Shoaib Malik: 2ನೇ ಮದುವೆಯಾದ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ ಶೋಯೆಬ್ ಮಲಿಕ್
ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್‌ರೌಂಡರ್ ಶೋಯೆಬ್ ಮಲಿಕ್ ಅವರು ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರೊಂದಿಗೆ ವಿಚ್ಛೇದನದ ವದಂತಿಗಳ ಮಧ್ಯೆಯೇ, ಪಾಕಿಸ್ತಾನ ನಟಿ ಸನಾ ಜಾವೇದ್ ಅವರೊಂದಿಗೆ ಎರಡನೇ ವಿವಾಹವಾಗಿದ್ದಾರೆ.
ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಎರಡನೇ ವಿವಾಹ ನಡೆಯುವ ಮುನ್ನವೇ ವಿಚ್ಛೇದನದ ಕುರಿತು ಸಾಕಷ್ಟು ವದಂತಿಗಳು ಹಬ್ಬಿದ್ದವು.

ಮೈದಾನದ ಹೊರಗಿನ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳನ್ನು ಹುಟ್ಟುಹಾಕಿದ್ದರೆ, ಶೋಯೆಬ್ ಮಲಿಕ್ ಅವರು ಕ್ರಿಕೆಟ್ ಮೈದಾನದಲ್ಲಿ ಕೂಡ ಬೃಹತ್ ದಾಖಲೆಯನ್ನು ನಿರ್ಮಿಸಿದ್ದಾರೆ.
ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್ ಟಿ20 ಕ್ರಿಕೆಟ್‌ನಲ್ಲಿ 13,000 ರನ್ ಗಳಿಸಿದ ಏಷ್ಯಾದ ಮೊದಲ ಆಟಗಾರ ಮತ್ತು ವಿಶ್ವದ ಎರಡನೇ ಆಟಗಾರ ಎನಿಸಿಕೊಂಡರು.

ಶೋಯೆಬ್ ಮಲಿಕ್ 2024ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ಪಂದ್ಯದಲ್ಲಿ ರಂಗ್‌ಪುರ್ ರೈಡರ್ಸ್ ವಿರುದ್ಧ ಫಾರ್ಚೂನ್ ಬಾರಿಶಾಲ್ ನಡುವಿನ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟರ್ ಕ್ರಿಸ್ ಗೇಲ್ ಅವರ ಈ ಸಾಧನೆ ಮಾಡಿದ ಮೊದಲಿಗರು.
ಶೋಯೆಬ್ ಮಲಿಕ್ ಈಗಾಗಲೇ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ ಟಿ20 ಸ್ವರೂಪದಲ್ಲಿ ಆಡುವುದನ್ನು ಮುಂದುವರೆಸಿದ್ದಾರೆ ಮತ್ತು ಮುಂಬರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಯ್ಕೆಗೆ ಲಭ್ಯವಿರುತ್ತಾರೆ.
ಇನ್ನು ಫಾರ್ಚೂನ್ ಬಾರಿಶಾಲ್ ತಂಡದ ಗೆಲುವಿನ ಹಾದಿಯಲ್ಲಿ ಸಾಗುತ್ತಿದ್ದಂತೆ ಶೋಯೆಬ್ ಮಲಿಕ್ ಕೂಡ ಒಂದು ವಿಕೆಟ್ ಪಡೆದರು.
ಕರಾಚಿಯಲ್ಲಿ ಪಾಕಿಸ್ತಾನ ದೇಶದ ಜನಪ್ರಿಯ ನಟಿ ಸನಾ ಜಾವೇದ್ ಅವರನ್ನು ಎರಡನೇ ಬಾರಿಗೆ ಮದುವೆಯಾಗಿರುವುದಾಗಿ ಶೋಯೆಬ್ ಮಲಿಕ್ ಶನಿವಾರ ಘೋಷಿಸಿದರು. ಅಂತಿಮವಾಗಿ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರೊಂದಿಗಿನ ವಿಚ್ಛೇದನ ಬಗ್ಗೆ ಊಹಾಪೋಹಗಳಿಗೆ ಅಂತ್ಯ ಹಾಡಿದರು.
"ಮತ್ತು ನಾವು ನಿಮ್ಮನ್ನು ಜೋಡಿಯಾಗಿ ರಚಿಸಿದ್ದೇವೆ" ಎಂಬ ವಾಕ್ಯದೊಂದಿಗೆ ಪಾಕಿಸ್ತಾನ ಕ್ರಿಕೆಟಿಗನು ತನ್ನ ಹೊಸ ಪತ್ನಿಯೊಂದಿಗೆ ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ತನ್ನ ಮದುವೆಯ ಫೋಟೋವನ್ನು ಬಿಡುಗಡೆ ಮಾಡಿದರು.
2022ರಿಂದ 41 ವರ್ಷದ ಶೋಯೆಬ್ ಮತ್ತು ಸಾನಿಯಾ ಮಿರ್ಜಾ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ಬಲವಾದ ವದಂತಿಗಳಿವೆ ಮತ್ತು ಕಳೆದೆರಡು ವರ್ಷಗಳಲ್ಲಿ ಅವರು ಅಪರೂಪವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಶೋಯೆಬ್ ಮಲಿಕ್ ಭಾರತೀಯ ಟೆನ್ನಿಸ್ ತಾರೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಕೂಡ ಮಾಡಿದ್ದರು.
ಶೋಯೆಬ್-ಸಾನಿಯಾ ದಂಪತಿಯ ಐದು ವರ್ಷದ ಮಗ ಇಜಾನ್ ಸಾನಿಯಾ ಜೊತೆ ವಾಸಿಸುತ್ತಿದ್ದಾನೆ. ಸಾನಿಯಾ ಮಿರ್ಜಾ ವಿಚ್ಛೇದನ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
"ಇದು 'ಖುಲಾ' ಆಗಿತ್ತು. ನಾನು ಇದಕ್ಕೂ ಮೀರಿ ಪ್ರತಿಕ್ರಿಯಿಸಲು ಬಯಸುವುದಿಲ್ಲ" ಎಂದು ಸಾನಿಯಾ ಮಿರ್ಜಾ ಹೇಳಿದ್ದರು. ಖುಲಾ ತನ್ನ ಪತಿಗೆ ಏಕಪಕ್ಷೀಯವಾಗಿ ವಿಚ್ಛೇದನ ನೀಡುವ ಮುಸ್ಲಿಂ ಮಹಿಳೆಯ ಹಕ್ಕನ್ನು ಉಲ್ಲೇಖಿಸುತ್ತದೆ.
ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಜೋಡಿ 2010ರ ಏಪ್ರಿಲ್‌ನಲ್ಲಿ ಹೈದರಾಬಾದ್‌ನಲ್ಲಿ ವಿವಾಹವಾದರು ಮತ್ತು ಅವರು ದುಬೈನಲ್ಲಿ ವಾಸಿಸುತ್ತಿದ್ದರು. 37ರ ಹರೆಯದ ಸಾನಿಯಾ ಮಿರ್ಜಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸಹ ಅವರು ಒತ್ತಡದಲ್ಲಿದ್ದಾರೆ ಎಂದು ಸೂಚಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications