For Quick Alerts
ALLOW NOTIFICATIONS  
For Daily Alerts
 

2020ರ ಐಪಿಎಲ್‌ ಚಾಂಪಿಯನ್ಸ್ ಹೆಸರಿಸಿದ ಮಾಜಿ ವೇಗಿ ಬ್ರೆಟ್‌ ಲೀ

Brett Lee picks the winner of IPL 2020

ಸಿಡ್ನಿ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲು ಇನ್ನು ಒಂದು ವಾರವಷ್ಟೇ ಬಾಕಿ ಉಳಿದಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಕಾದಾಡಲಿವೆ. ನಗದು ಶ್ರೀಮಂತ ಟೂರ್ನಿ ಆರಂಭಕ್ಕೂ ಮೊದಲೇ ಈ ಬಾರಿ ಯಾರು ಗೆಲ್ಲಲಿದ್ದಾರೆ ಎಂದು ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್ ಲೀ ಊಹಿಸಿದ್ದಾರೆ.

ಐಪಿಎಲ್‌ ಅಧಿಕೃತ ಪ್ರಸಾರಕದೊಂದಿಗೆ ಸದ್ಯ ಯುಎಇಯಲ್ಲಿರುವ ಲೀ ಐಸೊಲೇಶನ್‌ ಪಾಲಿಸುತ್ತಿದ್ದಾರೆ. ಲೀಯನ್ನು ಇನ್‌ಸ್ಟಾಗ್ರಾಮ್‌ ಪ್ರಶ್ನೋತ್ತರದ ಮೂಲಕ ಸಂಪರ್ಕಿಸಲಾಯಿತು. ಆ ವೇಳೆ ಲೀ ಈ ಬಾರಿ ಐಪಿಎಲ್‌ನಲ್ಲಿ ಗೆಲ್ಲುವ ತಂಡ ಯಾವುದೆಂದು ಹೇಳಿದ್ದಾರೆ.

ಐಪಿಎಲ್‌ 2020ರಲ್ಲಿ ಚಾಂಪಿಯನ್ಸ್ ಆಗಬಲ್ಲ ತಂಡ ಯಾವುದು? ಎಂದು ಪ್ರಶ್ನಿಸಲಾಯಿತು. ಅದಕ್ಕೆ ಉತ್ತರಿಸಿದ ಲೀ, 'ಈ ಪ್ರಶ್ನೆಗೆ ಉತ್ತರಿಸೋದು ತುಂಬಾ ಕಷ್ಟ. ಆದರೆ ನಾನು ಸಿಎಸ್‌ಕೆ ಕಡೆಗೆ ಹೋಗುತ್ತೇನೆ. ಸಿಎಸ್‌ಕೆ ಈ ಬಾರಿ ಗೆಲ್ಲಲಿದೆ,' ಎಂದರು. ಅಷ್ಟೇ ಅಲ್ಲ, ಈ ಬಾರಿ ಸಿಎಸ್‌ಕೆ ಖಂಡಿತಾ ಪ್ಲೇ ಆಫ್‌ಗೆ ಪ್ರವೇಶಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಐಪಿಎಲ್‌ಗಾಗಿ ಯುಎಇಗೆ ಬಂದಿಳಿದ ಕೆಲವೇ ದಿನಗಳಲ್ಲಿ ಸಿಎಸ್‌ಕೆ ತಂಡದಲ್ಲಿ 13 ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇದರಲ್ಲಿ ದೀಪಕ್ ಚಹಾರ್ ಮತ್ತು ಋತುರಾಜ್‌ ಗಾಯಕ್ವಾಡ್‌ ಕೂಡ ಇದ್ದರು. ಈಗ ಎಲ್ಲರೂ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.

Story first published: Thursday, September 10, 2020, 17:34 [IST]
Other articles published on Sep 10, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+