ಬ್ರೆಂಡನ್ ಮೆಕಲಮ್ ಮೇಲೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕಣ್ಣು: ಕೋಚ್ ರೇಸ್‌ನಲ್ಲಿ ಕಿವೀಸ್ ಮಾಜಿ ಕ್ಯಾಪ್ಟನ್

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಬ್ರೆಂಡನ್ ಮೆಕಲಮ್ , ಇಂಗ್ಲೆಂಡ್ ಕ್ರಿಕೆಟ್ ತಂಡದ ಕೋಚ್ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.
ಸತತ ಟೆಸ್ಟ್ ಪಂದ್ಯಗಳ ಜೊತೆಗೆ, ಕಳೆದ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋಲು ಕಂಡ ಇಂಗ್ಲೆಂಡ್ ತಂಡಕ್ಕೆ ಮಾರ್ಗದರ್ಶನ ನೀಡಲು ಉತ್ತಮ ಕೋಚ್ ಅನ್ನು ಹುಡುಕುತ್ತಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್‌ಗೆ ಮೆಕಲಮ್ ಸರಿಯಾದ ಆಯ್ಕೆಯಾಗಲಿದ್ದಾರೆ.
ಬ್ರಿಟಿಷ್ ಮಾಧ್ಯಮ ವರದಿಯ ಪ್ರಕಾರ ಬ್ರೆಂಡನ್ ಮೆಕಲಮ್ ಮುಂದಿನ ಇಂಗ್ಲೆಂಡ್ ತಂಡದ ಹೆಡ್ ಕೋಚ್ ರೇಸ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ. ಡೈಲಿ ಮೈಲ್ ವರದಿಯಲ್ಲಿ ಪ್ರಕಟಗೊಂಡ ವರದಿ ಪ್ರಕಾರ ''ನ್ಯೂಜಿಲೆಂಡ್ ತಂಡವು ರೆಡ್ ಮತ್ತು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡವಾಗಿ ರೂಪುಗೊಳ್ಳಲು ಮೆಕಲಮ್ ಪಾತ್ರ ತುಂಬಾನೆ ಇದೆ'' ಎನ್ನಲಾಗಿದೆ.
ಹೀಗಾಗಿ ಇತ್ತೀಚೆಗಷ್ಟೇ ಇಂಗ್ಲೆಂಡ್ ಡೈರೆಕ್ಟರ್ ಆಫ್ ಕ್ರಿಕೆಟರ್ ಆಗಿ ಆಯ್ಕೆಗೊಂಡ ರಾಬ್‌ನ ಲಿಸ್ಟ್‌ನಲ್ಲಿ ಸಂಭವನೀಯ ಕೋಚ್ ಆಗಿ ಮೆಕಲಮ್ ಕಾಣಿಸಿಕೊಂಡಿದ್ದಾರೆ.

ಹೆಡ್ ಕೋಚ್ ಅನ್ನು ವಜಾಗೊಳಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್, ಕಳೆದ ಕೆಲವು ತಿಂಗಳ ಹಿಂದೆ ಹೆಡ್ ಕೋಚ್ ಕ್ರಿಸ್ ಸಿಲ್ವರ್‌ವುಡ್‌ರನ್ನ ವಜಾಗೊಳಿಸಿತ್ತು. ಆ್ಯಶಸ್ ಟೆಸ್ಟ್ ಸರಣಿಯಲ್ಲಿ 0-4ರ ಅಂತರದಲ್ಲಿ ಹೀನಾಯ ಸೋಲು ಕಂಡ ಬಳಿಕ ಭಾರೀ ಟೀಕೆಗೆ ಒಳಗಾಗಿದ್ದ ಇಂಗ್ಲೆಂಡ್ ತಂಡದಲ್ಲಿ ಮೇಜರ್ ಸರ್ಜರಿ ನಡೆಯಿತು. ಇಂಗ್ಲೆಂಡ್ ಕ್ರಿಕೆಟ್ ಮ್ಯಾನೇಜಿಂಗ್ ಡೈರೆಕ್ಟರ್ ಆ್ಯಶ್ಲಿ ಗಿಲ್ಸ್ ವಜಾಗೊಂಡ ಬೆನ್ನಲ್ಲೇ ಕೋಚ್ ಅನ್ನು ತಂಡದಿಂದ ಕೈ ಬಿಡಲಾಯಿತು.
ಗುರುತು ಸಿಗದಂತೆ ಮಾಸ್ಕ್ ಧರಿಸಿ ಬೆಂಗಳೂರಿನ ಬೇಕರಿಯಲ್ಲಿ ತಿಂಡಿ ತಿನ್ನಲು ಹೊರಟ ಕೊಹ್ಲಿ; ಆಗಿದ್ದೇನು?

