ಟಿ20 ವಿಶ್ವಕಪ್ ಗೆದ್ದು, MS ಧೋನಿ ಬಳಿಕ ಈ ವಿಶೇಷ ಸಾಧನೆ ಮಾಡಿದ ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್!

ಮೆಲ್ಬರ್ನ್‌ನ ಐತಿಹಾಸಿಕ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಇತಿಹಾಸ ಸೃಷ್ಟಿಸಿದೆ. ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ಚುಟುಕು ಕ್ರಿಕೆಟ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಐಸಿಸಿ ಟಿ20 ವಿಶ್ವಕಪ್‌ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ಬಳಿಕ ಎರಡು ಟಿ20 ವಿಶ್ವಕಪ್‌ಗಳ ಒಡೆಯನಾಗಿರುವ ಇಂಗ್ಲೆಂಡ್ ತಂಡಕ್ಕೆ, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ನಾಯಕ ಜಾಸ್‌ ಬಟ್ಲರ್‌ ನಾಯಕತ್ವ ವಹಿಸಿಕೊಂಡು ವರ್ಷದೊಳಗೆ ಬಹುದೊಡ್ಡ ಗರಿ ಲಭಿಸಿದೆ.

ಜಾಸ್ ಬಟ್ಲರ್‌ ನಾಯಕತ್ವದಲ್ಲಿ ಇಂಗ್ಲೆಂಡ್ ಟಿ20 ವಿಶ್ವಕಪ್‌ ಗೆಲ್ಲುವ ಮೂಲಕ ವಿಶೇಷ ಸಾಧನೆ ಕೂಡ ಮಾಡಿದೆ. ಏಕದಿನ ಹಾಗೂ ಟಿ20 ವಿಶ್ವಕಪ್‌ ಎರಡನ್ನೂ ಏಕಕಾಲದಲ್ಲಿ ಗೆದ್ದಿರುವ ಮೊದಲ ತಂಡವೆಂಬ ವಿಶೇಷ ದಾಖಲೆ ಜೊತೆಗೆ, ಎಂ.ಎಸ್ ಧೋನಿ ಬಳಿಕ ವಿಶ್ವಕಪ್ ಗೆದ್ದಂತಹ ಎರಡನೇ ವಿಕೆಟ್ ಕೀಪರ್ ಆಗಿ ಜಾಸ್ ಬಟ್ಲರ್ ಹೊರಹೊಮ್ಮಿದ್ದಾರೆ.

ಎಂಎಸ್ ಧೋನಿ ಬಳಿಕ ವಿಶ್ವಕಪ್ ಗೆದ್ದ ವಿಕೆಟ್ ಕೀಪರ್ ಕ್ಯಾಪ್ಟನ್

ಎಂಎಸ್ ಧೋನಿ ಬಳಿಕ ವಿಶ್ವಕಪ್ ಗೆದ್ದ ವಿಕೆಟ್ ಕೀಪರ್ ಕ್ಯಾಪ್ಟನ್

ಎಂ.ಎಸ್ ಧೋನಿ 2007ರಲ್ಲಿ ಚೊಚ್ಚಲ ಆವೃತ್ತಿಯ ವಿಶ್ವಕಪ್‌ ಗೆಲ್ಲುವ ಮೂಲಕ ಈ ಸಾಧನೆಯನ್ನು ಮಾಡಿದ್ದರು. ಆ ಬಳಿಕ ಯಾವೊಬ್ಬ ನಾಯಕನು(ವಿಕೆಟ್ ಕೀಪರ್) ಈ ಸಾಧನೆಯನ್ನು ಮಾಡಿರಲಿಲ್ಲ. ಧೋನಿಯ ಬಹುದೊಡ್ಡ ಅಭಿಮಾನಿಯಾಗಿರುವ ಜಾಸ್ ಬಟ್ಲರ್‌, ಮಾಹಿಯಂತೆ ವಿಶೇಷ ದಾಖಲೆಯನ್ನ ತನ್ನ ಹೆಸರಿಗೆ ದಾಖಲಿಸಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ದಾಖಲೆ ಸರಿಗಟ್ಟಿದ ಇಂಗ್ಲೆಂಡ್: 2ನೇ ಬಾರಿಗೆ ಟಿ20 ವಿಶ್ವಕಪ್ ಗೆಲುವು

ನಾಯಕನಾದ ಒಂದೇ ವರ್ಷದಲ್ಲೇ ವಿಶ್ವಕಪ್ ಜಯಿಸಿದ ಜಾಸ್ ಬಟ್ಲರ್

ನಾಯಕನಾದ ಒಂದೇ ವರ್ಷದಲ್ಲೇ ವಿಶ್ವಕಪ್ ಜಯಿಸಿದ ಜಾಸ್ ಬಟ್ಲರ್

2019ರ ಏಕದಿನ ವಿಶ್ವಕಪ್ ಗೆಲುವಿನ ನಾಯಕ ಇಯಾನ್ ಮಾರ್ಗನ್ ಕ್ರಿಕೆಟ್‌ನ ಮೂರು ಮಾದರಿಗೆ ನಿವೃತ್ತಿ ಘೋಷಿಸಿದ ಬಳಿಕ ನಾಯಕನಾಗಿ ಆಯ್ಕೆಗೊಂಡ ಜಾಸ್ ಬಟ್ಲರ್ ಆಯ್ಕೆಗಾರರ ತೀರ್ಪಿಗೆ ತಕ್ಕ ಗೌರವ ಸಲ್ಲಿಸಿದ್ದಾರೆ.

ಕಳೆದ ಐಪಿಎಲ್ 15ನೇ ಸೀಸನ್‌ನಲ್ಲಿ ಜಾಸ್ ಬಟ್ಲರ್ ಬರೋಬ್ಬರಿ 800ಕ್ಕೂ ಹೆಚ್ಚು ರನ್ ಕಲೆಹಾಕುವ ಮೂಲಕ ಅಮೋಘ ದಾಖಲೆ ಮಾಡಿದ್ದರು. ಒಟ್ಟಾರೆ 17 ಪಂದ್ಯಗಳಿಂದ ಬಟ್ಟರ್ 863 ರನ್ ಕಲೆಹಾಕುವ ಮೂಲಕ ಆರೆಂಜ್ ಕ್ಯಾಪ್ ಗೆದ್ದರು. ಬಟ್ಲರ್ ಇನ್ನಿಂಗ್ಸ್‌ನಲ್ಲಿ 4 ಶತಕ ಹಾಗೂ 4 ಅರ್ಧಶತಕ ದಾಖಲಿಸಿದ್ದರು. ವಿರಾಟ್ ಕೊಹ್ಲಿ ಬಳಿಕ ಐಪಿಎಲ್‌ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಗಿ ಹೊರಹೊಮ್ಮಿದ ಕೀರ್ತಿಗೆ ಪಾತ್ರರಾದರು.

ಮುಂದಿನ T20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಈ ಮುಖಗಳನ್ನ ನೋಡಲು ಬಯಸುವುದಿಲ್ಲ: ವೀರೇಂದ್ರ ಸೆಹ್ವಾಗ್

ಐರ್ಲೆಂಡ್‌ ವಿರುದ್ಧ ಸೋತು ಫೀನಿಕ್ಸ್‌ನಂತೆ ಎದ್ದು ಬಂದ ಇಂಗ್ಲೆಂಡ್

ಐರ್ಲೆಂಡ್‌ ವಿರುದ್ಧ ಸೋತು ಫೀನಿಕ್ಸ್‌ನಂತೆ ಎದ್ದು ಬಂದ ಇಂಗ್ಲೆಂಡ್

ಜಾಸ್ ಬಟ್ಲರ್‌ ಈ ಅಮೋಘ ಫಾರ್ಮ್ ಪರಿಗಣಿಸಿ ಇಂಗ್ಲೆಂಡ್‌ ಟಿ20 ವಿಶ್ವಕಪ್ ಗೆಲುವಿನ ಫೇವರಿಟ್ ತಂಡವಾಗಿತ್ತು. ಆದ್ರೆ ಸೂಪರ್ 12 ಹಂತದಲ್ಲಿ ಇಂಗ್ಲೆಂಡ್ ಯಾರೂ ಊಹಿಸದ ರೀತಿಯಲ್ಲಿ ಐರ್ಲೆಂಡ್ ವಿರುದ್ಧ ಸೋಲನ್ನ ಅನುಭವಿಸುವ ಮೂಲಕ ಭಾರೀ ಮುಖಭಂಗ ಎದುರಿಸಿತು. ಆದ್ರೆ ಜಾಸ್ ಬಟ್ಲರ್ ಪಡೆ ಅದ್ಭುತವಾಗಿ ಕಂಬ್ಯಾಕ್ ಮಾಡಿ ಸೆಮಿಫೈನಲ್ ಪ್ರವೇಶಿಸಿತು.

ಸೆಮಿಫೈನಲ್‌ನಲ್ಲಿ ಭಾರತ ನೀಡಿದ್ದ 168 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್, ಒಂದೂ ವಿಕೆಟ್ ಕಳೆದುಕೊಳ್ಳದೆ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು. ಅಲ್ಲದೆ ಈಗ ಚಾಂಪಿಯನ್ ಆಗಿ ಕೂಡ ಹೊರಹೊಮ್ಮಿರುವುದು ಇತಿಹಾಸ.

For Quick Alerts
ALLOW NOTIFICATIONS
For Daily Alerts
Story first published: Sunday, November 13, 2022, 20:01 [IST]
Other articles published on Nov 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X