For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ- ಧೋನಿ ಬಗ್ಗೆ ರವಿ ಶಾಸ್ತ್ರಿ ಹೇಳಿದ್ದೇನು?

By Mahesh

ನವದೆಹಲಿ, ಜು.1: ಟೀಂ ಇಂಡಿಯಾ ನಾಯಕರುಗಳಾದ ಧೋನಿ ಹಾಗೂ ವಿರಾಟ್ ಕೊಹ್ಲಿ ನಡುವೆ ವೈಮನಸ್ಯವಿದೆ. ಒಬ್ಬರ ತಲೆ ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಎಂಬ ಸುದ್ದಿಯನ್ನು ತಳ್ಳಿ ಹಾಕಿರುವ ರವಿ ಶಾಸ್ತ್ರಿಗಳು bull****! ಎಂದಿದ್ದಾರೆ.

ಧೋನಿ ಹಾಗೂ ಕೊಹ್ಲಿ ಬಗ್ಗೆ ಬಂದಿರುವ ಸುದ್ದಿಗಳು ಗಾಳಿ ಸುದ್ದಿಗಳಷ್ಟೇ "Biggest load of bull**** ಎಂದಿರುವ ಶಾಸ್ತ್ರಿಗಳು ಇಂಥ ಸುದ್ದಿ ಹಬ್ಬಿಸುವವರ ವಿರುದ್ಧ ಕಿಡಿಕಾರಿದ್ದಾರೆ. ಟೀಂ ಇಂಡಿಯಾದಲ್ಲಿ ಬೇರೆ ಬೇರೆ ವ್ಯಕ್ತಿತ್ವವುಳ್ಳ ವಿಭಿನ್ನ ಅಭಿರುಚಿಯ ಆಟಗಾರರಿರಬಹುದು ಆದರೆ, ಪರಸ್ಪರ ಗೌರವ ನೀಡದಿರುವಷ್ಟು ಕೀಳುಮಟ್ಟಕ್ಕೆ ಇಳಿದಿಲ್ಲ. [ಕೊಹ್ಲಿ ಕಡೆಗಣನೆ ರಹಸ್ಯ ಬಯಲು]

'Biggest load of bull**** I have been hearing', says Ravi Shastri

ಟೀಂ ಇಂಡಿಯಾ ಬಗ್ಗೆ ಅಪಪ್ರಚಾರ ಮಾಡುವವರು ಸ್ವಲ್ಪ ಯೋಚಿಸಲಿ. ಇಬ್ಬರ ನಡುವೆ ವೈಮನಸ್ಯ ಇದ್ದರೆ ಕಳೆದ ವರ್ಷ ಒಟ್ಟಿಗೆ ಪಂದ್ಯವಾಡಲು ಸಾಧ್ಯವಾಗುತ್ತಿತ್ತೆ. ಫಲಿತಾಂಶಗಳು ಚೆನ್ನಾಗಿ ಬರಲು ಸಾಧ್ಯವಿತ್ತೇ? ಶೇ 70ರಷ್ಟು ಪಂದ್ಯಗಳನ್ನು ಗೆದ್ದಿದ್ದೇವೆ.["ಟೀಂ ಇಂಡಿಯಾ ನಾಯಕ ಕೋತಿ ಥರಾ ಆಡ್ಬಾರದು!"]

ಏಕದಿನ ಕ್ರಿಕೆಟ್ ನಲ್ಲಿ ಎಂಎಸ್ ಧೋನಿ ದಿಗ್ಗಜ, ಆತ ಸ್ವಾರ್ಥ ಸಾಧನೆ ಮಾಡಲು ಕಣಕ್ಕಿಳಿಯುವುದಿಲ್ಲ, ಹಾಗಿದ್ದರೆ ಟೀಂ ಇಂಡಿಯಾ ಮೂರು ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ. [ಇಂಡಿಯನ್ ಕ್ರಿಕೆಟರ್ಸ್ ಮಾನ ಹರಾಜು]

ಕೊಹ್ಲಿ ಕೆಣಕಬೇಡಿ: ಕೊಹ್ಲಿಗಿನ್ನೂ 26ರ ಹರೆಯ ಆತನ ಪಾಡಿಗೆ ಬಿಟ್ಟುಬಿಡಿ, ಸುಮ್ಮನೆ ಕೆಣಕಬೇಡಿ. ಆತನ ಸಾಧನೆ ಬಗ್ಗೆ ಗೌರವಿಸಿ, ಕಾಲಾವಕಾಶ ಕೊಡಿ, ಟೆಸ್ಟ್ ನಾಯಕನಾಗಿ ಪ್ರವರ್ಧಮಾನಕ್ಕೆ ಬರಲು ಇನ್ನೂ ಎರಡು ವರ್ಷವಾದರೂ ಬೇಕು. ಒತ್ತಡ ಹೇರಿ ಆತನ ವೃತ್ತಿ ಬದುಕು ಹಾಳು ಮಾಡಬೇಡಿ ಎಂದು ಶಾಸ್ತ್ರಿ ಕೋರಿದ್ದಾರೆ. ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ನೀಡಿರುವ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ ಓದಿ (ಪಿಟಿಐ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+