For Quick Alerts
ALLOW NOTIFICATIONS  
For Daily Alerts
 

ಅನೇಕ ವಿಶ್ವಕಪ್ ಗೆದ್ದರೂ, ನಮ್ಮ ಬದುಕು ಮಾತ್ರ ಸುಧಾರಿಸಿಲ್ಲ; ಭಾರತ ಕ್ರಿಕೆಟ್ ತಂಡದ ನಾಯಕ

ಇಂಟರ್‌ನ್ಯಾಷನಲ್ ಬ್ಲೈಂಡ್ ಸ್ಪೋರ್ಟ್ಸ್ ಫೆಡರೇಶನ್ (ಐಬಿಎಸ್‌ಎ) ವರ್ಲ್ಡ್ ಗೇಮ್ಸ್ 2023ರ ಪಂದ್ಯಾವಳಿಯು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಆಗಸ್ಟ್ 18ರಿಂದ 27ರವರೆಗೆ ನಡೆಯಲಿದೆ.

ಇದೇ ವೇಳೆ ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ ಅಜಯ್ ಕುಮಾರ್ ರೆಡ್ಡಿ ಮಾತನಾಡಿ, ಹಲವು ಭಾರತಕ್ಕೆ ಹಲವು ವಿಶ್ವಕಪ್‌ಗಳನ್ನು ಗೆದ್ದಿದ್ದರೂ, ನಮ್ಮ ಉತ್ತಮ ಜೀವನ ನಡೆಸಲು ನಾವು ಹಣಕ್ಕಾಗಿ ಹೆಣಗಾಡುತ್ತಿದ್ದೇವೆ ಎಂದು ನೋವು ತೋಡಿಕೊಂಡರು.

2023ರ ವರ್ಲ್ಡ್ ಗೇಮ್ಸ್‌ನಲ್ಲಿ ಆರ್ಚರಿ, ಚೆಸ್, ಕ್ರಿಕೆಟ್, ಬ್ಲೈಂಡ್ ಫುಟ್‌ಬಾಲ್, ಕಡಿಮೆ ದೃಷ್ಟಿಯ ಫುಟ್‌ಬಾಲ್, ಮಹಿಳಾ ಫುಟ್‌ಬಾಲ್, ಗೋಲ್‌ಬಾಲ್ (ಪುರುಷ ಮತ್ತು ಮಹಿಳೆ), ಜೂಡೋ, ಪವರ್‌ಲಿಫ್ಟಿಂಗ್, ಶೋಡೌನ್, ಟೆನ್ ಪಿನ್ ಬೌಲಿಂಗ್ ಮತ್ತು ಟೆನಿಸ್ ಕ್ರೀಡೆಗಳು ನಡೆಯಲಿವೆ.

blind-cricket-team-captain

ವರ್ಲ್ಡ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲಲು ಪ್ರಯತ್ನಿಸುತ್ತೇವೆ ಮತ್ತು ಭಾರತವನ್ನು ಹೆಮ್ಮೆ ಪಡುವಂತೆ ಮಾಡುತ್ತೇವೆ. ಆದರೆ ಕ್ರೀಡೆಗಳನ್ನು ಆಡಲು ಆರ್ಥಿಕ ಬೆಂಬಲ ಬೇಕು, ಇಷ್ಟು ವಿಶ್ವಕಪ್ ಗೆದ್ದರೂ ನಾವು ಹಣಕಾಸಿನ ತೊಂದರೆಯಲ್ಲಿದ್ದೇವೆ. ಸೌಲಭ್ಯಗಳನ್ನು ಸುಧಾರಿಸಲು ನಮಗೆ ಹಣದ ಅಗತ್ಯವಿದೆ ಎಂದು ಅಜಯ್ ಕುಮಾರ್ ರೆಡ್ಡಿ ಎಎನ್‌ಐಗೆ ತಿಳಿಸಿದರು.

"ಭಾರತ ಅಂಧರ ಕ್ರಿಕೆಟ್ ತಂಡವು ಹಲವು ವಿಶ್ವಕಪ್‌ಗಳನ್ನು ಗೆದ್ದಿದೆ. ಆದರೆ, ಇನ್ನೂ ನಾವು ಹಣಕಾಸಿನ ಬೆಂಬಲಕ್ಕಾಗಿ ಹೋರಾಡುತ್ತಿದ್ದೇವೆ. ನಾವು ಇಂಡಸ್‌ಇಂಡ್ ಬ್ಯಾಂಕ್‌ನೊಂದಿಗೆ ಕೆಲವು ವರ್ಷಗಳವರೆಗೆ ಒಪ್ಪಂದವನ್ನು ಹೊಂದಿದ್ದೇವೆ. ಆದರೆ ಒಪ್ಪಂದವು ಕೊನೆಗೊಂಡ ನಂತರ ಮುಂದೆ ಏನು?," ಎನ್ನುವ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡರು.

ಕಳೆದ 10 ವರ್ಷಗಳಿಂದ ನನ್ನ ತಂಡ ತುಂಬಾ ಚೆನ್ನಾಗಿ ಆಡುತ್ತಿದೆ. ಇತ್ತೀಚೆಗೆ ಸೇರ್ಪಡೆಗೊಂಡ ತಂಡದ ಎಲ್ಲಾ ಹೊಸ ಸದಸ್ಯರಿಗೆ ಹಿರಿಯರು ಬೆಂಬಲ ನೀಡುತ್ತಿದ್ದಾರೆ. ತಂಡದಲ್ಲಿ ಸಕಾರಾತ್ಮಕ ವಾತಾವರಣವಿದೆ ಎಂದು ಅಜಯ್ ಕುಮಾರ್ ರೆಡ್ಡಿ ಹೇಳಿದರು.

"ಒಮ್ಮೆ ಬಿಸಿಸಿಐ ಡಿಸಿಎ ಸಮಿತಿಯನ್ನು ರಚಿಸಿದ್ದು, ಅದು ಉತ್ತಮ ಉಪಕ್ರಮವಾಗಿತ್ತು. ನಾವು ಬಿಸಿಸಿಐನಿಂದ ಆರ್ಥಿಕ ಬೆಂಬಲವನ್ನು ಪಡೆದುಕೊಂಡಿದ್ದೇವೆ," ಎಂದು ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ ಅಜಯ್ ಕುಮಾರ್ ರೆಡ್ಡಿ ತಿಳಿಸಿದರು.

ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಗುರುವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ಮುಂಬರುವ ಇಂಟರ್‌ನ್ಯಾಷನಲ್ ಬ್ಲೈಂಡ್ ಸ್ಪೋರ್ಟ್ಸ್ ಫೆಡರೇಶನ್(ಐಬಿಎಸ್‌ಎ) ವಿಶ್ವ ಕ್ರೀಡಾಕೂಟ 2023ಕ್ಕೆ ಸಜ್ಜಾಗುತ್ತಿರುವ ಪುರುಷ ಮತ್ತು ಮಹಿಳಾ ಭಾರತೀಯ ಅಂಧರ ಕ್ರಿಕೆಟ್ ತಂಡಗಳಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ.

ದೇಶವು ಹೆಮ್ಮೆ ಪಡುವಂತೆ ಮಾಡಲು ಅಂಧರ ತಂಡಗಳು 'ಮಹತ್ವದ ಪ್ರಯಾಣವನ್ನು ಪ್ರಾರಂಭಿಸಿದಾಗ' ಎಲ್ಲರೂ ಒಟ್ಟಾಗಿ ಬಂದು ಭಾರತೀಯ ಅಂಧರ ಕ್ರಿಕೆಟ್ ತಂಡಗಳನ್ನು ಬೆಂಬಲಿಸಬೇಕೆಂದು ಆಕಾಶ್ ಚೋಪ್ರಾ ಕರೆ ನೀಡಿದರು.

2007ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಮ್ಯಾನೇಜರ್ ಸುನಿಲ್ ದೇವ್ ನಿಧನ

"ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ವರ್ಲ್ಡ್ ಗೇಮ್ಸ್ 2023ರಲ್ಲಿ ಆಡಲು ಸಜ್ಜಾಗುತ್ತಿರುವ ಭಾರತ ಪುರುಷ ಮತ್ತು ಮಹಿಳಾ ಅಂಧರ ಕ್ರಿಕೆಟ್ ತಂಡಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಮಹತ್ವದ ಪ್ರಯಾಣವನ್ನು ಪ್ರಾರಂಭಿಸುತ್ತಿರುವ ನಮ್ಮ ಭಾರತೀಯ ತಂಡಕ್ಕೆ ಅಚಲವಾದ ಬೆಂಬಲ ಮತ್ತು ಪ್ರೋತ್ಸಾಹ ನೀಡೋಣ," ಎಂದು ಆಕಾಶ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.

ಈ ವರ್ಷದ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ವರ್ಲ್ಡ್ ಗೇಮ್ಸ್ 2023ರ ಪಂದ್ಯಾವಳಿಗಾಗಿ ಅಂಧರ ತಂಡಗಳನ್ನು ಆಯ್ಕೆ ಮಾಡಲಾಗಿದೆ.

ಭಾರತೀಯ ಪುರುಷ ತಂಡವು ಆಗಸ್ಟ್ 14ರಂದು ವಿಶ್ವ ಕ್ರೀಡಾಕೂಟಕ್ಕಾಗಿ ಲಂಡನ್‌ಗೆ ಆಗಮಿಸಲಿದ್ದಾರೆ ಮತ್ತು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಒಂದು ದಿನದ ನಂತರ ಅಭ್ಯಾಸ ಪಂದ್ಯವನ್ನು ಆಡುತ್ತಾರೆ.

ಮೂರು ದಿನಗಳ ನಂತರ ಆಗಸ್ಟ್ 17ರಂದು ಭಾರತ ಮಹಿಳಾ ತಂಡ ಬರ್ಮಿಂಗ್‌ಹ್ಯಾಮ್‌ಗೆ ಆಗಮಿಸಲಿದೆ. ಎರಡೂ ತಂಡಗಳು ತಮ್ಮ ಮೊದಲ ಪಂದ್ಯವನ್ನು ಆಗಸ್ಟ್ 20ರಂದು ಆಡಲಿವೆ.

ಭಾರತ ಪುರುಷ ಅಂಧರ ಕ್ರಿಕೆಟ್ ತಂಡವು ಪಾಕಿಸ್ತಾನದ ವಿರುದ್ಧ ತಮ್ಮ ಅಭಿಯಾನ ಆರಂಭಿಸಿದರೆ, ಮಹಿಳಾ ತಂಡವು ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

Story first published: Friday, August 4, 2023, 14:11 [IST]
Other articles published on Aug 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+