತದಲ್ಲಿತ್ತು. ಆದರೆ, ಇಂಗ್ಲೆಂಡ್ ತಂಡಕ್ಕೆ ಆಪತ್ಭಾಂದವನಾಗಿದರು, ಅಜೇಯ 84 ರನ್ ಗಳಿಸುವ ಮೂಲಕ ಪಂದ್ಯ ಟೈ ಆಯಿತು. ನಂತರ ಸೂಪರ್ ಓವರ್ ಕೂಡ ಟೈನಲ್ಲಿ ಅಂತ್ಯವಾಯಿತು, ಆದರೆ ಬೌಂಡರಿ ಲೆಕ್ಕಾಚಾರದಿಂದ ಇಂಗ್ಲೆಂಡ್ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಎನಿಸಿಕೊಂಡಿತು.

ಮಹತ್ವದ ಪಂದ್ಯಗಳಲ್ಲಿ ಬೆನ್ ಸ್ಟೋಕ್ಸ್ ಆಟ
ಬೆನ್ ಸ್ಟೋಕ್ಸ್ ಇಂಗ್ಲೆಂಡ್‌ನ ಪ್ರಮುಖ ಆಲ್‌ರೌಂಡರ್ ಇಂಗ್ಲೆಂಡ್ ಸೋಲಿನ ಸುಳಿಯಲ್ಲಿದ್ದಾಗ ತಮ್ಮ ಉತ್ತಮ ಆಟ ಆಡುವ ಮೂಲಕ ಹಲವು ಪಂದ್ಯಗಳನ್ನು ಸೋಲಿನಿಂದ ತಪ್ಪಿಸಿದ್ದಾರೆ. ಟಿ20 ವಿಶ್ವಕಪ್‌ನ ಸೂಪರ್ 12 ಹಂತದ ನಿರ್ಣಾಯಕ ಪಂದ್ಯಲ್ಲಿ ಶ್ರೀಲಂಕಾ ವಿರುದ್ಧ ಬೆನ್ ಸ್ಟೋಕ್ಸ್ ಉತ್ತಮ ಇನ್ನಿಂಗ್ಸ್ ಆಡಿದ್ದರು.
ವಿಶ್ವಕಪ್‌ನಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ಸ್ಟೋಕ್ಸ್, ಮಹತ್ವದ ಪಂದ್ಯದಲ್ಲಿ ತಮ್ಮ ಆಟದ ಮೂಲಕ ತಂಡಕ್ಕೆ ನೆರವಾದರು. ಫೈನಲ್‌ನಲ್ಲಿ ಕೂಡ ತಂಡದ ಮೇಲೆ ಒತ್ತಡ ಇದ್ದಾಗ, ಶಾಂತತೆಯಿಂದ ಕೊನೆಯವರೆಗೂ ಆಡುವ ಮೂಲಕ ಗೆಲುವು ಸಾಧಿಸಲು ಕಾರಣವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications