ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs AUS: ಭಾರತ ನ್ಯಾಯಯುತ ಪಿಚ್ ಸಿದ್ಧಪಡಿಸಿದರೆ, ಆಸೀಸ್ ಸರಣಿ ಗೆಲ್ಲುತ್ತದೆ; ಇಯಾನ್ ಹೀಲಿ

Border-Gavaskar Trophy: If India Prepared Fair Wickets, Australia Will Win Test Series Says Ian Healy

ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆತಿಥೇಯ ಭಾರತ ತಂಡವು ಅಗ್ರ ಶ್ರೇಣಿಯ ಕ್ರಿಕೆಟ್ ಆಡುತ್ತಿದ್ದರೂ, ಆಸ್ಟ್ರೇಲಿಯ ತಂಡವು 'ನ್ಯಾಯಯುತ ಪಿಚ್'ಗಳಲ್ಲಿ ಗೆಲ್ಲುತ್ತದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್ ಕೀಪರ್ ಇಯಾನ್ ಹೀಲಿ ತಿಳಿಸಿದ್ದಾರೆ.

ಫೆಬ್ರವರಿ 9ರಂದು ನಾಗ್ಪುರದಲ್ಲಿ ಪ್ರಾರಂಭವಾಗುವ ನಾಲ್ಕು ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಉಭಯ ತಂಡಗಳು ಸೆಣಸಾಡಲಿವೆ. "ಆತಿಥೇಯ ತಂಡ ನ್ಯಾಯಯುತ ಪಿಚ್‌ಗಳನ್ನು ಸಿದ್ಧಪಡಿಸಿದರೆ, ಉತ್ತಮ ಬ್ಯಾಟಿಂಗ್ ಪಿಚ್ ಆಗಿದ್ದರೆ, ಪಂದ್ಯವು ಕೊನೆಯ ದಿನದವರೆಗೂ ಸಾಗುತ್ತದೆ. ಆಗ ಆಸ್ಟ್ರೇಲಿಯಾ ಪಂದ್ಯಗಳನ್ನು ಗೆಲ್ಲುತ್ತದೆ," ಎಂದು ಇಯಾನ್ ಹೀಲಿ 'SENQ ಬ್ರೇಕ್‌ಫಾಸ್ಟ್'ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

IND vs NZ: ತನ್ನ ದಾಖಲೆ ಮುರಿದ ಶುಭ್ಮನ್ ಗಿಲ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?IND vs NZ: ತನ್ನ ದಾಖಲೆ ಮುರಿದ ಶುಭ್ಮನ್ ಗಿಲ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?

"ಮೊದಲ ಟೆಸ್ಟ್‌ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯಾನ್ ಬಗ್ಗೆ ನಾನು ಚಿಂತಿತನಾಗಿದ್ದೇನೆ. ಕಳೆದ ಸರಣಿಯಲ್ಲಿ ಅನ್ಯಾಯದ ಪಿಚ್ ತಯಾರಿಸಲಾಗಿತ್ತು. ಚೆಂಡುಗಳು ಪುಟಿಯುತ್ತಿದ್ದವು ಮತ್ತು ಮೊದಲ ದಿನದಿಂದ ಪಂದ್ಯ ಕುತೂಹಲ ಕಳೆದುಕೊಳ್ಳುತ್ತಿತ್ತು. ಭಾರತವು ಅಂತಹ ಪರಿಸ್ಥಿತಿಗಳನ್ನು ನಮಗಿಂತ ಉತ್ತಮವಾಗಿ ಆಡುತ್ತದೆ ಎಂದು," ಎಂದು ಇಯಾನ್ ಹೀಲಿ ಹೇಳಿದರು.

Border-Gavaskar Trophy: If India Prepared Fair Wickets, Australia Will Win Test Series Says Ian Healy

ಆಸ್ಟ್ರೇಲಿಯಾ ತಂಡವು ಬರೋಬ್ಬರಿ ಒಂದೂವರೆ ತಿಂಗಳ ಅವಧಿಯ ಟೆಸ್ಟ್ ಸರಣಿಯಲ್ಲಿ ಭಾರತದಲ್ಲಿ ಒಂದೇ ಒಂದು ಅಭ್ಯಾಸ ಪಂದ್ಯವನ್ನು ಆಡದಿರಲು ನಿರ್ಧರಿಸಿದೆ. ಪ್ರಾಥಮಿಕವಾಗಿ ಆತಿಥೇಯರು ಅಭ್ಯಾಸ ಪಂದ್ಯಗಳಿಗೆ ಹಸಿರು ಟರ್ಫ್‌ಗಳನ್ನು ಮತ್ತು ನೈಜ ಪಂದ್ಯಗಳಿಗೆ ಸ್ಪಿನ್ನಿಂಗ್ ಟ್ರ್ಯಾಕ್‌ಗಳನ್ನು ಒದಗಿಸುತ್ತಾರೆ ಎಂದು ಇಯಾನ್ ಹೀಲಿ ಆರೋಪಿಸಿದ್ದಾರೆ.

ಕಡಿಮೆ ಅನುಭವ ಹೊಂದಿರುವ ಆಸ್ಟ್ರೇಲಿಯಾದ ಆಟಗಾರರಿಗೆ ಒತ್ತಡದಲ್ಲಿ ಇರದಂತೆ ಮತ್ತು ಯಾವುದೇ ಫೀಲ್ಡಿಂಗ್ ಲೋಪಗಳನ್ನು ಮಾಡಬಾರದು. ಆತಿಥೇಯ ಆಟಗಾರರ ಒತ್ತಡದಿಂದ ಪ್ರವಾಸಿ ತಂಡದ ಆಟಗಾರರು ಬಹಳ ಜಾಗೃತರಾಗಿರಬೇಕೆಂದು ಇಯಾನ್ ಹೀಲಿ ಸಲಹೆ ನೀಡಿದರು.

IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್

"ಭಾರತದ ವಿರುದ್ಧ ಆಡಬೇಕಾದರೆ ಜಾಗೃತವಾಗಿರಬೇಕು. ಅವರ ವಿರುದ್ಧ ನಿಮ್ಮ ನಿಜವಾದ ತಂತ್ರವನ್ನು ಪ್ರಯೋಗಿಸಿ ಮತ್ತು ಪಂದ್ಯದಲ್ಲಿ ಕ್ಯಾಚ್‌ಗಳನ್ನು ಬಿಡಬೇಡಿ, ಭಾರತದಲ್ಲಿ ಫೀಲ್ಡಿಂಗ್ ಕಷ್ಟವಾಗಬಹುದು," ಎಂದು ಇಯಾನ್ ಹೀಲಿ ತಿಳಿಸಿದ್ದಾರೆ.

Border-Gavaskar Trophy: If India Prepared Fair Wickets, Australia Will Win Test Series Says Ian Healy

"ಭಾರತದಲ್ಲಿ ಹತ್ತು ವಿಕೆಟ್‌ಗಳನ್ನು ಪಡೆಯಲು, ನಿಮಗೆ ಕೇವಲ ಹತ್ತು ಅವಕಾಶಗಳು ಸಿಗುತ್ತವೆ. ಆದರೆ ಆಸ್ಟ್ರೇಲಿಯಾದಲ್ಲಿ ಬೌನ್ಸ್ ಮತ್ತು ವೇಗದೊಂದಿಗೆ ನೀವು 13 ಅವಕಾಶಗಳನ್ನು ಪಡೆದುಕೊಳ್ಳಬಹುದು. ಆದರೆ ಭಾರತದಲ್ಲಿ ವಿಕೆಟ್‌ಗಳು ಅಷ್ಟು ಸುಲಭವಾಗಿ ಬರುವುದಿಲ್ಲ," ಎಂದು ಮಾಜಿ ವಿಕೆಟ್ ಕೀಪರ್ ಹೇಳಿದ್ದಾರೆ.

"ಆತಿಥೇಯ ತಂಡವೂ ಒತ್ತಡದಲ್ಲಿ ಆಡಬೇಕು ಮತ್ತು ನ್ಯಾಯಯುತ ಪಿಚ್‌ಗಳನ್ನು ತಯಾರಿಸಬೇಕು ಎಂದು ನಾನು ಭಾವಿಸುತ್ತೇನೆ," ಎಂದಿದ್ದಾರೆ.

2004ರಿಂದ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲದ ಆಸ್ಟ್ರೇಲಿಯಾ ತಂಡವು ನಾಗ್ಪುರದಲ್ಲಿ ಫೆಬ್ರವರಿ 9-13, ನವದೆಹಲಿಯಲ್ಲಿ ಫೆಬ್ರವರಿ 17-21, ಧರ್ಮಶಾಲಾದಲ್ಲಿ ಮಾರ್ಚ್ 1-5 ಮತ್ತು ಅಹಮದಾಬಾದ್‌ನಲ್ಲಿ ಮಾರ್ಚ್ 9-13 ರವರೆಗೆ ನಾಲ್ಕು ಪಂದ್ಯಗಳನ್ನು ಆಡಲಿದೆ.

Story first published: Thursday, February 2, 2023, 16:58 [IST]
Other articles published on Feb 2, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X