ರಿಕಿ ಪಾಂಟಿಂಗ್ ಕೋಚ್ ಆಗಲಿ ಎಂದ ನಾಸಿರ್ ಹುಸೇನ್
ಇಂಗ್ಲೆಂಡ್‌ನ ಮಾಜಿ ನಾಯಕ ನಾಸಿರ್ ಹುಸೇನ್, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ನೇಮಿಸುವಂತೆ ಇಸಿಬಿಗೆ ಸಲಹೆ ನೀಡಿದ್ದರು. ರಾಷ್ಟ್ರೀಯ ತಂಡದ ಸೆಟ್‌ಅಪ್‌ನಲ್ಲಿ ಆಸೀಸ್‌ನ ಸೇರ್ಪಡೆಗಾಗಿ ಇಂಗ್ಲಿಷ್‌ನ ಬ್ಯಾಟಿಂಗ್ ಅನ್ನು ನೀವು ಆಗಾಗ್ಗೆ ನೋಡುವುದಿಲ್ಲ. ಆದಾಗ್ಯೂ, ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಇಂಗ್ಲೆಂಡ್ ತಂಡವನ್ನು ಮುಂದಕ್ಕೆ ಕೊಂಡೊಯ್ಯಲು ಪಾಂಟಿಂಗ್ ಸೂಕ್ತ ವ್ಯಕ್ತಿ ಎಂದು ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಧೋನಿ, ಹಾರ್ದಿಕ್ ಅಲ್ಲ; ಈ ಐಪಿಎಲ್‌ನ ಬೆಸ್ಟ್ ಕ್ಯಾಪ್ಟನ್ ಈತನೇ ಎಂದ ಮೈಕಲ್ ವಾನ್

ಮೆಕಲಮ್ ಮೇಲೂ ಕಣ್ಣಿಟ್ಟಿದೆ ಇಸಿಬಿ
ಸದ್ಯ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಬ್ರೆಂಡನ್ ಮೆಕಲಮ್ ಮೇಲೆ ಕಣ್ಣಿಟ್ಟಿದೆ. ಸದ್ಯ ಮೆಕಲಮ್ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮೇಲೆ ಕಣ್ಣಿಟ್ಟಿದ್ದು, ವೈಟ್ ಬಾಲ್ ಕ್ರಿಕೆಟ್ ಜೊತೆಗೆ ರೆಡ್ ಬಾಲ್ ಕ್ರಿಕೆಟ್ ಫಾರ್ಮೆಟ್‌ನಲ್ಲಿ ತಂಡವನ್ನ ಕಟ್ಟಲು ಸೂಕ್ತ ವ್ಯಕ್ತಿಯಾಗಿದ್ದಾರೆ.

2015ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನ ಫೈನಲ್‌ಗೇರಿಸಿದ್ದ ಕ್ಯಾಪ್ಟನ್
ಬ್ರೆಂಡನ್ ಮೆಕಲಮ್ 2015ರ ಐಸಿಸಿ 50 ಓವರ್‌ಗಳ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನ ಫೈನಲ್‌ಗೇರಿಸಿದ ಕೀರ್ತಿ ಹೊಂದಿದ್ದಾರೆ. ಅಗ್ರೆಸ್ಸಿವ್ ಟಿ20 ರನ್ ಸ್ಕೋರರ್ ಆಗಿರುವ ಮೆಕಲಮ್, ಇಂಗ್ಲೆಂಡ್ ವೈಟ್ ಬಾಲ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಜೊತೆಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.
ಈ ಎಲ್ಲಾ ಆಯ್ಕೆಗಳಿಂದಾಗಿ ಬ್ರೆಂಡನ್ ಇಂಗ್ಲೆಂಡ್ ಕೋಚ್ ಆಗಲು ಎಲ್ಲಾ ಅರ್ಹತೆಗಳನ್ನ ಹೊಂದಿದ್ದು, ಇಸಿಬಿ ಕ್ರಿಕೆಟ್ ಡೈರೆಕ್ಟರ್ ಆಯ್ಕೆಯ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಬ್ರೆಂಡನ್ ಮೆಕಲಮ್ ನ್ಯೂಜಿಲೆಂಡ್ ತಂಡವನ್ನ ಕಟ್ಟಿದ ರೀತಿಯಿಂದಲೇ ಕೇನ್ ವಿಲಿಯಮ್ಸನ್ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸಹ ಗೆದ್ದರು. ಜೊತೆಗೆ 2019ರ ಐಸಿಸಿ ವಿಶ್ವಕಪ್ ಫೈನಲ್‌ಗೆ ತಂಡವನ್ನ ಕೊಂಡೊಯ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications